ಸಾಧಕರನ್ನು ಗೌರವಿಸುವುದರ ಜೊತೆಗೆ ಪ್ರೋತ್ಸಾಹಿಸಿ: ಕೆ.ಎನ್. ಬಸಂತ್ ನಂಜಪ್ಪ

| Published : Mar 27 2024, 01:01 AM IST

ಸಾಧಕರನ್ನು ಗೌರವಿಸುವುದರ ಜೊತೆಗೆ ಪ್ರೋತ್ಸಾಹಿಸಿ: ಕೆ.ಎನ್. ಬಸಂತ್ ನಂಜಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ರೇಸ್ ಕ್ಲಬ್ ನ 133 ವರ್ಷಗಳ ಇತಿಹಾಸದಲ್ಲಿ ವಜ್ರ ಗಣೇಶ್ ಅವರು ಮೊದಲ ಮಹಿಳಾ ಸದಸ್ಯೆಯಾಗಿ ಆಯ್ಕೆಯಾಗಿದ್ದು, ಇದು ನಾವು ಹೆಮ್ಮೆಪಡಬೇಕಾದ ವಿಚಾರವಾಗಿದ್ದು, ಈ ಮೂಲಕ ನಮ್ಮೂರಿನ ಗೌರವವನ್ನು ಅವರು ಹೆಚ್ಚಿಸಿರುವುದು ಸಂತಸದ ವಿಚಾರ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಸಾಧಕರನ್ನು ಗುರುತಿಸಿ ಗೌರವಿಸುವುದರ ಜೊತೆಗೆ ಅವರನ್ನು ಪ್ರೋತ್ಸಾಹಿಸಬೇಕಾದುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ನವ ನಗರ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್ ನಂಜಪ್ಪ ಹೇಳಿದರು.

ಮೈಸೂರು ರೇಸ್ ಕ್ಲಬ್ ಸದಸ್ಯೆಯಾಗಿ ಆಯ್ಕೆಯಾದ ಪಟ್ಟಣದ ಬಸವೇಶ್ವರ ಬಡಾವಣೆಯ ನಿವಾಸಿ ವೈ.ಜಿ. ವಜ್ರಗಣೇಶ್ ಅವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸನ್ಮಾನ ಮತ್ತು ಅಭಿಮಾನ ಎಂಬುದು ಸಂಸ್ಕೃತಿಯ ಪ್ರತೀಕ ಎಂದರು.

ಮೈಸೂರು ರೇಸ್ ಕ್ಲಬ್ ನ 133 ವರ್ಷಗಳ ಇತಿಹಾಸದಲ್ಲಿ ವಜ್ರ ಗಣೇಶ್ ಅವರು ಮೊದಲ ಮಹಿಳಾ ಸದಸ್ಯೆಯಾಗಿ ಆಯ್ಕೆಯಾಗಿದ್ದು, ಇದು ನಾವು ಹೆಮ್ಮೆಪಡಬೇಕಾದ ವಿಚಾರವಾಗಿದ್ದು, ಈ ಮೂಲಕ ನಮ್ಮೂರಿನ ಗೌರವವನ್ನು ಅವರು ಹೆಚ್ಚಿಸಿರುವುದು ಸಂತಸದ ವಿಚಾರ ಎಂದು ತಿಳಿಸಿದರು.

ಇಂತಹ ಸಾಧನೆ ಮಾಡಿರುವ ನಮ್ಮೂರಿನ ಮಗಳನ್ನು ಗೌರವಿಸಲು ನಮಗೆ ಅತೀವ ಸಂತಸವಾಗುತ್ತಿದ್ದು, ಅವರು ಭವಿಷ್ಯದಲ್ಲಿ ರೇಸ್ ಕ್ಲಬ್ ಅಧ್ಯಕ್ಷೆಯಾಗಿ ನೂತನ ದಾಖಲೆ ನಿರ್ಮಾಣ ಮಾಡಲಿ ಎಂದು ಹಾರೈಸಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್ ಮಾತನಾಡಿ, ವಜ್ರಗಣೇಶ್ ಅವರ ಸಾಧನೆ ಇತರರಿಗೆ ಮಾದರಿ ಮತ್ತು ಸ್ಫೂರ್ತಿದಾಯಕವಾಗಿದ್ದು, ಅವರು ಮುಂದೆ ಮತ್ತಷ್ಟು ಉನ್ನತ ಹುದ್ದೆಗಳನ್ನು ಅಲಂಕರಿಸಲಿ ಎಂದು ಆಶಿಸಿದರು.

ಮೈಸೂರು ರೇಸ್ ಕ್ಲಬ್ ಮಾಜಿ ಅಧ್ಯಕ್ಷ ವೈ.ಬಿ. ಗಣೇಶ್, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೈ.ಎಸ್. ಕುಮಾರ್, ವಕೀಲ ಶರತ್ ಅರಸ್, ಕೆ.ಆರ್. ನಗರ ತಾಲೂಕು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸೋಮೇಶ್ ಇದ್ದರು.