ಸಾರಾಂಶ
ಕರ್ನಾಟಕದಂತೆ ಈ ಭಾರಿ ಕಾಂಗ್ರೆಸ್, ಆರ್ ಜೆಡಿ ಮೈತ್ರಿಯೊಂದಿಗೆ ಅಧಿಕಾರಕ್ಕೆ ಬರುವ ಕನಸು ಈಡೇರಲು ಬಿಹಾರ ಮತದಾರರು ಬಿಟ್ಟಿಲ್ಲ.
ಕನಕಗಿರಿ: ಬಿಹಾರ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ ಇಲ್ಲಿನ ವಾಲ್ಮೀಕಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಮಾತನಾಡಿ, ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಆರ್.ಜೆಡಿ ಪಕ್ಷಗಳು ಜನರಿಗೆ ಮಂಕುಬೂದಿ ಹಚ್ಚುವುದಕ್ಕಾಗಿ ಬಿಟ್ಟಿ ಭಾಗ್ಯಗಳ ಘೋಷಣೆಯ ಮೂಲಕ ಆಸೆ ಹುಟ್ಟಿಸಿದ್ದವು. ಕರ್ನಾಟಕದಂತೆ ಈ ಭಾರಿ ಕಾಂಗ್ರೆಸ್, ಆರ್ ಜೆಡಿ ಮೈತ್ರಿಯೊಂದಿಗೆ ಅಧಿಕಾರಕ್ಕೆ ಬರುವ ಕನಸು ಈಡೇರಲು ಬಿಹಾರ ಮತದಾರರು ಬಿಟ್ಟಿಲ್ಲ. ಎನ್ ಡಿಎ ಮೈತ್ರಿಕೂಟಕ್ಕೆ ಹಕ್ಕು ಚಲಾಯಿಸಿದ ಮತದಾರರು ವಿರೋಧ ಪಕ್ಷಗಳಿಗೆ ಸರಿಯಾದ ಉತ್ತರ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಅಭಿವೃದ್ಧಿಗೆ ಹಣ ಇಲ್ಲದ ಪರಿಸ್ಥಿತಿ ನಮಗೂ ಬರಬಾರದು ಎನ್ನುವ ಕಾರಣಕ್ಕೆ ಬಿಹಾರದ ಜನತೆ ಎಚ್ಚೆತ್ತು ಬಿಜೆಪಿ ಹಾಗೂ ಜೆಡಿಯುಗೆ ಬೆಂಬಲಿಸಿ ಪ್ರಧಾನಿ ಮೋದಿ ಕೈ ಬಲಪಡಿಸಿದ್ದಾರೆ ಎಂದರು.ಮುಖಂಡರಾದ ವಾಗೀಶ ಹಿರೇಮಠ, ಮಹಾಂತೇಶ ಸಜ್ಜನ್ ಮಾತನಾಡಿದರು.
ಪ್ರಮುಖರಾದ ಶೇಷಪ್ಪ ಪೂಜಾರ, ಗ್ಯಾನಪ್ಪ ಗಾಣದಾಳ, ಅರುಣ್ ಭೂಸನೂರುಮಠ, ರುದ್ರಪ್ಪ ದೇವರೆಡ್ಡಿ, ಹನುಮಂತ ಬಸಗಿರಿಡ, ಮಲ್ಲಯ್ಯಸ್ವಾಮಿ ಬೆನಕನಾಳ, ಹನುಮೇಶ ಯಲಬುರ್ಗಿ, ಮಂಜುನಾಥ ಚೂಡಾಮಣಿ, ರಾಚಪ್ಪ ಬ್ಯಾಳಿ, ಶರಣಪ್ಪ ಭಾವಿಕಟ್ಟಿ ಇತರರಿದ್ದರು.;Resize=(128,128))
;Resize=(128,128))
;Resize=(128,128))