ರಾಜೀವ್ ಇಂಜಿನಿಯರಿಂಗ್ ಕಾಲೇಜಿಗೆ ಎನ್ ಬಿಎ ಮಾನ್ಯತೆ

| Published : Jul 07 2024, 01:26 AM IST

ಸಾರಾಂಶ

ಕಳೆದ ಹದಿನೇಳು ವರ್ಷಗಳಿಂದ ಅತ್ಯುತ್ತಮ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ನೀಡುತ್ತಾ ಬಂದಿರುವ ರಾಜೀವ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರತಿ ವರ್ಷ ವಿದ್ಯಾರ್ಥಿಗಳು ವಿಶ್ವ ವಿದ್ಯಾಲಯದ ಮಟ್ಟದಲ್ಲಿ ಅನೇಕ ರ್‍ಯಾಂಕ್‌ಗಳ ಜೊತೆಗೆ ಉತ್ತಮ ಶ್ರೇಣಿಯ ಫಲಿತಾಂಶ ಪಡೆಯುತ್ತಿರುವುದು ಮಾನ್ಯತೆಗೆ ಹಿಡಿದ ನಿದರ್ಶನವಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ನಗರದ ರಾಜೀವ್ ಇಂಜಿನಿಯರಿಂಗ್ ಕಾಲೇಜಿಗೆ ಪ್ರತಿಷ್ಠಿತ ಎನ್.ಬಿ.ಎ - ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಷನ್ ಮಾನ್ಯತೆ ದೊರೆತಿದೆ. ಶೈಕ್ಷಣಿಕ ಗುಣಮಟ್ಟದ ಆಧಾರದ ಮೇಲೆ ನೀಡಲಾಗುವ ರಾಷ್ಟ್ರೀಯ ಮಾನ್ಯತೆ ಕಾಲೇಜಿಗೆ ದೊರಕಿದೆ.

ಮೇ ತಿಂಗಳಿನಲ್ಲಿ ಎನ್.ಬಿ.ಎ ತಂಡ ಕಾಲೇಜಿಗೆ ಭೇಟಿ ನೀಡಿತ್ತು. ಎಲೆಕ್ಟ್ರಾನಿಕ್ಸ್ ಅ್ಯಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ಮತ್ತು ಇನ್ಫರ್‌ಮೇಶನ್ ಸೈನ್ಸ್ ಅ್ಯಂಡ್ ಇಂಜಿನಿಯರಿಂಗ್ ವಿಭಾಗದಲ್ಲಿನ ಸಿಬ್ಬಂದಿ ವರ್ಗದವರ ಬೋಧನಾ ಸಾಮರ್ಥ್ಯ, ವಿದ್ಯಾರ್ಥಿಗಳಿಗೆ ನೀಡಲಾಗಿರುವ ಸವಲತ್ತುಗಳು ಹಾಗೂ ವಿಭಾಗದ ಶೈಕ್ಷಣಿಕ ಪರಿಸರ ಇವೇ ಮೊದಲಾದ ಮಾನದಂಡಗಳನ್ನು ಪರಿಶೀಲಿಸಿ, ಎನ್.ಬಿ.ಎ ಮಾನ್ಯತೆಗೆ ಶಿಫಾರಸ್ಸು ಮಾಡಲಾಗಿತ್ತು. ಮುಂದಿನ ಮೂರು ವರ್ಷಗಳ ಅವಧಿಗೆ ಎನ್.ಬಿ.ಎ ರಾಷ್ಟ್ರೀಯ ಮಾನ್ಯತೆಯನ್ನು ಕಾಲೇಜಿಗೆ ನೀಡಿದೆ.

ಕಳೆದ ಹದಿನೇಳು ವರ್ಷಗಳಿಂದ ಅತ್ಯುತ್ತಮ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ನೀಡುತ್ತಾ ಬಂದಿರುವ ರಾಜೀವ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರತಿ ವರ್ಷ ವಿದ್ಯಾರ್ಥಿಗಳು ವಿಶ್ವ ವಿದ್ಯಾಲಯದ ಮಟ್ಟದಲ್ಲಿ ಅನೇಕ ರ್‍ಯಾಂಕ್‌ಗಳ ಜೊತೆಗೆ ಉತ್ತಮ ಶ್ರೇಣಿಯ ಫಲಿತಾಂಶ ಪಡೆಯುತ್ತಿರುವುದು ಮಾನ್ಯತೆಗೆ ಹಿಡಿದ ನಿದರ್ಶನವಾಗಿದೆ.

ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳು ಕ್ಯಾಂಪಸ್ ಆಯ್ಕೆಯ ಮೂಲಕ ತಮ್ಮ ಉದ್ಯೋಗಗಳನ್ನು ಕಾಲೇಜಿನಿಂದ ಪಡೆದುಕೊಳ್ಳುತ್ತಿದ್ದಾರೆ. ಶೈಕ್ಷಣಿಕ ಕಲಿಕೆಯ ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯತ್ತ ಕೇಂದ್ರೀಕೃತವಾಗಿರುವುದು ಕಾಲೇಜಿನ ವಿಶೇಷ.

ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಷನ್ ನಿಂದ ಮಾನ್ಯತೆ ಪಡೆಯಲು ಶ್ರಮಿಸಿದ ಕಾಲೇಜಿನ ಪ್ರಾಂಶುಪಾಲ, ಎಲೆಕ್ಟ್ರಾನಿಕ್ಸ್ ಅ್ಯಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ಮತ್ತು ಇನ್ಫರ್‌ಮೇಶನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಿಗೆ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಆಂತರಿಕ ಗುಣಮಟ್ಟದ ವಿಭಾಗ ಹಾಗೂ ಕಾಲೇಜಿನ ಎಲ್ಲಾ ವಿಭಾಗದ ಸಿಬ್ಬಂದಿ ವರ್ಗದವರಿಗೆ ರಾಜೀವ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಾ. ರಚನಾ ರಾಜೀವ್ ಹಾಗೂ ಅಡಳಿತ ಮಂಡಳಿ ಅಭಿನಂದಿಸಿದ್ದಾರೆ.

೨೦೨೪-೨೫ನೇ ಸಾಲಿಗೆ ಅನ್ವಯಿಸುವಂತೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅ್ಯಂಡ್ ಡಾಟಾ ಸೈನ್ಸ್ ಎಂಬ ಹೊಸ ಕೋರ್ಸನ್ನು ಪ್ರಾರಂಭಿಸಲು ದೆಹಲಿಯ ಎಐಸಿಟಿಯು ಅನುಮತಿ ನೀಡಿದೆ. ಅಲ್ಲದೆ ಕಂಪ್ಯೂಟರ್ ಸೈನ್ಸ್ ಅ್ಯಂಡ್ ಇಂಜಿನಿಯರಿಂಗ್ ಹಾಗೂ ಎಂಬಿಎ ವಿಭಾಗಕ್ಕೆ ಹೆಚ್ಚುವರಿಯಾಗಿ ೬೦ ಸೀಟುಗಳನ್ನು ಸಹ ಮಂಜೂರು ಮಾಡಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಪಿ. ಕೆ. ಮಹೇಶ್ ತಿಳಿಸಿದ್ದಾರೆ.