ಸಾರಾಂಶ
ಈ ಸಂದರ್ಭದಲ್ಲಿ ರಸ್ತೆ ಸುರಕ್ಷತೆಯ ಮಾಹಿತಿಗಳನ್ನೊಳಗೊಂಡ ಕರಪತ್ರ ಮತ್ತು ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಪುತ್ತೂರು ಅಪಘಾತವೆಂಬುದು ಆಕಸ್ಮಿಕ ಘಟನೆಯಾಗಿದ್ದು, ರಸ್ತೆ ನಾವು ಹೊರಟ ಜಾಗಕ್ಕೆ ನಮ್ಮನ್ನು ತಲುಪಿಸುವ ಒಂದು ಮಾಧ್ಯಮವಷ್ಟೇ. ನಾವು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದಲ್ಲಿ ಅದೇ ನಮ್ಮ ಪಾಲಿಗೆ ಕಂಟಕವಾಗಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶ್ವನಾಥ ಅಜಲ ಹೇಳಿದರು. ಅವರು ಬನ್ನೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಕರ್ನಾಟಕ ಸರಕಾರ ಸಾರಿಗೆ ಇಲಾಖೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ವತಿಯಿಂದ ಶುಕ್ರವಾರ ‘ರಸ್ತೆ ನಿಯಮಗಳ ಪಾಲಿಸಿ, ಜೀವಗಳ ರಕ್ಷಿಸಿ’ ಎಂಬ ಘೋಷವಾಕ್ಯದಲ್ಲಿ ನಡೆಯಲಿರುವ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ- ೨೦೨೫ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ಕುಮಾರ್ ರೈ, ಪುತ್ತೂರು ಸಂಚಾರ ಠಾಣಾ ಉಪ ನಿರೀಕ್ಷಕ ಕೆ.ಎಸ್. ಕುಟ್ಟಿ ಮಾತನಾಡಿದರು. ಹಿರಿಯ ಮೋಟಾರು ವಾಹನ ನಿರೀಕ್ಷಕ ಬಿ.ಎಸ್. ಅಶ್ಪಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರಸ್ತೆ ಸುರಕ್ಷತೆಯ ಮಾಹಿತಿಗಳನ್ನೊಳಗೊಂಡ ಕರಪತ್ರ ಮತ್ತು ಪೋಸ್ಟರ್ ಬಿಡುಗಡೆ ಮಾಡಲಾಯಿತು. ಅಧೀಕ್ಷಕ ದೀಪಕ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಅಧೀಕ್ಷಕ ಆಸ್ಕರ್ ಸಂತೋಷ್ ವಂದಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))