ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ರಾಷ್ಟೀಯ ಐಕ್ಯತಾ ದಿನಾಚರಣೆ

| Published : Nov 21 2024, 01:04 AM IST

ಸಾರಾಂಶ

ಸಾಮಾಜಿಕ ಐಕ್ಯತೆಯ ಹಿನ್ನೆಲೆಯಲ್ಲಿ ಚಳುವಳಿಗಳು ನಡೆದವು. ಐಕ್ಯತೆ ಮತ್ತು ಸಾಮರಸ್ಯದ ಚಳವಳಿಗಳಲ್ಲಿ ಅಹಿಂಸಾ ಚಳವಳಿ ಮಾದರಿಯಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ ಭಾಸ್ಕರ್ ಹೇಳಿದರು.

ಶಿಗ್ಗಾಂವ: ಸಾಮಾಜಿಕ ಐಕ್ಯತೆಯ ಹಿನ್ನೆಲೆಯಲ್ಲಿ ಚಳುವಳಿಗಳು ನಡೆದವು. ಐಕ್ಯತೆ ಮತ್ತು ಸಾಮರಸ್ಯದ ಚಳವಳಿಗಳಲ್ಲಿ ಅಹಿಂಸಾ ಚಳುವಳಿ ಮಾದರಿಯಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ ಭಾಸ್ಕರ್ ಹೇಳಿದರು.

ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ರಾಷ್ಟ್ರೀಯ ಐಕ್ಯತಾ ಸಪ್ತಾಹ ಉದ್ಘಾಟಿಸಿ, ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.

ಐಕ್ಯತಾ ಸಾಮರಸ್ಯದ ದಿನವನ್ನು ಗೌರವದಿಂದ ಆಚರಣೆ ಮಾಡುತ್ತಿದ್ದೇವೆ ಐಕ್ಯತಾ ಸಪ್ತಾಹ ಅಂಗವಾಗಿ ಸರ್ಕಾರದ ನಿರ್ದೇಶನದಂತೆ ಪ್ರಮಾಣೀಕರಿಸಿದ ಐಕ್ಯತಾ ವಚನ ಪ್ರತಿಜ್ಞಾವಿಧಿ ಸ್ವೀಕರಿಸುವ ಜೊತೆಗೆ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ವೆಂಕನಗೌಡ ಪಾಟೀಲ ರಾಷ್ಟ್ರೀಯ ಐಕ್ಯತಾ ದಿನದ ವಿಶೇಷ ಉಪನ್ಯಾಸ ನೀಡಿ, ಸಂವಿಧಾನದ ಆಶಯಗಳಿಗೆ ಧಕ್ಕೆ ಬರುವ ಸನ್ನಿವೇಶಗಳು ಸಮಾಜದಲ್ಲಿ ಸೃಷ್ಟಿ ಆಗುತ್ತಿರುವುದು ಅತ್ಯಂತ ಖೇದದ ಸಂಗತಿಯಾಗಿದೆ ಎಂದರು.

ಜಾತಿಯ ಹೆಸರಿನಲ್ಲಿ ಹಿಂಸೆಗಳು ನಡೆಯುತ್ತಿವೆ. ಜಾತಿ ಹೆಸರಿನಲ್ಲಿ ತಾರತಮ್ಯವಿದೆ, ದೌರ್ಜನ್ಯ ಇದೆ. ಕಾನೂನು ರೀತಿ ಹೋರಾಟ ಒಂದು ಕಡೆ ಆದರೆ ಮನಸ್ಸಿನಲ್ಲಿ ಸಾಂಸ್ಕೃತಿಕ ಬದಲಾವಣೆಗಳಾಗಬೇಕು ಎಂದರು.

ಹಿರಿಯ ಸಂಶೋಧನಾಧಿಕಾ ಡಾ. ಕೆ. ಪ್ರೇಮಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಐಕ್ಯತೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳು ಸಹಕಾರಿ ಆಗಿವೆ ಎಂದರು.

ಸಹಾಯಕ ಕುಲಸಚಿವ ಶಹಜಹಾನ್ ಮುದಕವಿ ಮಾತನಾಡಿದರು. ಎನ್.ಎಸ್.ಎಸ್. ಸಂಯೋಜನಾಧಿಕಾರಿ ಡಾ. ಗಿರೇಗೌಡ ಅರಳಿಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು,

ಸಹಾಯಕ ಪ್ರಾಧ್ಯಾಪಕ ಬಂಡುಸುರೇಶ ಕೆಂಪವಾಡೇಕರ್ ನಿರೂಪಿಸಿದರು, ಕಿರಿಯ ಸಹಾಯಕ ಶರೀಫ ಮಾಕಪ್ಪನವರ ಪ್ರಾರ್ಥಿಸಿದರು, ಸಹಾಯಕ ಪ್ರಾಧ್ಯಾಪಕಿ ಡಾ. ರಜಿಯಾ ನಧಾಪ್ ವಂದಿಸಿದರು.