ಈಜಲು ತೆರಳಿದ್ದ ಹಾಸ್ಟೆಲ್ ವಿದ್ಯಾರ್ಥಿ ನೀರುಪಾಲು

| Published : Nov 17 2025, 01:30 AM IST

ಈಜಲು ತೆರಳಿದ್ದ ಹಾಸ್ಟೆಲ್ ವಿದ್ಯಾರ್ಥಿ ನೀರುಪಾಲು
Share this Article
  • FB
  • TW
  • Linkdin
  • Email

ಸಾರಾಂಶ

ಈಜಲು ತೆರಳಿದ್ದ ಹಾಸ್ಟೆಲ್ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿದ್ದು ಪಟ್ಟಣದ ಅಗಸನಹಳ್ಳಿ ಜಿಟ್ಟಿಕಟ್ಟೆ ಕೆರೆಯಲ್ಲಿ ಭಾನುವಾರ ಮಧ್ಯಾಹ್ನ 4 ಗಂಟೆಯ ಸುಮಾರಿಗೆ ನಡೆದಿದೆ. ಅದೃಷ್ಟವಶಾತ್ 5 ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.

ಬ್ಯಾಡಗಿ:ಈಜಲು ತೆರಳಿದ್ದ ಹಾಸ್ಟೆಲ್ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿದ್ದು ಪಟ್ಟಣದ ಅಗಸನಹಳ್ಳಿ ಜಿಟ್ಟಿಕಟ್ಟೆ ಕೆರೆಯಲ್ಲಿ ಭಾನುವಾರ ಮಧ್ಯಾಹ್ನ 4 ಗಂಟೆಯ ಸುಮಾರಿಗೆ ನಡೆದಿದೆ. ಅದೃಷ್ಟವಶಾತ್ 5 ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.

ಮೃತ ಬಾಲಕ ಹಾನಗಲ್ಲ ತಾಲೂಕು ಲಕಮಾಪುರ ಗ್ರಾಮದ ರಾಹುಲ್ ಸೊಟ್ಟಣ್ಣನವರ (17) ತಿಳಿದು ಬಂದಿದ್ದು, ಈತ ಶಿಡೇನೂರಿನ ಡಾ. ಬಿ.ಆರ್. ಅಂಬೇಡ್ಕರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ. ಪಟ್ಟಣದ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಪ್ರವೇಶ ಪಡೆದುಕೊಂಡಿದ್ದ ಎಂದು ತಿಳಿದು ಬಂದಿದೆ.

ಘಟನೆ ಹಿನ್ನೆಲೆ: ವಸತಿ ನಿಲಯದ ವಾರ್ಡನ್‌ ಪ್ರಕಾಶ ಸೂರಣಗಿ ಹೆಂಡತಿಯ ಹೆರಿಗೆಗೆಂದು ರಜೆ ಮೇಲೆ ತೆರಳಿದ್ದರು. ಯಾರೂ ಇಲ್ಲದ ಸಮಯ ಒಟ್ಟು 6 ವಿದ್ಯಾರ್ಥಿಗಳು ಈಜಲೆಂದು ಅಗಸನಹಳ್ಳಿಯ ಜಿಟ್ಟಿಕಟ್ಟೆ ಕೆರೆಗೆ ತೆರಳಿದ್ದರು ಎನ್ನಲಾಗುತ್ತಿದೆ. ಅರ್ಧಂಬರ್ಧ ಈಜು ಬರುತ್ತಿದ್ದು, ಈತ ತನಗೆ ಅರಿವಿಲ್ಲದೇ ಗುಂಡಿಯಲ್ಲಿ ಮುಂದೆ ಹೋಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪತ್ತೆಯಾಗದ ಬಾಲಕನ ಶವ: ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿ ಪೊಲೀಸರು ಶವವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದೀಗ ಈಜು ತಜ್ಞರು ಮೊರೆ ಹೋಗಿರುವ ಪೊಲೀಸರು ನಾಳೆ ಮೃತದೇಹಕ್ಕೆ ಹುಡುಕಾಟ ನಡೆಸಲಿದ್ದಾರೆ.ಮಂಗಳೂರಿನಲ್ಲಿರುವ ಪೋಷಕರು: ಮೃತ ಬಾಲಕ ರಾಹುಲ್‌ನ ಪೋಷಕರು ದುಡಿಮೆ ಮಾಡಲೆಂದೇ ಮಂಗಳೂರಿಗೆ ತೆರಳಿದ್ದಾಗಿ ತಿಳಿದು ಬಂದಿದೆ. ಆದರೆ ಅದೇ ವಸತಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಮೃತನ ಸಹೋದರ ಹೇಳಿಕೆ ಮೇರೆಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.