ನೆಟ್ ಬಾಲ್ ಪಂದ್ಯಾವಳಿ: ಲಿಂಗರಾಜು ಕಾಲೇಜು ಚಾಂಪಿಯನ್‌

| Published : Jan 15 2024, 01:49 AM IST

ಸಾರಾಂಶ

ಬಾದಾಮಿ: ನಗರದ ವೀರಪುಲಕೇಶಿ ಸಂಸ್ಥೆಯ ಎಸ್.ಬಿ.ಎಂ.ಪದವಿ ಕಾಲೇಜಿನ ಸಹಯೋಗದಲ್ಲಿ ವೀರಪುಲಿಕೇಶಿ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಆರ್‌ಸಿಯು ವಿಶ್ವವಿದ್ಯಾಲಯದ ತಂಡದ ಆಯ್ಕೆಗೆ ಎರಡು ದಿನಗಳ ಕಾಲ ಆಯೋಜಿಸಿದ್ದ ಏಕವಲಯ ಅಂತರ ಕಾಲೇಜುಗಳ ಪುರುಷರ ಹಾಗೂ ಮಹಿಳಾ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಎರಡೂ ವಿಭಾಗಗಳಲ್ಲಿ ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ ಕಾಲೇಜು ಪ್ರಥಮ ಸ್ಥಾನ ಪಡೆದುಕೊಂಡಿತು.

ಕನ್ನಡಪ್ರಭ ವಾರ್ತೆ ಬಾದಾಮಿ

ನಗರದ ವೀರಪುಲಕೇಶಿ ಸಂಸ್ಥೆಯ ಎಸ್.ಬಿ.ಎಂ.ಪದವಿ ಕಾಲೇಜಿನ ಸಯೋಗದಲ್ಲಿ ವೀರಪುಲಿಕೇಶಿ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಆರ್‌ಸಿಯು ವಿಶ್ವವಿದ್ಯಾಲಯದ ತಂಡದ ಆಯ್ಕೆಗೆ ಎರಡು ದಿನಗಳ ಕಾಲ ಆಯೋಜಿಸಿದ್ದ ಏಕವಲಯ ಅಂತರ ಕಾಲೇಜುಗಳ ಪುರುಷರ ಹಾಗೂ ಮಹಿಳಾ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಎರಡೂ ವಿಭಾಗಗಳಲ್ಲಿ ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ ಕಾಲೇಜು ಪ್ರಥಮ ಸ್ಥಾನ ಪಡೆದುಕೊಂಡಿತು.

ಪರುಷರ ವಿಭಾಗದಲ್ಲಿ ನಿಪ್ಪಾಣಿಯ ಜಿ.ಐ. ಬಾಗೇವಾಡಿ ಕಾಲೇಜು ದ್ವಿತೀಯ, ತಾಳಿಕೋಟೆಯ ಎಸ್.ಕೆ. ಕಾಲೇಜು ತೃತೀಯ ಸ್ಥಾನ ಪಡೆದುಕೊಂಡವು.

ಮಹಿಳಾ ಪದ್ಯಾವಳಿಯಲ್ಲಿ ಬಾದಾಮಿ ವೀರ ಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಎಸ್.ಬಿ. ಮಮದಾಪುರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ದ್ವಿತೀಯ, ತಾಳಿಕೋಟೆಯ ಎಸ್.ಕೆ. ಕಾಲೇಜು ತೃತೀಯ ಸ್ಥಾನ ಪಡೆದುಕೊಂಡರು.

ಪಂದ್ಯಾವಳಿಯಲ್ಲಿ 9 ಮಹಿಳೆಯರ ತಂಡಗಳು, 13 ಪುರುಷ ತಂಡಗಳು ಸೇರಿ 12 ಪದವಿ ಕಾಲೇಜಿನ ತಂಡಗಳು ಪಾಲ್ಗೊಂಡಿದ್ದವು. 70ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಯುನಿವರ್ಸಿಟಿ ಬ್ಲೂ ಆಯ್ಕೆಯಲ್ಲಿ ಭಾಗಿಯಾಗಿದ್ದರು.

ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕ್ರೀಡಾ ನಿರ್ದೇಶಕ ಗಸ್ತಿ, ಕಾಲೇಜಿನ ಪ್ರಾಚಾರ್ಯ ರವೀಂದ್ರ ಮೂಲಿಮನಿ ಸಂಸ್ಥೆಯ ನಿರ್ದೇಶಕರಾದ ಎಸ್.ಡಿ.ಫತ್ತೇಪೂರ, ಪ್ರಶಾಂತ ಪಟ್ಟಣದ, ಹಾಗೂ ನಾಗರಾಜ ಕಾಚೆಟ್ಟಿ, ವಿ.ಕೆ.ಬಾಗಲೆ, ದೈಹಿಕ ನಿರ್ದೇಶಕರಾದ ಬಸವರಾಜ ಬಳಗೇರ ಪಾಟೀಲ ,ಎ.ಬಿ. ಜನಾಲಿ ಉಪಸ್ಥಿತರಿದ್ದರು. ಶಿವುಕುಮಾರ ಅಂಗಡಿ ನಿರೂಪಸಿದರು ನಿಕಿಲ್ ಕುರಿ ವಂದಿಸಿದರು.