ಸಾರಾಂಶ
1997ರಲ್ಲಿ ತಮ್ಮ ತಂದೆ ಎಚ್.ಜಿ. ರಾಮುಲು ಸಂಸದರಾಗಿದ್ದ ಸಂದರ್ಭದಲ್ಲಿ ಆನೆಗೊಂದಿ ಉತ್ಸವ ಪ್ರಥಮ ಬಾರಿಗೆ ಪ್ರಾರಂಭಿಸಿದರು. ಆಗಿನ ಉಪ ಮುಖ್ಯಮಂತ್ರಿಯಾಗಿದ್ದ ಎಂ.ಪಿ. ಪ್ರಕಾಶ ಅವರು ಹಂಪಿ ಉತ್ಸವದೊಂದಿಗೆ ಆನೆಗೊಂದಿ ಉತ್ಸವ ಮಾಡಲು ನಿರ್ಧರಿಸಿ, ಪ್ರತಿ ವರ್ಷ ಬಜೆಟ್‌ನಲ್ಲಿ ಅನುದಾನ ಇಡುತ್ತಿದ್ದರು.
ಗಂಗಾವತಿ:
ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಆನೆಗೊಂದಿ ಉತ್ಸವ ನಡೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ನಿರ್ಲಕ್ಷ್ಯವಹಿಸಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಅರೋಪಿಸಿದರು.ಪತ್ರಕರ್ತರೊಂದಿಗೆ ಮಾತನಾಡಿದ ಅವರು, 1997ರಲ್ಲಿ ತಮ್ಮ ತಂದೆ ಎಚ್.ಜಿ. ರಾಮುಲು ಸಂಸದರಾಗಿದ್ದ ಸಂದರ್ಭದಲ್ಲಿ ಆನೆಗೊಂದಿ ಉತ್ಸವ ಪ್ರಥಮ ಬಾರಿಗೆ ಪ್ರಾರಂಭಿಸಿದರು. ಆಗಿನ ಉಪ ಮುಖ್ಯಮಂತ್ರಿಯಾಗಿದ್ದ ಎಂ.ಪಿ. ಪ್ರಕಾಶ ಅವರು ಹಂಪಿ ಉತ್ಸವದೊಂದಿಗೆ ಆನೆಗೊಂದಿ ಉತ್ಸವ ಮಾಡಲು ನಿರ್ಧರಿಸಿ, ಪ್ರತಿ ವರ್ಷ ಬಜೆಟ್‌ನಲ್ಲಿ ಅನುದಾನ ಇಡುತ್ತಿದ್ದರು. ಆದರೆ ಈಗಿನ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕೇವಲ ತನ್ನ ಕ್ಷೇತ್ರದ ಕನಕಗಿರಿ ಉತ್ಸವ ಮಾಡಲು ಹೊರಟಿರುದ್ದು, ತಾರತಮ್ಯ ಎದ್ದುಕಾಣುತ್ತದೆ ಎಂದು ಅಕ್ರೋಶ ವ್ಯಕ್ತ ಪಡಿಸಿದರು.
ಅಲ್ಲದೆ ಗಂಗಾವತಿ ಕ್ಷೇತ್ರದಲ್ಲಿ ಶಾಸಕರು ಬೇರೆ ಪಕ್ಷದವರು ಇದ್ದಾರೆ ಎಂಬ ಕಾರಣಕ್ಕೆ ಉತ್ಸವ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಹೊತ್ತವರು ಜಿಲ್ಲೆಯ ಜನತೆಯ ಆಶೋತ್ತರಗಳನ್ನು ಪರಿಹರಿಸಲು ಮುಂದಾಗಬೇಕೆ ಹೊರತು ತಾರತಮ್ಯ ನೀತಿ ಮಾಡಬಾರದೆಂದು ದೂರಿದರು.ಕನಕಗಿರಿ ಜಾತ್ರೆಯಲ್ಲಿ ಕನಕಗಿರಿ ಉತ್ಸವ ನಡೆಸುವುದು ಸಮಂಜಸ ಅಲ್ಲ, ಕೂಡಲೆ ಸಚಿವರು ತಾರತಮ್ಯ ಮಾಡುವುದು ಬಿಟ್ಟು, ಐತಿಹಾಸಿಕ ಆನೆಗೊಂದಿ ಉತ್ಸವ ನಡೆಸಬೇಕು ಎಂದು ಒತ್ತಾಯಿಸಿದರು.