ಸಾರಾಂಶ
ಮುಳಬಾಗಿಲು: ಆವನಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ಅಪಾರ ನಷ್ಟವಾಗಿದೆ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಸಂತಾಪ ವ್ಯಕ್ತಪಡಿಸಿದರು. ಕಾಂಗ್ರೆಸ್ ಕಚೇರಿಯಲ್ಲಿ ಎಂ.ಸಿ.ನೀಲಕಂಠೇಗೌಡರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಮುಳಬಾಗಿಲು ಕ್ಷೇತ್ರದಲ್ಲಿ ನಾನು ಶಾಸಕನಾಗಲು ಮತ್ತು ರಾಜಕೀಯವಾಗಿ ಬೆಳೆಯಲು ನೀಲಕಂಠೇಗೌಡರ ಪಾತ್ರ ಪ್ರಮುಖವಾಗಿತ್ತು, ಪ್ರತಿಯೊಂದು ಚುನಾವಣೆಯಲ್ಲೂ ಅವರು ನನ್ನನ್ನು ಪ್ರೇರೇಪಿಸುತ್ತಿದ್ದರು, ಅವರ ಕುಟುಂಬದ ಸದಸ್ಯರಲ್ಲಿ ನಾನೂ ಸಹ ಒಬ್ಬನಾಗಿದ್ದೇನೆ. ಅವರ ಕನಸುಗಳನ್ನು ನನಸು ಮಾಡಲು ನಾನು ಮತ್ತು ಆದಿನಾರಾಯಣ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು. ಕಾಂಗ್ರೆಸ್ ಮುಖಂಡ ವಿ.ಆದಿನಾರಾಯಣ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಎಂ.ಸಿ.ನೀಲಕಂಠೇಗೌಡರು ಮುಖ್ಯ ಶಿಕ್ಷಕರಂತೆ ಕೆಲಸ ನಿರ್ವಹಿಸುತ್ತಿದ್ದರು, ಅಫೆಕ್ಸ್ ಬ್ಯಾಂಕ್ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಉತ್ತಮ ಸೇವೆ ನಿರ್ವಹಿಸಿದ್ದಾರೆಂದು ಸ್ಮರಿಸಿದರು. ಅವರ ಆಸೆಯಂತೆ ಕಾಂಗ್ರೆಸ್ ಭವನ ನಿರ್ಮಾಣ ಮಾಡಲು ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇನೆ ಎಂದರು. ಪಕ್ಷದಲ್ಲಿ ಗುಂಪುಗಾರಿಕೆ ನಿವಾರಣೆ ಮಾಡಬೇಕು, ಗುಂಪುಗಾರಿಕೆ ನಡೆಸುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಶಾಸಕ ಕೊತ್ತೂರು ಮಂಜುನಾಥ್‌ರಲ್ಲಿ ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡರಾದ ಉತ್ತನೂರು ಶ್ರೀನಿವಾಸ್, ಆಲಂಗೂರು ಶಿವಣ್ಣ, ಜಿ.ರಾಮಲಿಂಗ ರೆಡ್ಡಿ, ಆರ್.ಆರ್.ರಾಜೇಂದ್ರ ಗೌಡ, ಟೌನ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮಾನುಲ್ಲಾ, ಮುನಿಯಾ ಆಂಜಪ್ಪ, ತಾಪಂ ಮಾಜಿ ಅಧ್ಯಕ್ಷರಾದ ಎಂ.ವೆಂಕಟರಮಣ, ಸಿ.ವಿ.ಗೋಪಾಲ್, ಮುಖಂಡರಾದ ಎಂ.ಗೋಪಾಲ್, ದ್ಯಾಮಣ್ಣ, ಕಾರ್ಗಿಲ್ ವೆಂಕಟೇಶ್, ಚನ್ನಾಪುರ ವೆಂಕಟೇಶ್‌ಗೌಡ, ಪೆದ್ದಪ್ಪಯ್ಯ, ಮಂಡಿಕಲ್ ಚಲಪತಿ, ಮಂಡಿಕಲ್ ಮಂಜುನಾಥ್, ತಾವರೆಕೆರೆ ನಾರಾಯಣರೆಡ್ಡಿ, ಪುರಸಭೆ ಮಾಜಿ ಸದಸ್ಯ ಎನ್.ರಾಜಶೇಖರ್, ಉಮಾಶಂಕರ್, ಸನ್ಯಾಸ್ಪಲ್ ರಾಜು, ವಕೀಲ ಸೊಣ್ಣೇಗೌಡ, ದೇವರಾಯಸಮುದ್ರ ರಾಜು, ನಾಗರಾಜ್ ರೆಡ್ಡಿ, ಸಿದ್ಘಟ್ಟ ಮುನಿಸ್ವಾಮಿಗೌಡ, ವಿ.ಮಾರಪ್ಪ, ಯುವ ಕಾಂಗ್ರೆಸ್‌ನ ಎಂ.ಎನ್.ಅಭಿಷೇಕ್, ವೇಣು ಕುಮಾರ್, ಗುಮ್ಮಕಲ್ ಮಂಜುನಾಥ್, ಕೆ.ವಿ.ಸೂರ್ಯ ಇದ್ದರು.