ನೆಲಜಿಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2025 - 26 ನೇ ಸಾಲಿನಲ್ಲಿ ಉತ್ತಮ ಆರ್ಥಿಕ ಸಾಧನೆ ಮಾಡಿದ್ದು, ರು. 41.21 ಲಕ್ಷ ನಿವ್ವಳ ಲಾಭ ಗಳಿಸಿದೆ.

ನಾಪೋಕ್ಲು: ನೆಲಜಿ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2025 - 26 ನೇ ಸಾಲಿನಲ್ಲಿ ಉತ್ತಮ ಆರ್ಥಿಕ ಸಾಧನೆ ಮಾಡಿದ್ದು, ರು. 41.21 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ. 11% ರಷ್ಟು ಡಿವಿಡೆಂಡ್ ನೀಡುವ ಪ್ರಸ್ತಾವನೆಯನ್ನು ವಾರ್ಷಿಕ ಮಹಾಸಭೆಯ ಅನುಮೋದನೆಗೆ ಮಂಡಿಸಲು ಸಂಘ ತೀರ್ಮಾನಿಸಿದೆ ಎಂದು ಸಂಘದ ಅಧ್ಯಕ್ಷ ಮಾಳೆಯಂಡ ಎಂ. ಅಪ್ಪಚ್ಚ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2026ರ ಮಾರ್ಚ್ 31ರ ಅಂತ್ಯಕ್ಕೆ ಸಂಘದಲ್ಲಿ ಒಟ್ಟು 1294 ಎ ತರಗತಿಯ ಸದಸ್ಯರಿದ್ದು , ಸದಸ್ಯರಿಂದ ರು.. 188.32 ಲಕ್ಷ ಪಾಲು ಬಂಡವಾಳ ಸಂಗ್ರಹವಾಗಿದೆ. ಕ್ಷೇಮ ನಿಧಿ ಸೇರಿದಂತೆ ಇತರೆ ನಿಧಿಗಳಲ್ಲಿ ರು. 1.93 ಕೋಟಿ ಠೇವಣಿ ಸಂಗ್ರಹವಾಗಿದೆ ಎಂದರು. 2025 - 26 ನೇ ಸಾಲಿನಲ್ಲಿ ರಸಗೊಬ್ಬರ , ಕೃಷಿ ಉಪಕರಣಗಳು , ಕ್ರಿಮಿ ನಾಶಕ ಹಾಗೂ ಇತರೆ ಅಗತ್ಯ ಸಾಮಗ್ರಿಗಳ ಮಾರಾಟದಿಂದ ರು. 2.01 ಕೋಟಿ ವಹಿವಾಟು ನಡೆಸಿ ರು. 9.14 ಲಕ್ಷ ವ್ಯಾಪಾರ ಲಾಭ ಗಳಿಸಿದೆ. ಸಂಘದ ಸದಸ್ಯರುಗಳ ಮಕ್ಕಳಿಗೆ ಪ್ರೋತ್ಸಾಹ ಧನ ನೀಡುವ ಸಲುವಾಗಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ 85 % ಮತ್ತು ಅಂತಿಮ ಪದವಿ ಪರೀಕ್ಷೆಯಲ್ಲಿ 80 % ಅಂಕ ಪಡೆದು ಉತ್ತೀರ್ಣರಾದ ಮಕ್ಕಳ ಪೋಷಕರು ಸೆ.15ರೊಳಗೆ ಅಂಕಪಟ್ಟಿಯನ್ನು ಸಂಘಕ್ಕೆ ತಲುಪಿಸತಕ್ಕದ್ದು ಎಂದರು.

ವಾರ್ಷಿಕ ಮಹಾಸಭೆ

ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 50ನೇ ವಾರ್ಷಿಕ ಮಹಾಸಭೆ 19 ರಂದು ಸಂಘದ ಕಟ್ಟಡ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಧ್ಯಕ್ಷರಾದ ಮಾಳೆಯಂಡ. ಎಂ. ಅಪ್ಪಚ್ಚ ತಿಳಿಸಿದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಚೀಯಕಪೂವಂಡ. ವಿ. ರೀನಾ ಮತ್ತು ಸಂಘದ ನಿರ್ದೇಶಕರಾದ ಬದ್ದಂಜೆಟ್ಟೀರ ಎ. ತಿಮ್ಮಯ್ಯ, ಐರೀರ ಜಿ. ಟಿಂಶ, ಚೀಯಕಪೂವಂಡ ಡಿ. ನಾಚಪ್ಪ ,ಕರವಂಡ ಜಿ. ಅಪ್ಪಣ್ಣ ,ಮಚ್ಚುರ ಎಂ. ರವೀಂದ್ರ ,ಮಣವಟ್ಟೀರ ಬಿ. ದೀಪಕ್ ಪೊನ್ನಪ್ಪ ,ಮಣವಟ್ಟೀರ ಕೆ. ದಯಾ ಚಿಣ್ಣಪ್ಪ, ಚೀಯಕಪೂವಂಡ ಎ. ಸುನಿಲ್, ಮಣವಟ್ಟೀರ ಎನ್ ಕುಶಾಲಪ್ಪ , ಅಪ್ಪುಮಣಿಯಂಡ ಬಿ. ಕಾವೇರಮ್ಮ , ಪಿ .ಎಂ. ವಿಜು ಉಪಸ್ಥಿತರಿದ್ದರು.