ನೆರವಂಡ, ಕುಪ್ಪಂಡ, ನೆಲ್ಲ ಮಕ್ಕಡ, ಪುದಿಯೋಕ್ಕಡ ತಂಡಗಳಿಗೆ ಗೆಲುವು

| Published : Apr 24 2024, 02:20 AM IST

ನೆರವಂಡ, ಕುಪ್ಪಂಡ, ನೆಲ್ಲ ಮಕ್ಕಡ, ಪುದಿಯೋಕ್ಕಡ ತಂಡಗಳಿಗೆ ಗೆಲುವು
Share this Article
  • FB
  • TW
  • Linkdin
  • Email

ಸಾರಾಂಶ

ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಗಳಲ್ಲಿ ಮಂಗಳವಾರ ಬಿರುಸಿನ ಪೈಪೋಟಿ ನಡೆದವು. ಟೈ ಬ್ರೇಕರ್‌ನಲ್ಲಿ ನೆರವಂಡ ತಂಡ ಗೆಲುವು ಸಾಧಿಸಿತು.

ದುಗ್ಗಳ ಸದಾನಂದ ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಮಂಗಳವಾರದ ಪಂದ್ಯಗಳಲ್ಲಿ ಬಿರುಸಿನ ಪೈಪೋಟಿ ನಡೆದವು.

ಮುಕ್ಕಾಟಿರ (ಬೋಂದ) ಮತ್ತು ನೆರವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡು ತಂಡಗಳು ಸಮಬಲ ಸಾಧಿಸಿದವು. ನಂತರ ನಡೆದ ಟೈ ಬ್ರೇಕರ್ ನಲ್ಲಿ ನೆರವಂಡ ತಂಡ ಗೆಲುವು ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಕುಪ್ಪಂಡ (ಕೈಕೇರಿ) ಮತ್ತು ಕಲಿಯಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು. ಟೈ ಬ್ರೇಕರ್ ನಲ್ಲಿ ಕುಪ್ಪಂಡ (ಕೈಕೇರಿ) ತಂಡವು ಕಲಿಯಂಡ ಎದುರು ಜಯ ಸಾಧಿಸಿತು.

ಉಳಿದಂತೆ ನೆಲ್ಲ ಮಕ್ಕಡ ತಂಡವು ಅಂಜಪರವಂಡ ತಂಡದ ವಿರುದ್ಧ 4-0 ಅಂತರದ ಜಯ ಸಾಧಿಸಿದರೆ ಪುದಿಯೋಕ್ಕಡ ಕೂತಂಡ ತಂಡದ ವಿರುದ್ಧ 3-1 ಅಂತರದ ಜಯ ಸಾಧಿಸಿತು.

ಇಂದಿನ ಪಂದ್ಯಗಳು: 9:30 ಗಂಟೆಗೆ ಕುಲ್ಲೇಟಿರ -ಐನಂಡ, 10:30 ಗಂಟೆಗೆ ಚೆಪ್ಪುಡಿರ- ಚೆಕ್ಕೆದ, 12 ಗಂಟೆಗೆ ಚೇಂದಂಡ-ಕರಿನೆರವಂಡ, 1 ಗಂಟೆಗೆ ಬೋವೇರಿಯಂಡ -ಐಚ್ಚಿಟ್ಟಿರ