ಆಳುವವರ ನಿರ್ಲಕ್ಷ್ಯದಿಂದ ಸಾಹಿತ್ಯ ವಿನಾಶದಂಚಿಗೆ: ಜಾನಪದ ತಜ್ಞ ಪಿಚ್ಚಳ್ಳಿ ಶ್ರೀನಿವಾಸ್

| Published : Mar 24 2024, 01:35 AM IST

ಆಳುವವರ ನಿರ್ಲಕ್ಷ್ಯದಿಂದ ಸಾಹಿತ್ಯ ವಿನಾಶದಂಚಿಗೆ: ಜಾನಪದ ತಜ್ಞ ಪಿಚ್ಚಳ್ಳಿ ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಜಾನಪದ ಸಾಹಿತ್ಯ ಉಳಿದಾಗ ಮಾತ್ರ ಇಂದಿನ ಶಿಷ್ಟ ಸಾಹಿತ್ಯ ಉಳಿಯಲು ಸಾದ್ಯ ಎಂದು ಜಾನಪದ ತಜ್ಞ ಪಿಚ್ಚಳ್ಳಿ ಶ್ರೀನಿವಾಸ್ ಹೇಳಿದರು. ಸಕಲೇಶಪುರದಹೆತ್ತೂರು ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ೨೨ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಜಾನಪದ ಗಾಯನ ಹಾಗೂ ವಿಶ್ಲೇಷಣೆ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೆತ್ತೂರಲ್ಲಿ ೨೨ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕನ್ನಡಪ್ರಭ ವಾರ್ತೆ ಸಕಲೇಶಪುರ

ಜಾನಪದ ಸಾಹಿತ್ಯ ಉಳಿದಾಗ ಮಾತ್ರ ಇಂದಿನ ಶಿಷ್ಟ ಸಾಹಿತ್ಯ ಉಳಿಯಲು ಸಾದ್ಯ ಎಂದು ಜಾನಪದ ತಜ್ಞ ಪಿಚ್ಚಳ್ಳಿ ಶ್ರೀನಿವಾಸ್ ಹೇಳಿದರು.

ಹೆತ್ತೂರು ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ೨೨ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಜಾನಪದ ಗಾಯನ ಹಾಗೂ ವಿಶ್ಲೇಷಣೆ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಜಾನಪದ ಇಂದು ಆಳುವವ ನಿರ್ಲಕ್ಷ್ಯಕ್ಕೆ ಸಿಲುಕಿ ನಾಶದ ಅಂಚಿಗೆ ತಳ್ಳಲ್ಪಟ್ಟಿದೆ. ಇದರಿಂದಾಗಿ ಹೊಸ ಜಾನಪದತ ಕೊರತೆ ತೀವ್ರವಾಗಿ ಕಾಡುತ್ತಿದೆ. ಇದರಿಂದಾಗಿ ಅತ್ಯಮೂಲ್ಯ ಸಾಹಿತ್ಯ ಪ್ರಕಾರ ನಾಶದ ಹಂತಕ್ಕೆ ತಲುಪಿದೆ. ಈ ಬೆಳವಣಿಗೆ ಶಿಷ್ಟ ಸಾಹಿತ್ಯಕ್ಕೆ ದೊಡ್ಡ ಪೆಟ್ಟು ನೀಡಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

‘ಜಾನಪದದಲ್ಲಿ ೧೫೮ ಕಲಾ ಪ್ರಕಾರಗಳಿವೆ. ಇದರಲ್ಲಿ ೧೮ ರಿಂದ ೨೦ ಆಚರಣ ಪ್ರಧಾನ ಪ್ರಕಾರಗಳಿವೆ. ಆಧುನಿಕ ಪ್ರಪಂಚದಲ್ಲಿ ಬದುಕುತಿರುವ ನಮಗೆ ಚರ್ಚೆ ಸಂವಾದಗಳೆಂದರೆ ದಿಗಿಲು. ನಮಗೆ ಯಾವುದೇ ವಿಚಾರಗಳ ಬಗ್ಗೆ ಪರಿಪೂರ್ಣತೆ ಹೊಂದಿಲ್ಲದಿರುವುದು ಇದಕ್ಕೆ ಕಾರಣ. ಸೋಬಾನೆ ಪದದ ಪಾರುಪತ್ಯ ಮೆರೆಯುತ್ತಿರುವುದು ಮಹಿಳೆಯರಲ್ಲ ಪುರುಷರು. ಜಾನಪದದ ಎಲ್ಲ ಪ್ರಕಾರಗಳ ಬೀಜ ಮಹಿಳೆಯರೇ. ಜಾನಪದರು ಅವಿದ್ಯಾವಂತರಾದರೂ ಇಂದಿನ ವಿದ್ಯವಂತರಿಗಿಂತ ಹತ್ತು ಪಟ್ಟು ಹೆಚ್ಚಿನ ವಿಚಾರವಂತರಾಗಿರುತ್ತಿದ್ದರು. ಜಾನಪದರ ಪರಮ ಶತ್ರು ಬಡತನ. ಜಾನಪದದ ಅತಿರಥ, ಮಹರಾಥರು ಬಡತನದಲ್ಲಿ ಹುಟ್ಟಿ ಗುಡಿಸಿಲಿನಲ್ಲೆ ಅಸುನೀಗಿದ್ದಾರೆ. ಆದರೆ, ಇವರ ನೆರವು ಪಡೆದವರೂ ಸಹ ಜಾನಪದವನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಇಂದಿನ ಯುವಜನರಿಗೆ ಹಿಂಜರಿಕೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾಹಿತಿ ಹುಲ್ಲಹಳಿರಾಜೇಶ್ವರಿ, ಜಾನಪದ ಸಾಹಿತ್ಯದ ಮೂಲ. ಸಾಹಿತ್ಯ ಸೃಷ್ಟಿಸುವ ಮುನ್ನ ನಡೆನುಡಿ, ಕಂಡಿದ್ದು ಕೇಳಿದ್ದನ್ನೆಲ್ಲ ಹಾಡುಗಳನ್ನಾಗಿ ಬಾಯಿ ಮೂಲಕ ಹಾಡಿದವರು ಜಾನಪದರು. ಹತ್ತು ಪದಗಳಲ್ಲಿ ಹೇಳುವ ಪದವನ್ನು ಒಂದು ಪದದಲ್ಲಿ ಹೇಳುವ ಶಕ್ತಿ ಜಾನಪದಕ್ಕಿದೆ. ಇಂತಹ ಅನರ್ಘ್ಯ ಪದಗಳನ್ನು ಪರಿಚಯಿಸಿದ ಹಿಂದಿನ ತಲೆಮಾರಿನ ಜನರು ನಮಗೆ ಅತ್ಯಮೂಲ್ಯ ನಿಧಿಯನ್ನು ಬಿಟ್ಟು ಹೋಗಿದ್ದಾರೆ ಎಂದರು.

ಅವರೇಕಾಡು ವಿಜಯಕುಮಾರ್, ಮಂಟೆಸ್ವಾಮಿ ಹಾಡು ಕತ್ತಲೆ ರಾಜ್ಯದ ಜಾನಪದ ಸುಪ್ರಭಾತ ಎಂದರೆ ತಪ್ಪಾಗದು, ಮನುಷ್ಯ ಮೇಲುಕೀಳುಗಳನ್ನು ದಾಟಿ ಏಕತೆ ಸಾಧಿಸುವುದು ಸಾಹಿತ್ಯದ ಉದ್ದೇಶವಾಗಿದೆ. ಮಂಟೆಸ್ವಾಮಿ ಪದ್ಯಗಳನ್ನು ಮುಂದುವರಿಸಿಕೊಂಡು ವಿಶೇಷ ದಿರಿಸಿನಲ್ಲಿ ಕಂಡು ಬರುವ ಮಂಟೇಸ್ವಾಮಿ ಪದಗಾರರನ್ನು ನೀಲುಗಾರರು ಎಂದು ಕರೆಯಲಾಗುತ್ತದೆ. ಇವರು ಒಂದು ಬಗೆಯ ಸಾಹಿತ್ಯ ಪ್ರಚಾರಕರು. ಇತಿಹಾಸವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯವ ರೂವಾರಿಗಳು ಎಂದರು.

ಶ್ರೀ ಸಾಮಾನ್ಯರು ಜೀವನ, ಕಷ್ಟ ಕಾರ್ಪಣ್ಯಗಳನ್ನು ಹೊರಪ್ರಪಂಚಕ್ಕೆ ಬಿತ್ತರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ ಮಂಟೇಸ್ವಾಮಿ ಜಾನಪದ ಕಾವ್ಯಗಳ ಪಿತಾಮಹ ಎಂದರೆ ತಪ್ಪಾಗದು. ಮಂಟೇಸ್ವಾಮಿಗಳ ಕಾಲಜ್ಞಾನಿಯಾಗಿದ್ದು ಅವರು ಹೇಳಿದ ಪ್ರತಿಯೊಂದು ಮಾತುಗಳು ಇಂದು ಸತ್ಯವಾಗುತ್ತಿವೆ. ಮಂಟೆಸ್ವಾಮಿ ಪದಗಳು ಸಂಬಂಧಗಳ ಎಳೆಯನ್ನು ಬಿಚ್ಚಡುತ್ತವೆ ಎಂದರು.

ಪ್ರೊ.ಮಲ್ಲೇಶ್‌ಗೌಡ, ಪೂರ್ಣಿಮಾ, ದೊಡ್ಡಮನೆ ಆನಂದ್, ಕಟ್ಟಾಯ ಶಿವಕುಮಾರ್, ಕೆಂಚೆಗೌಡ ಮುಂತಾದವರಿದ್ದರು.

ಸಕಲೇಶಪುರದಲ್ಲಿ ನಡೆಯುತ್ತಿರುವ ೨೨ ನೇ ಸಾಹಿತ್ಯ ಸಮ್ಮೇಳನದಲ್ಲಿ ಜಾನಪದ ಗಾಯನ ಹಾಗೂ ವಿಶ್ಲೇಷಣೆ ಗೋಷ್ಠಿ ನಡೆಯಿತು.