ನೀಟ್ ಪರೀಕ್ಷೆ: ದಿಶಾ ಕಾಲೇಜಿನ ಸಾಯಿರಾಮರೆಡ್ಡಿಗೆ 618 ಅಂಕ

| Published : Jun 06 2024, 12:32 AM IST

ಸಾರಾಂಶ

ರಾಷ್ಟ್ರಮಟ್ಟದ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನೀಟ್ ನಲ್ಲಿ ದಿಶಾ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಳೆದ ಮೇ ತಿಂಗಳಲ್ಲಿ ವೈದ್ಯಕೀಯ ಕೋರ್ಸ್‌ಗಳಿಗೆ ನಡೆದಿರುವ ರಾಷ್ಟ್ರಮಟ್ಟದ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನೀಟ್ ನಲ್ಲಿ ದಿಶಾ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಸಾಯಿರಾಮ ರೆಡ್ಡಿ (618), ಎಮ್. ಬಿಲ್ಲಾಡ್(616), ದಿನೇಶ ಬಿ (593), ಪ್ರಶಾಂತ ಶ್ರೀಶೈಲ್(505), ವೆಂಕಟೇಶ ಎಸ್. (465), ರಾಜಕುಮಾರ ಶರಣಪ್ಪಾ (445), ಗಂಗಾ ಲೋಹಾರ (441), ಸುಹಾಸಿನಿ ಮಾಲಿಪಾಟೀಲ(426), ಶಿವಪ್ರಸಾದ ಆರ್.ಬೆಳ್ಳೆ (420) ಮತ್ತು ಲಕ್ಷ್ಮೀ ಶ್ರೀಕಾಂತ (405) ಸಾಧನೆ ಮಾಡಿ ದಾಖಲೆ ನಿರ್ಮಿಸಿದ್ದಾರೆ.

ರಾಷ್ಟ್ರ ಮಟ್ಟದ ನೀಟ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಈ ಸಲದ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆಗೆ ಕಾಲೇಜಿನ ಚೆರಮನ್‍ರಾದ ಶಿವಾನಂದ ಖಜುರ್ಗಿ, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತ ಪಡಿಸಿ, ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ.ಇಂದಿನ ಶೈಕ್ಷಣಿಕ ಕ್ಷೇತ್ರ ಸ್ಪರ್ಧಾತ್ಮಕವಾದದ್ದು, ವಿದ್ಯಾರ್ಥಿಗಳು ಯಶಸ್ವಿಯಾಗ ಬೇಕಾದರೆ ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ನಿರಂತರ ಅಭ್ಯಾಸ ಮತ್ತು ಮಾರ್ಗದರ್ಶನ ಇವು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಅಂಗಗಳಾಗಬೇಕು. ಇಂತಹ ವಾತಾವರಣವಿರುವ ವಿದ್ಯಾರ್ಥಿಗಳೇ ಸಾಧಕರಾಗಲು ಸಾಧ್ಯ. ಇಂತಹ ವಾತಾವರಣ ಸದುಪಯೋಗ ಪಡಿಸಿಕೊಂಡು ನೀಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ನಿಮ್ಮ ಮುಂದಿನ ಶೈಕ್ಷಣಿಕ ಕ್ಷೇತ್ರದಲ್ಲಿ ಬುದ್ಧಿ ಸಾಮಥ್ರ್ಯ ತೋರಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಹಾರೈಸುತ್ತೇನೆ. ನಿಮ್ಮ ಭವಿಷ್ಯ ಉಜ್ವಲವಾಗಲಿ, ನಿಮಗೆಲ್ಲರಿಗೂ ಅಭಿನಂದನೆಗಳು.

- ಶಿವಾನಂದ ಖಜುರ್ಗಿ, ಅಧ್ಯಕ್ಷರು ದಿಶಾ ಪಪೂ ಕಾಲೇಜು ಕಲಬುರಗಿ