ನೇಹಾ ಕೊಲೆ: ಮಾನವ ಜನಾಂಗಕ್ಕೆ ಕಳಂಕ

| Published : Apr 24 2024, 02:21 AM IST

ಸಾರಾಂಶ

ಮಾನವೀಯ ಮೌಲ್ಯಗಳನ್ನು ಅರಿಯದ ಅವಿವೇಕಿಗಳಿಂದ ನೇಹಾ ಹಿರೇಮಠ ಮೇಲೆ ನಡೆದ ದುಷ್ಕೃತ್ಯ ಆಘಾತಕಾರಿ. ಇದು ಮಾನವ ಜನಾಂಗಕ್ಕೆ ಕಳಂಕ ಎಂದು ಸಾಹಿತಿ ಕವಿತಾ ಕಲ್ಯಾಣಪ್ಪಗೋಳ ಅಭಿಪ್ರಾಯ ಪಟ್ಟರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮಾನವೀಯ ಮೌಲ್ಯಗಳನ್ನು ಅರಿಯದ ಅವಿವೇಕಿಗಳಿಂದ ನೇಹಾ ಹಿರೇಮಠ ಮೇಲೆ ನಡೆದ ದುಷ್ಕೃತ್ಯ ಆಘಾತಕಾರಿ. ಇದು ಮಾನವ ಜನಾಂಗಕ್ಕೆ ಕಳಂಕ ಎಂದು ಸಾಹಿತಿ ಕವಿತಾ ಕಲ್ಯಾಣಪ್ಪಗೋಳ ಅಭಿಪ್ರಾಯ ಪಟ್ಟರು.

ಕನ್ನಡ ಸಾಹಿತ್ಯ ಪರಿಷತ್‌ನ ಸಭಾಂಗಣಲ್ಲಿ ಜಿಲ್ಲಾ, ತಾಲೂಕು ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ನೇಹಾ ಹಿರೇಮಠ ನುಡಿನಮನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಇಂತಹ ಘೋರ ಅಪರಾಧ ಎಸಗಿದ ಫಯಾಜ್‌ನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿದರು.

ಕವಿಯಿತ್ರಿ ಶಾಂತಲಾ ಪಾಟೀಲ ಕವನ ವಾಚಸಿ, ಭೀತಿ ಹುಟ್ಟಿಸುವದು ಪ್ರೀತಿಯೇ ಅಲ್ಲ, ಇಂತಹ ವಿಕೃತ ಮನಸ್ಸಿನ ವ್ಯಕ್ತಿಯನ್ನು ತ್ವರಿತ ನ್ಯಾಯಾಲಯದ ಮೂಲಕ ಶೀಘ್ರ ಶಿಕ್ಷೆ ವಿಧಿಸಬೇಕೆಂದರು.

ಸಾಹಿತಿ ಶಿಲ್ಪಾ ಭಸ್ಮೆ ಇಂತಹ ಕೃತ್ಯಗಳು ಪಾಲಕರಲ್ಲಿ ಆತಂಕ ಉಂಟುಮಾಡಿದೆ. ಪಾಲಕರು ತಮ್ಮ ಮಕ್ಕಳ ಚಟುವಟಿಕೆಗಳ ಮೇಲೆ ಗಮನ ಹರಿಸಬೇಕು ಎಂದರು.

ಕಸಾಪ ನಗರ ಘಟಕ ಅಧ್ಯಕ್ಷೆ ಅನ್ನಪೂರ್ಣ ಬೆಳ್ಳೆನವರ ಮಾತನಾಡಿ, ಇಂತಹ ಅಮಾನುಷ ಮನೋಭಾವದಿಂದ ಹೊರಬರಲು ವಿಪಸನ ಧ್ಯಾನ ಶಿಬಿರಗಳನ್ನು ಹಮ್ಮಿಕೊಂಡು, ಪಠ್ಯದಲ್ಲಿ ನೀತಿ ಕಥೆಗೆಳನ್ನು ಬೋಧಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಡಾ.ಮಾಧವ ಗುಡಿ, ಪ್ರೊ.ಸುಭಾಸಚಂದ್ರ ಕನ್ನೂರ, ಡಾ.ಆನಂದ ಕುಲಕರ್ಣಿ, ಬಸಯ್ಯ ಹಿರೇಮಠ, ಎಸ್.ಎಲ್.ಇಂಗಳೇಶ್ವರ, ಮಹೇಶ ಕ್ಯಾತಣ್ಣವರ, ಶಿವಲೀಲಾ ಮುರಾಳ, ಶಿಲ್ಪಾ ಹಂಜಿ, ಶಾಹೀನ್ ಕೊರಬು, ಪ್ರಕಾಶ ಇನಾಮದಾರ, ಶೋಭಾ ಬಡಿಗೇರ, ಲತಾ ಗುಂಡಿ, ಶಿವಾಜಿ ಮೋರೆ, ಅಣ್ಣುಗೌಡ ಬಿರಾದಾರ, ಸಿದ್ದು ಸಾವಳಸಂಗ, ಸಿದ್ರಾಮಪ್ಪ ಜಂಗಮಶೆಟ್ಟಿ, ಗಂಗಮ್ಮ ರೆಡ್ಡಿ, ಎ.ಎಲ್.ಹಳ್ಳೂರ, ಶ್ವೇತಾ ಮುಲ್ಕಿ ಪಾಟೀಲ, ರಾಣಿ ಕದಂ, ಸಚಿನ ಸಿದ್ನಾಳ ಇದ್ದರು.