ಸಾರಾಂಶ
ಸುಮಾರು 125 ವರ್ಷದ ಬೇವಿನಮರವೊಂದು ಇದ್ದಕ್ಕಿದ್ದಂತೆ ನೆಲಕ್ಕುರಳಿದ್ದು, ಮನೆ, ಕಾರು, ಬೈಕ್, ಸೈಕಲ್ ಜಖಂಗೊಂಡ ಘಟನೆ ತಾಲೂಕಿನ ಹುಸೇನ್ ಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಪಾವಗಡ
ಸುಮಾರು 125 ವರ್ಷದ ಬೇವಿನಮರವೊಂದು ಇದ್ದಕ್ಕಿದ್ದಂತೆ ನೆಲಕ್ಕುರಳಿದ್ದು, ಮನೆ, ಕಾರು, ಬೈಕ್, ಸೈಕಲ್ ಜಖಂಗೊಂಡ ಘಟನೆ ತಾಲೂಕಿನ ಹುಸೇನ್ ಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.ಮರದ ಕೆಳಭಾಗದಲ್ಲಿರುವ ನರಸಿಂಹಪ್ಪ ಎಂಬುವರಿಗೆ ಸೇರಿದ್ದ ಮನೆ, ನಾಗರಾಜ್‌ಗೆ ಸೇರಿದ ಕಾರು, ಬೈಕ್, ಸೈಕಲ್ ಜಖಂಗೊಂಡಿವೆ. ಅಕ್ಕಲಪ್ಪಗೆ ಸೇರಿದ ಅಂಗಡಿ ನೆಲಸಮವಾಗಿದ್ದು, ಮರ ಉರಳುವ ವೇಳೆ ಸ್ಥಳದಲ್ಲಿದ್ದ ನಾಲ್ಕೈದು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಮೀಪದಲ್ಲಿದ್ದ ಮಸೀದಿ ದೇವಸ್ಥಾನವು ಜಖಂಗೊಂಡಿದೆ. ಸ್ಥಳಕ್ಕೆ ಕಂದಾಯ ನಿರೀಕ್ಷಕ ನಾರಾಯಣಪ್ಪ, ಗ್ರಾಮಲೆಕ್ಕಿಗ, ಗ್ರಾಪಂ ಅಧ್ಯಕ್ಷ , ಪಿಡಿಒ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.