ನಗರ ಹೊರವಲಯದ ಎಸ್ಪಿ ಕಚೇರಿ ಬಳಿಗೆ ಸೋಮವಾರ ತೆರಳಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ನೇತೃತ್ವದಲ್ಲಿ ಎನ್ ಡಿಎ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆಗೆ ಶಾಸಕ ಪ್ರದೀಪ ಈಶ್ವರ್ ವಿರುದ್ಧ ಲಿಖಿತ ದೂರು ನೀಡಿದರು.
ಚಿಕ್ಕಬಳ್ಳಾಪುರ : ಶನಿವಾರ ನಗರದ ಕನ್ನಡ ಭವನದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯಂದು ನಡೆದ ಗಲಭೆಗೆ ಶಾಸಕ ಪ್ರದೀಪ ಈಶ್ವರ್ ಕಾರಣ ಎಂದು ಆರೋಪಿಸಿ ಎನ್ ಡಿಎ ಮಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದರು.
ಎನ್ ಡಿಎ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆಗೆ ದೂರು
ನಗರ ಹೊರವಲಯದ ಎಸ್ಪಿ ಕಚೇರಿ ಬಳಿಗೆ ಸೋಮವಾರ ತೆರಳಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ನೇತೃತ್ವದಲ್ಲಿ ಎನ್ ಡಿಎ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆಗೆ ಶಾಸಕ ಪ್ರದೀಪ ಈಶ್ವರ್ ವಿರುದ್ಧ ಲಿಖಿತ ದೂರು ನೀಡಿದರು.
ಶಾಸಕರು ತಮ್ಮ ಅಧಿಕಾರ ದುರ್ಬಳಕೆ
ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಮಾತನಾಡಿ, ಶನಿವಾರ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ದಿನಾಚರಣೆ ಕಾರ್ಯಕ್ರಮದಲ್ಲಿ ಅನ್ಯ ವಿಷಯಗಳಿಗೆ ಚಿಕ್ಕಬಳ್ಳಾಪುರ ಶಾಸಕರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಲ್ಲಿ ಸೇರಿದ್ದ ಯುವಕರಿಗೆ ಕಾರ್ಯಕ್ರಮವನ್ನು ವೈಫಲ್ಯಗೊಳಿಸಬೇಕೆಂದು ಹಾಗೂ ಪ್ರಚಾರ ಪ್ರಿಯತೆಗಾಗಿ ಸಮುದಾಯದ ಹುಡುಗರನ್ನು ಪ್ರಚೋಚನೆ ಮಾಡಿದ ಪರಿಣಾಮ ಗಲಭೆಗೆ ಸಂಪೂರ್ಣ ಕಾರಣ ಶಾಸಕ ಪ್ರದೀಪ್ ಈಶ್ವರ್ ಅವರೇ ಆಗಿದ್ದಾರೆ.
ಈ ಕೂಡಲೇ ಅವರನ್ನು ಮೋದಲನೇ ಆರೋಪಿಯಾಗಿ ಮಾಡುವ ಮೂಲಕ ಕಾನೂನು ಸಮಾಜದಲ್ಲಿ ಎಲ್ಲರಿಗೂ ಒಂದೇ ಎಂಬುದನ್ನು ಸಾಬೀತು ಮಾಡಬೇಕೆಂದು ಆಗ್ರಹಿಸಿದರು. ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತಮುನಿಯಪ್ಪ, ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ, ಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್, ಮುಖಂಡರಾದ ಆವುಲ ಕೊಂಡರಾಯಪ್ಪ, ಚಿಕ್ಕಗರಿಗರೆಡ್ಡಿ, ಡಿ.ಎ.ಶ್ರೀನಿವಾಸಲು, ಚನ್ನಕೇಶವರೆಡ್ಡಿ, ಮತ್ತಿತರರು ಇದ್ದರು.