ಯುವಶಕ್ತಿಯ ಮೇಲೆ ಅಪಾರ ನಂಬಿಕೆ ಇಟ್ಟ ನೇತಾಜಿ ತನಗೆ ರಕ್ತಕೊಡಿ ನಾನು ದೇಶಕ್ಕೆ ಸ್ವಾತಂತ್ರ್ಯತಂದು ಕೊಡುವೆ ಎಂದು ಹೇಳುತ್ತಾ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದರು. ಐಪಿಎಸ್‌ ಓದಿದ ಅವರು ಉತ್ತಮ ಹುದ್ದೆ, ಅಧಿಕಾರವನ್ನು ಪಡೆಯಬಹುದಿತ್ತು. ಬ್ರಿಟೀಷರ ಹಂಗಿನಲ್ಲಿರಲು ಬಯಸದೆ ದೇಶದ ಸೋದರರು ಮೊದಲು ಸ್ವಾತಂತ್ರ್ಯರಾಗಬೇಕು.

ಕಿಕ್ಕೇರಿ:

ನಾಡಿನ ಸ್ವಾತಂತ್ರ್ಯಕ್ಕೆ ಬೇಕಿರುವುದು ಶಾಂತಿಗಿಂತ ಕ್ರಾಂತಿ ಎಂದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಜೀವನ ಚರಿತ್ರೆಯನ್ನು ಎಲ್ಲಾ ವಿದ್ಯಾರ್ಥಿಗಳು ಅರಿಯಬೇಕು ಎಂದು ಸ್ಪಂದನಾ ಫೌಂಡೇಶನ್ ಟ್ರಸ್ಟಿ ತ್ರಿವೇಣಿ ಹೇಳಿದರು.

ಪಟ್ಟಣದಲ್ಲಿ ಸ್ಪಂದನಾ ಪೌಂಢೇಷನ್, ಕನ್ನಡ ಕಲಾ ಸಂಘ ಏರ್ಪಡಿಸಿದ್ದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಜಯಂತಿಯಲ್ಲಿ ಮಾತನಾಡಿ, ನೇತಾಜಿ ಸ್ವರಾಜ್ಯ ಪಕ್ಷ ಸ್ಥಾಪಿಸಿ ಅಜಾದ್ ಹಿಂದ್ ಸೇನೆ ಸ್ಥಾಪಿಸಿ ಯುವಪಡೆಗಳನ್ನು ಕಟ್ಟಿ ಸ್ವಾತಂತ್ರ್ಯತಂದು ಕೊಡಲು ಯತ್ನಿಸಿದರು ಎಂದರು.

ಸುಭಾಷ್ ಚಂದ್ರಬೋಸ್ ಅವರ ಇನ್‌ ಕಿಲಾಬ್‌ ಜಿಂದಾಬಾದ್ ಎಂಬ ಘೋಷಣೆ ಭಾರತೀಯರ ಹೃದಯದಲ್ಲಿ ಚಿರಸ್ಥಾಯಿಯಾಗಿರಬೇಕು. ಇವರ ಆದರ್ಶ ಬದುಕು, ದೇಶ ಭಕ್ತಿ, ಸಾಮಾಜಿ ಕಳಕಳಿಯನ್ನು ಅರಿತು ಬದುಕಬೇಕು ಎಂದರು.

ಯುವಶಕ್ತಿಯ ಮೇಲೆ ಅಪಾರ ನಂಬಿಕೆ ಇಟ್ಟ ನೇತಾಜಿ ತನಗೆ ರಕ್ತಕೊಡಿ ನಾನು ದೇಶಕ್ಕೆ ಸ್ವಾತಂತ್ರ್ಯತಂದು ಕೊಡುವೆ ಎಂದು ಹೇಳುತ್ತಾ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದರು. ಐಪಿಎಸ್‌ ಓದಿದ ಅವರು ಉತ್ತಮ ಹುದ್ದೆ, ಅಧಿಕಾರವನ್ನು ಪಡೆಯಬಹುದಿತ್ತು. ಬ್ರಿಟೀಷರ ಹಂಗಿನಲ್ಲಿರಲು ಬಯಸದೆ ದೇಶದ ಸೋದರರು ಮೊದಲು ಸ್ವಾತಂತ್ರ್ಯರಾಗಬೇಕು ಎಂದು ಎಲ್ಲವನ್ನು ತೊರೆದರು ಎಂದು ನುಡಿದರು.

ಸಮಾಜ ಸೇವಾಕರ್ತೆ ಕವಿತಾ ಮಾತನಾಡಿ, ಮನಸ್ಸಿನಲ್ಲಿ ಮೊದಲು ದೇಶಪ್ರೇಮ ಮೂಡಿಸಲು ಪೋಷಕರು, ಶಿಕ್ಷಕರು, ಸಮಾನ ಮನಸ್ಕರ ಮನಸ್ಸುತುಡಿಯುವಂತಾದಲ್ಲಿ ಮಾತ್ರದೇಶ ಸುಭದ್ರವಾಗಲಿದೆ ಎಂದು ಆಶಿಸಿದರು. ಇದೇ ವೇಳೆ ನೇತಾಜಿ ಭಾವಚಿತ್ರಕ್ಕೆ ಪುರ್ಷ್ಪಾಚನೆಗೈದು ದೇಶಭಕ್ತಿಗೀತೆಯನ್ನು ಶಿಕ್ಷಕರೊಂದಿಗೆ ಹಾಡಿ ನಮಿಸಿದರು.ಗಿಲ್ಲಿ ನಟನಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಭಿನಂದನೆ

ಕನ್ನಡಪ್ರಭ ವಾರ್ತೆ ಮಳವಳ್ಳಿ:

ಬಿಗ್ ಬಾಸ್-12ನೇ ಆವೃತ್ತಿಯ ವಿಜೇತ ಮಳವಳ್ಳಿಯ ಗಿಲ್ಲಿ ನಟ(ನಟರಾಜ್) ಅವರನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಭಿನಂದಿಸಿದರು.

ನಂತರ ಮಾತನಾಡಿದ ಶಾಸಕರು, ತಮ್ಮ ನಟನೆ ಮೂಲಕ ಜನರ ಮನಸ್ಸು ಗೆದ್ದಿರುವ ಗಿಲ್ಲಿ ನಟ(ನಟರಾಜ್) ನಮ್ಮ ತಾಲ್ಲೂಕಿನವರು ಎನ್ನುವುದು ಹೆಮ್ಮೆಯಾಗಿದೆ. ಆ ಮೂಲಕ ಮಳವಳ್ಳಿಯನ್ನು ಮತ್ತಷ್ಟು ಪ್ರಸಿದ್ಧಿಗೊಳಿಸಿದ್ದಾರೆ. ಅವರ ನಟನೆ ಉತ್ತಮ ರೀತಿಯಲ್ಲಿ ಮುಂದುವರೆಯಲಿ ಎಂದು ಆಶಿಸಿದರು.

ಗಿಲ್ಲಿ ನಟ ಮಾತನಾಡಿ, ಜನರ ಈ ಪ್ರೀತಿಗೆ ಬೆಲೆ ಕಟ್ಟಲು ಅಸಾಧ್ಯ. ಎಲ್ಲರೂ ನನ್ನ ಗೆಲುವಿಗೆ ಸಹಕಾರ ನೀಡಿದ್ದಾರೆ. ಈ ಜನರ ಋಣ ತೀರಿಸಲು ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.

ನಂತರ ಪ್ರವಾಸಿ ಮಂದಿರ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಶಾಸಕರೊಂದಿಗೆ ತೆರಳಿ ಗಿಲ್ಲಿ ನಟ ಮಾಲಾರ್ಪಣೆ ಮಾಡಿದರು. ಈ ವೇಳೆ ಮನ್ಮುಲ್ ನಿರ್ದೇಶಕರಾದ ಆರ್.ಎನ್.ವಿಶ್ವಾಸ್, ಡಿ.ಕೃಷ್ಣೇಗೌಡ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಟೌನ್ ಅಧ್ಯಕ್ಷ ದೊಡ್ಡಯ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಲಿಂಗರಾಜು, ನಿರ್ದೇಶಕರಾದ ಕೆ.ಜೆ.ದೇವರಾಜು, ದಿಲೀಪ್ ಕುಮಾರ್, ಮುಖಂಡರಾದ ಸಿ.ವೇದಮೂರ್ತಿ, ಶ್ರೀನಿವಾಸ್, ಚೇತನ್ ಕುಮಾರ್, ದೀಪು ಪಾಲ್ಗೊಂಡಿದ್ದರು.