ಸಾರಾಂಶ
- ಪ್ರತಿ ದಿನ ನವರಾತ್ರಿಯ ವಿಶೇಷ ಧಾರ್ಮಿಕ, ಸಾಂಸ್ಖೃತಿಕ ಕಾರ್ಯಕ್ರಮಗಳು.
ಕನ್ನಡಪ್ರಭ ವಾರ್ತೆ ಶೃಂಗೇರಿದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸೆ.22 ರಿಂದ ಅ. 3 ರವರೆಗೆ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ.
ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಮಠದಲ್ಲಿ ಪ್ರತಿದಿನ ವಿಶೇಷ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮ, ಬೀದಿ ಉತ್ಸವ, ಜಗದ್ಗುರುಗಳ ನವರಾತ್ರಿ ದರ್ಬಾರ್, ಹಗಲು ದರ್ಬಾರ್ ನಡೆಯಲಿದೆ. ನವರಾತ್ರಿಯ 9 ದಿನಗಳ ಶಾರದಾಂಬೆಗೆ ದಿನ ಕ್ಕೊಂದು ಅಲಂಕಾರದಿಂದ ಸಿಂಗರಿಸಲಾಗುತ್ತದೆ.ಸೆ.21 ರ ಭಾನುವಾರ ಭಾದ್ರಪದ ಕೃಷ್ಣ ಅಮವಾಸ್ಯೆ ದಿನ ಶಾರದಾಂಬೆಗೆ ಮಹಾಭಿಷೇಕ ನಡೆಯಲಿದೆ. ಮಹಾಭಿಷೇಕದ ನಂತರ ಶಾರದೆಗೆ ಜಗತ್ ಪ್ರಸೂತಿಕ ಅಲಂಕಾರ ನಡೆಯಲಿದೆ. ಪೀಠದ ಅಧಿದೇವತೆ ಶಾರದೆಗೆ ವಿವಿಧ ಫಲ, ಪಂಚಾಮೃತ ಭಿಷೇಕದ ನಂತರ ಮಹಾನ್ಯಾಸ ಪೂರ್ವಕ ಅಭಿಷೇಕದ ಶತರುದ್ರಾಭಿಷೇಕ ಹಾಗೂ 108 ಸಲ ಶ್ರೀ ಸೂಕ್ತ ಪಠಣದಿಂದ ಅಭಿಷೇಕ ನಡೆಯಲಿದೆ.
ಸೆ. 22 ರಂದು ಶಾರದೆಗೆ ಹಂಸವಾಹನ ಅಲಂಕಾರ, ಪ್ರತೀ ದಿನ ಶ್ರೀ ಮಠದ ಆವರಣದ ಜಗದ್ಗುರು ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ನಡೆದ ಸಾಂಸ್ಕೃತಿಕ ಮಹೋತ್ಸವದಲ್ಲಿ ಬೆಂಗಳೂರಿನ ವಿಧುಷಿ ಶಿವಪ್ರಿಯ ರಾಮಸ್ವಾಮಿ ತಂಡದವರಿಂದ ನಾಮ ಸಂಕೀರ್ತನೆ ನಡೆಯಲಿದೆ. ಸೆ. 23 ರಂದು ಶಾರದೆಗೆ ಬ್ರಾಹ್ಮಿ ಅಲಂಕಾರ, ಸಂಜೆ ಚೆನ್ನೈನ ವಿಧುಷಿ ಸವಿತಾ ಶ್ರೀರಾಮ್ ತಂಡದವರಿಂದ ನಾಮಸಂಕೀರ್ತನೆ ನಡೆಯಲಿದೆ.ಸೆ.24 ರಂದು ಶಾರದೆಗೆ ಮಾಹೇಶ್ವರಿ ಅಲಂಕಾರ. ಸಂಜೆ ಶೃಂಗೇರಿ ಸಿಸ್ಟರ್ಸ್ ತಂಡದವರಿಂದ ಭಕ್ತಿ ಸಂಗೀತ ನಡೆಯಲಿದೆ. ಸೆ. 25ರಂದು ಶಾರದೆಗೆ ಮಯೂರ ವಾಹನಅಲಂಕಾರ ನಡೆಯಲಿದೆ. ಸಂಜೆ ಚೆನೈನ ವಿಧುಷಿ ಭವನೇಶ್ವರಿ ಹಾಗೂ ಕೃತಿಗಾ ತಂಡದವರಿಂದ ನಾಮಸಂಕೀರ್ತನೆ ನಡೆಯಲಿದೆ. ಸೆ.26 ರಂದು ಶಾರದೆಗೆ ವೈಷ್ಣವಿ ಅಲಂಕಾರ ನಡೆಯಲಿದೆ. ಸಂಜೆ ತಿರುನೆವೆಳ್ಳಿ ವಿದ್ವಾನ್ ಐಕುಡಿ ಕುಮಾರ್ ತಂಡದಿಂದ ನಾಮಸಂಕೀರ್ತನೆ ನಡೆಯಲಿದೆ.
ಸೆ. 27 ರಂದು ಶಾರದೆಗೆ ಇಂದ್ರಾಣಿ ಅಲಂಕಾರ. ಶತಚಂಡಯಾಗದ ಪ್ರಯುಕ್ತ ಶಾಲಾಪ್ರವೇಶ, ಪುರಶ್ಚರಣಾಂಬಾ ನಡೆಯಲಿದೆ. ಸಂಜೆ ಪಾಲಕ್ಕಾಡ್ ನ ವಿದ್ವಾನ್ ಶ್ರೀ ಮೇಲರ್ ಕೋಡ್ ರವಿ ತಂಡದವರಿಂದ ನಾಮಸಂಕೀರ್ತನೆ ನಡೆಯಲಿದೆ. ಸೆ. 28 ರಂದು ಶಾರದೆಗೆ ಮೋಹಿನಿ ಅಲಂಕಾರ, ಸಂಜೆ ಬೆಂಗಳೂರಿನ ಹರಿನಾಮದ್ವಾರ್ ತಂಡದವರಿಂದ ನಾಮ ಸಂಕೀರ್ತನೆ ನಡೆಯಲಿದೆ. ಸೆ. 29 ರಂದು ವೀಣಾಶಾರದಾಲಂಕಾರ ನಡೆಯಲಿದ್ದು, ಸಂಜೆ ವೀಣಾವಾದನ ನಡೆಯಲಿದೆ.ಸೆ 30 ರಂದು ಶಾರದೆಗೆ ರಾಜರಾಜೇಶ್ವರಿ ಅಲಂಕಾರ. ಚೆನೈನ ವಿದುಷಿ ಗಾಯಿತ್ರಿ ತಂಡದಿಂದ ನಾಮಸಂಕೀರ್ತನೆ ನಡೆಯಲಿದೆ.ಅ. 1 ರಂದು ಶಾರದೆಗೆ ಸಿಂಹವಾಹಿನಿ ಅಲಂಕಾರ, ಮಹಾನವಮಿ, ಗಜಾಶ್ವಪೂಜೆ, ಶತಚಂಡೀ ಯಾಗದ ಪೂರ್ಣಾಹುತಿ ನಡೆಯಲಿದೆ. ಅ.2 ರಂದು ಶಾರದೆಗೆ ಗಜಲಕ್ಷ್ಮಿ ಅಲಂಕರ, ವಿಜಯ ದಶಮಿ, ವಿಜಯೋತ್ಸವ, ಶಮೀಪೂಜೆ, ಲಕ್ಷ್ಮಿ ನಾರಾಯಣ ಹೃದಯ ಹೋಮ, ರಾಮಪಟ್ಟಾಭಿಷೇಕ ಸರ್ಗ ಪಾರಾಯಣೆ ನೆರವೇರಲಿದೆ. ಅ.3 ರಂದು ಶಾರದೆಗೆ ಗಜಲಕ್ಷ್ಮಿ ಅಲಂಕಾರ, ಶ್ರೀ ಶಾರದಾಂಬಾ ಮಹಾರಥೋತ್ಸವ, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ, ಜಗದ್ಗುರುಗಳ ನವರಾತ್ರಿ ಹಗಲು ದರ್ಬಾರ್ ನಡೆಯಲಿದೆ.
14 ಶ್ರೀ ಚಿತ್ರ 1-ಶೃಂಗೇರಿ ಶ್ರೀ ಶಾರದಾ ಪೀಠ