ರೈತರು, ಕಾರ್ಮಿಕ ಸಂಘಟನೆಗಳು ಮತ್ತು ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಖಾಸಗೀಕರಣ ವಿರೋಧದ ಪ್ರಮುಖ ಕಾರಣಗಳಾದ ದರ ಏರಿಕೆ ಆತಂಕ, ಖಾಸಗಿಯವರ ಕೈಗೆ ಅಧಿಕಾರ ಹೋದರೆ ವಿದ್ಯುತ್ ದರ ದುಬಾರಿಯಾಗಿ, ಬಡವರು ಮತ್ತು ರೈತರ ಮೇಲೆ ನೇರ ಹೊರೆ ಬೀಳಲಿದೆ.
ಕೆಜಿಎಫ್: ಬೆಸ್ಕಾಂ ಸೇರಿ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆ ಹಾಗೂ ಟಾಟಾ ಪವರ್ ಕಂಪನಿಯು ವಿದ್ಯುತ್ ವಿತರಣೆ ಜವಾಬ್ದಾರಿಯನ್ನು ಕೋರಿ ಸಲ್ಲಿಸಿರುವ ಅರ್ಜಿಗೆ ನವಕರವೇ ರಾಜ್ಯಾಧ್ಯಕ್ಷ ಎಸ್.ಎನ್.ರಾಜಗೋಪಾಲಗೌಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ರೈತರು, ಕಾರ್ಮಿಕ ಸಂಘಟನೆಗಳು ಮತ್ತು ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಖಾಸಗೀಕರಣ ವಿರೋಧದ ಪ್ರಮುಖ ಕಾರಣಗಳಾದ ದರ ಏರಿಕೆ ಆತಂಕ, ಖಾಸಗಿಯವರ ಕೈಗೆ ಅಧಿಕಾರ ಹೋದರೆ ವಿದ್ಯುತ್ ದರ ದುಬಾರಿಯಾಗಿ, ಬಡವರು ಮತ್ತು ರೈತರ ಮೇಲೆ ನೇರ ಹೊರೆ ಬೀಳಲಿದೆ. ಏಕಸ್ವಾಮ್ಯ ವ್ಯವಸ್ಥೆ ರದ್ದಾಗುವುದರಿಂದ ಲಾಭದಾಯಕ ಪ್ರದೇಶಗಳನ್ನು ಮಾತ್ರ ಖಾಸಗಿಯವರು ಆರಿಸಿಕೊಳ್ಳುವ ಅಪಾಯವಿದ್ದು, ಹಾಲಿ ಬೆಸ್ಕಾಂ ನೌಕರರ ಉದ್ಯೋಗ ಭದ್ರತೆ ಮತ್ತು ಪಿಂಚಣಿ ಸೌಲಭ್ಯಗಳಿಗೆ ಕುತ್ತು ಬರುವ ಸಾಧ್ಯತೆ ಇರುವುದರಿಂದ ವಿದ್ಯುತ್ ಕಾಯ್ದೆ-೨೦೦೩ರ ಅಡಿಯಲ್ಲಿ ವಿತರಣೆಯನ್ನು ಖಾಸಗಿಯವರಿಗೆ ವಹಿಸಲು ರಾಜ್ಯದ ಇಂಧನ ಇಲಾಖೆ ಹಾಗೂ ಕೆಇಆರ್‌ಸಿ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದು, ರಾಜ್ಯ ಸರ್ಕಾರದ ಅಂತಿಮ ತೀರ್ಮಾನಕ್ಕೆ ಕಾಯಲಾಗುತ್ತಿದೆ. ಅದ್ದರಿಂದ ಬೆಸ್ಕಾಂ ವಿಭಾಗದಲ್ಲಿ ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ವಿತರಣೆ ಮಾಡಲು ನೀಡಬಾರದೆಂದು ನವಕರವೇ ಅಧ್ಯಕ್ಷರಾದ ಎಸ್.ಎನ್.ರಾಜಗೋಪಾಲಗೌಡ ತಿಳಿಸಿದ್ದಾರೆ.ನಿವೃತ್ತ ಕಾರ್ಮಿಕರ ಸಂಘದ ಅಧ್ಯಕ್ಷರಾದ ಬೆಸ್ಕಾಂ ನಾಗರಾಜ್ ಮಾತನಾಡಿ, ಬೆಸ್ಕಾಂ ಸೇರಿದಂತೆ ಐದೂ ವಿದ್ಯುತ್ ಸರಬರಾಜು ಕಂಪನಿಗಳ ವಿದ್ಯುತ್ ವಿತರಣೆ ಖಾಸಗಿಗೆ ಹೊಣೆಗಾರಿಕೆ ವಹಿಸಲು ಸರ್ಕಾರ ಮುಂದಾಗಿದ್ದು, ಖಾಸಗಿಯವರಿಗೆ ವಿದ್ಯುತ್ ವಿತರಣೆ ನೀಡಿದರೆ ಬಡ ರೈತರು, ಕಾರ್ಮಿಕರು ಬೀದಿಗೆ ಬೀಳುವ ಸಂಭವಿದೆ. ಬೆಸ್ಕಾಂ ಖಾಸಗಿಕರಣಗೊಳಿಸಿದರೆ ತೀವ್ರ ತಹರದ ಹೋರಾಟಕ್ಕೆ ನಾಲ್ಕು ಕಾರ್ಮಿಕರ ವಿಭಾಗಗಳು ಮುಂದಾಗುವ ಸಂಭವವಿದೆ ಎಂದು ಎಚ್ಚರಿಗೆ ನೀಡಿದರು.ಕೆಜಿಎಫ್‌ನ ಬೆಸ್ಕಾಂ ಉಪ ವಿಭಾಗದ ನೌಕರರ ಸಂಘದ ಕಾರ‍್ಯದರ್ಶಿ ಶ್ರೀನಿವಾಸ್.ಪಿ. ಮಾತನಾಡಿ, ಫೆಡರೇಶನ್ ಆಫ್ ಕರ್ನಾಟಕ ಎಲೆಕ್ಟ್ರಿಸಿಟಿ ಬೋರ್ಡ್ ಎಂಪ್ಲಾಯಿಸ್ ಯೂನಿಯನ್ ಈ ಕ್ರಮವನ್ನು ಹಿಂಬಾಗಿಲಿನ ಖಾಸಗೀಕರಣ ಎಂದು ಕರೆದಿದೆ. ಖಾಸಗಿ ಕಂಪನಿಗಳು ಲಾಭದಾಯಕ ಪ್ರದೇಶಗಳನ್ನು ಮಾತ್ರ ಆಕ್ರಮಿಸಿಕೊಂಡು, ಸರ್ಕಾರದ ಸಬ್ಸಿಡಿ ಯೋಜನೆಗಳಿಗೆ ಹೊರೆಯಾಗುತ್ತವೆ ಎಂದು ಆಕ್ಷೇಪಿಸಿ ರಾಜ್ಯವ್ಯಾಪಿ ಪ್ರತಿಭಟನೆಗೆ ಎಚ್ಚರಿಕೆ ನೀಡುವುದಾಗಿ ತಿಳಿಸಿದರು.
ಸಾರ್ವಜನಿಕ ಸೇವೆಗಳ ಆತಂಕ: ಪ್ರಸ್ತುತ ಉದ್ಯಮ ಮತ್ತು ನಗರ ಪ್ರದೇಶದ ಗ್ರಾಹಕರಿಂದ ಬರುವ ಆದಾಯವು, ರೈತರಿಗೆ ಮತ್ತು ಗ್ರಾಮೀಣ ಪ್ರದೇಶದವರಿಗೆ ಉಚಿತ/ಸಬ್ಸಿಡಿ ವಿದ್ಯುತ್ ನೀಡಲು ಬಳಕೆಯಾಗುತ್ತಿದೆ. ಖಾಸಗಿಯವರ ಪ್ರವೇಶದಿಂದ ಈ ಕ್ರಾಸ್-ಸಬ್ಸಿಡಿ ವ್ಯವಸ್ಥೆಗೆ ಹೊಡೆತ ಬೀಳುವ ಆತಂಕ ವ್ಯಕ್ತವಾಗಲಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.೯ಕೆಜಿಎಫ್೩ನವರಕರವೇ ರಾಜ್ಯಾಧ್ಯಕ್ಷ ಎಸ್.ಎನ್.ರಾಜಗೋಪಾಲಗೌಡ, ನಿವೃತ್ತ ಬೆಸ್ಕಾಂ ನಾಗರಾಜ್ ಹಗೂ ನವಕರವೇ ಕಾರ‍್ಯಕರ್ತರು.