ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಮರು ಪರೀಕ್ಷೆ ಭಾನುವಾರ ಚಿಕ್ಕಮಗಳೂರಿನ ಎರಡು ಪರೀಕ್ಷಾ ಕೇಂದ್ರದಲ್ಲಿ ಸುಸೂತ್ರವಾಗಿ ನಡೆಯಿತು.
1,421 ವಿದ್ಯಾರ್ಥಿಗಳ ಚಿಕ್ಕಮಗಳೂರಿನ ಎರಡು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಆಯ್ಕೆ ಮಾಡಿಕೊಂಡಿದ್ದರು. ಈ ಪೈಕಿ ಬರೋಬ್ಬರಿ 370 ವಿದ್ಯಾರ್ಥಿಗಳು ಗೈರಾಗಿದ್ದಾರೆ.ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15ರ ವರೆಗೆ ನೀಟ್ ಮರು ಪರೀಕ್ಷೆ ನಡೆಯಿತು. ಅದಕ್ಕೂ ಮೊದಲು ನಿಗದಿತ ಸಮಯಕ್ಕೆ ಪ್ರಶ್ನೆ ಪತ್ರಿಕೆಯನ್ನು ಕೇಂದ್ರ ಭದ್ರತಾ ಪಡೆಯ ರಕ್ಷಣೆಯಲ್ಲಿ ಪರೀಕ್ಷೆ ಕೇಂದ್ರಕ್ಕೆ ತರಲಾಯಿತು. ಎರಡೂ ಪರೀಕ್ಷಾ ಕೇಂದ್ರಕ್ಕೂ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ವಿದ್ಯಾರ್ಥಿಗಳು ಬೆಳಗ್ಗೆ 11 ಗಂಟೆಯಿಂದಲೇ ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಭದ್ರತಾ ಸಿಬ್ಬಂದಿ ಪ್ರತಿ ವಿದ್ಯಾರ್ಥಿಗಳ ತಪಾಸಣೆ ಮಾಡಿ ನಂತರ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟರು.ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ: ನೀಟ್ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಭೇಟಿ ನೀಡಿ ಪರಿಶೀಲಿಸಿದರು. 2 ಪರೀಕ್ಷಾ ಕೇಂದ್ರ 1,421 ವಿದ್ಯಾರ್ಥಿ:
ಚಿಕ್ಕಮಗಳೂರು ನಗರ ವ್ಯಾಪ್ತಿಯಲ್ಲಿರುವ ಎರಡು ಪರೀಕ್ಷಾ ಕೇಂದ್ರಗಳಾದ ಬಸವನಹಳ್ಳಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 581 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದಕ್ಕೆ ನೋಂದಣಿ ಮಾಡಿಕೊಂಡಿದ್ದರು. ಭಾನುವಾರ 435 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದಾರೆ.
ಇನ್ನೂ ನಗರದ ಬೇಲೂರು ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷೆ ಕೇಂದ್ರದಲ್ಲಿ 840 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ ,616 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದಾರೆ.-- ಕೋಟ್ --
ಚಿಕ್ಕಮಗಳೂರಿನ ಎರಡು ಕೇಂದ್ರದಲ್ಲಿ ನೀಟ್ ಮರು ಪರೀಕ್ಷೆ ಭಾನುವಾರ ಯಾವುದೇ ಗೊಂದಲ, ಸಮಸ್ಯೆ ಇಲ್ಲದೇ ಪೂರ್ಣಗೊಂಡಿದೆ.- ಜಗದೀಶ್ ನಾಯಕ್, ನೀಟ್ ಪರೀಕ್ಷೆ ಜಿಲ್ಲಾ ಸಂಯೋಜನಾಧಿಕಾರಿ
-- ಬಾಕ್ಸ --ಪರೀಕ್ಷಾ ಕೇಂದ್ರ ವಾರು ಮಾಹಿತಿ
ಪರೀಕ್ಷಾ ಕೇಂದ್ರ ಒಟ್ಟು ವಿದ್ಯಾರ್ಥಿ ಸಂಖ್ಯೆ ಹಾಜರಾದ ವಿದ್ಯಾರ್ಥಿ ಗೈರು ವಿದ್ಯಾರ್ಥಿ ಸಂಖ್ಯೆಬಸವನಹಳ್ಳಿ ಬಾಲಕಿಯರ ಪಿಯು ಕಾಲೇಜು 581 435 146ಬೇಲೂರು ರಸ್ತೆ ಪಿಯು ಕಾಲೇಜು 840 616 224ಒಟ್ಟು 1421 1051 370
