ಉದ್ದಿಬಾಣೆ ಮಠ: ಧರ್ಮ ದೈವಗಳ ನೇಮೋತ್ಸವ ಸಂಪನ್ನ

| Published : Mar 04 2024, 01:17 AM IST

ಸಾರಾಂಶ

ಪನ್ಯ ಗ್ರಾಮದ ಉದ್ದಿಬಾಣೆ ಮಠದಲ್ಲಿ ಶ್ರದ್ಧಾಭಕ್ತಿಯಿಂದ ಧರ್ಮ ದೈವಗಳ ನೇಮೋತ್ಸವ ನಡೆಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಪನ್ಯ ಗ್ರಾಮದ ಉದ್ದಿಬಾಣೆ ಮಠದಲ್ಲಿ ಶ್ರದ್ಧಾಭಕ್ತಿಯಿಂದ ಧರ್ಮ ದೈವಗಳ ನೇಮೋತ್ಸವ ಶನಿವಾರ ಮತ್ತು ಭಾನುವಾರ ನಡೆಯಿತು.ಶನಿವಾರ ಬೆಳಗ್ಗೆ ಗಣ ಹೋಮ ಮತ್ತು ಸತ್ಯನಾರಾಯಣ ಪೂಜೆ ನಡೆದು, ನೇಮ ಮತ್ತು ದೇವತಾ ಕಾರ್ಯಕ್ಕೆ ವಿಘ್ನ ಬಾರದಂತೆ ಪ್ರಾರ್ಥನೆ ಸಲ್ಲಿಸಲಾಯಿತು‌.

ರಾತ್ರಿ 8 ಗಂಟೆಗೆ ಭಂಡಾರ ತೆಗೆಯುವ ಮೂಲಕ ನೇಮೋತ್ಸವಕ್ಕೆ ಚಾಲನೆ ದೊರಕಿತು. ನಂತರ ಕಲ್ಲುರ್ಟಿ ದೈವದ ಕೋಲ, ಭಾನುವಾರ ಮುಂಜಾನೆಯಿಂದ ಪಂಜುರ್ಲಿ ಮತ್ತು ಗುಳಿಗ ದೈವದ ನೇಮವು ನಡೆಯಿತು.ನಂತರ ಕಾರಣಿಕ ದೈವ ಕೊರಗಜ್ಹ ದೈವದ ಕೋಲ ನಡೆಯಿತು. ದೇವಾಲಯ ಸೇರಿದಂತೆ ಭಕ್ತರ ಹರಕೆಯ ಒಟ್ಟು 4 ಕೊರಗಜ್ಜನ ಕೋಲವು ಭಕ್ತರಲ್ಲಿ ಭಕ್ತಿ ಹೆಚ್ಚಿಸಿತು.ನೆರೆದಿದ್ದ ಭಕ್ತರಿಗೆ ಎರಡು ದಿನ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಸುಂಟಿಕೊಪ್ಪ, ಕುಶಾಲನಗರ, ಮಡಿಕೇರಿ, ಪನ್ಯ, ಗರಗಂದೂರು, ಮಾದಾಪುರ, ಸುಳ್ಯ, ಪುತ್ತೂರು, ಮಂಗಳೂರು, ಮೈಸೂರು ಸೇರಿದಂತೆ ಹಲವು ಕಡೆಗಳಿಂದ ಆಗಮಸಿದ್ದ ಭಕ್ತರು ದೈವದಲ್ಲಿ ಬೇಡಿಕೆ ಮತ್ತು ಹರಕೆ ಅರ್ಪಿಸಿದರು.

ಮುಖ್ಯಸ್ಥರಾದ ಮೋಣಪ್ಪ ಪೂಜಾರಿ, ಜಿನ್ನಪ್ಪ ಪೂಜಾರಿ, ಸಂಗೀತ ಮಣಿಮುಖೇಶ್, ವೆಂಕಪ್ಪ ಮೈಸೂರು, ಶಾಂತು ಸುಳ್ಯ, ಜಗದೀಶ್ ಸುಳ್ಯ, ರುಕ್ಮಯ್ಯ,ಬೇಬಿ, ಬಿ‌.ಟಿ.ರಮೇಶ್, ಶೇಖರ್, ದೇವಪ್ಪ ಸೇರಿದಂತೆ ಇತರರು ಇದ್ದರು.