ಸಾರಾಂಶ
ಹೊಸಕೋಟೆ: ಚಾಮುಂಡೇಶ್ವರಿ ಮೂರ್ತಿ ಪ್ರತಿಷ್ಠಾಪಿಸಿ ಪ್ರತಿವರ್ಷ ನವರಾತ್ರಿ ಆಚರಿಸಲಾಗುತ್ತದೆ ಎಂದು ಜನನಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಜಯರಾಜ್ ತಿಳಿಸಿದರು.
ಹೊಸಕೋಟೆ: ಚಾಮುಂಡೇಶ್ವರಿ ಮೂರ್ತಿ ಪ್ರತಿಷ್ಠಾಪಿಸಿ ಪ್ರತಿವರ್ಷ ನವರಾತ್ರಿ ಆಚರಿಸಲಾಗುತ್ತದೆ ಎಂದು ಜನನಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಜಯರಾಜ್ ತಿಳಿಸಿದರು. ನಗರದ ಜಯ ಚಾಮರಾಜೇಂದ್ರ ವೃತ್ತದಲ್ಲಿ ಜನನಿ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ 12ನೇ ಚಾಮುಂಡೇಶ್ವರಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನವರಾತ್ರಿ 9 ದಿನ ಶ್ರದ್ಧಾಭಕ್ತಿಯಿಂದ ಪೂಜಿಸಿ ದೇವರನ್ನ ಸ್ಮರಿಸುವುದು ನಮ್ಮ ಹಿಂದೂ ಸಂಪ್ರದಾಯ. ಅದರಂತೆ ಜಯ ಚಾಮರಾಜೇಂದ್ರ ವೃತ್ತದಲ್ಲಿ ಸುಮಾರು 12 ವರ್ಷಗಳಿಂದ ಚಾಮುಂಡೇಶ್ವರಿ ಮೂರ್ತಿ ಪ್ರತಿಷ್ಠಾಪಿಸಿ 10 ದಿನ ಅನ್ನದಾಸೋಹ ಏರ್ಪಡಿಸುವುದು ವಾಡಿಕೆ ಎಂದರು. ಚಾಮುಂಡೇಶ್ವರಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರಿಗೆ ಡಾ.ಸಿ.ಜಯರಾಜ್ ಅವರು ಬಾಗಿನ ಅರ್ಪಿಸಿದರು. ಕುಂಬಳಹಳ್ಳಿ ಗ್ರಾಪಂ ಸದಸ್ಯ ಉಪ್ಪಾರಹಳ್ಳಿ ಪುಟ್ಟರಾಜು ಇತರರಿದ್ದರು.
;Resize=(128,128))
;Resize=(128,128))
;Resize=(128,128))