ಸಾರಾಂಶ
ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿವರ್ಷ ಕೊಡಮಾಡುವ ಜಿಲ್ಲೆಯ ಪ್ರತಿಷ್ಠಿಯ ದತ್ತಿ ಪುಸ್ತಕ ಪ್ರಶಸ್ತಿಗಳಲ್ಲೊಂದಾದ ಕಲಾದಗಿ ಹೂಗಾರ ದತ್ತಿ ಪುಸ್ತಕ ಪ್ರಶಸ್ತಿ ''ಪ್ರದಾನ ಸಮಾರಂಭ
ಕನ್ನಡಪ್ರಭ ವಾರ್ತೆ ಕಲಾದಗಿಸಮಾಜ ತಿದ್ದುವ ಶಕ್ತಿ ಇರುವ ಕಾವ್ಯಗಳ ಸೃಷ್ಟಿ ಇಂದಿನ ಅತ್ಯಗತ್ಯವಾಗಿದೆ ಎಂದು ಹಿರಿಯ ಶಿಕ್ಷಣ ಚಿಂತಕ ಎಸ್.ಆರ್.ಮನಹಳ್ಳಿ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿ ಬುಧವಾರ ನಡೆದ ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿವರ್ಷ ಕೊಡಮಾಡುವ ಜಿಲ್ಲೆಯ ಪ್ರತಿಷ್ಠಿಯ ದತ್ತಿ ಪುಸ್ತಕ ಪ್ರಶಸ್ತಿಗಳಲ್ಲೊಂದಾದ ಕಲಾದಗಿ ಹೂಗಾರ ದತ್ತಿ ಪುಸ್ತಕ ಪ್ರಶಸ್ತಿ ''''ಪ್ರದಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಧರ್ಮ, ಶಿಕ್ಷಣ ಹಾಗೂ ಸಾಹಿತ್ಯದಿಂದ ದೂರಾದರೆ ಸಮಾಜದ ಏಳಿಗೆ ಸಾಧ್ಯವಿಲ್ಲ ಎಂದರು.ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಟಿ.ಪಾಟೀಲ ಪಾಂಡಪ್ಪ ಹೂಗಾರ ಅವರು ಕ್ರಿಯಾಶೀಲ ಲೇಖಕ ಪ್ರಶಸ್ತಿಯನ್ನು ಎಸ್.ಬಿ.ಮಾಳಗೊಂಡ, ಡಾ.ಮುರ್ತುಜಾ ಒಂಟಿ, ಡಾ.ಬಸವನಗೌಡ ಬಿರಾದಾರ, ಯೋಗೀಶ ಲಮಾಣಿ ಹಾಗೂ ಗಂಗಾಧರ ಅವಟೇರ ಹಾಗೂ ಕ್ರಿಯಾಶೀಲ ಲೇಖಕಿ ಪ್ರಶಸ್ತಿಯನ್ನು ದಾನೇಶ್ವರಿ ಸಾರಂಗಮಠ, ಡಾ.ವಿಜಯಶ್ರೀ ಇಟ್ಟಣ್ಣವರ, ಶೈಲಜಾ ಅವರುಗಳಿಗೆ ಪ್ರದಾನ ಮಾಡಿದರು.
ಪತ್ರಕರ್ತ ದ.ರಾ.ಪುರೋಹಿತ, ಸಾಹಿತಿ ಕಿರಣ ಬಾಳಾಗೋಳ ಅಭಿನಂದನಾ ನುಡಿಗಳನ್ನಾಡಿದರು. ರನ್ನ ಬೆಳಗಲಿಯ ಮಹಾಲಿಂಗ ಶಾಸ್ತ್ರಿಗಳು ಉಪನ್ಯಾಸ ನೀಡಿದರು. ಜಿಲ್ಲಾ ಕಸಾದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ್ ಡಾ.ಎಚ್.ಜಿ.ಮಹಾಂತೇಶ, ದತ್ತಿ ದಾನಿಗಳಾದ ಎಸ್.ಎಲ್.ಹೂಗಾರ, ಎಂ.ಎಲ್.ಹೂಗಾರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಾಗಲಕೋಟೆ ತಾಲೂಕು ಕಸಾಪ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ ಸ್ವಾಗತಿಸಿದರು. ಕಸಾಪದ ಕಲಾದಗಿ ವಲಯ ಘಟಕದ ಅಧ್ಯಕ್ಷ ಲಕ್ಷ್ಮಣ ಅಂಕಲಗಿ ವಂದಿಸಿದರು. ಉಪನ್ಯಾಸಕ ಬಾಬು ಪೂಜಾರಿ ನಿರೂಪಿಸಿದರು.