ತುಳಸಿ ಗ್ರಾಮದ ನೇತ್ರಾವತಿ ಚಂದ್ರೇಗೌಡ ಹಾಗೂ ಲಕ್ಷ್ಮೀಪುರ ಗ್ರಾಮದ ಅನಿತಾ ಬಬ್ರುವಾಹನ ಸ್ಪರ್ಧಿಸಿದ್ದರು. ಇಬ್ಬರು ಸ್ಪರ್ಧಿಗಳು ತಲಾ 8 ಮತಗಳು ಪಡೆದು ಸಮಬಲ ಸಾಧಿಸಿದರು. ಅಂತಿಮವಾಗಿ ಅಧ್ಯಕ್ಷರ ಆಯ್ಕೆಯನ್ನು ಲಾಟರಿ ಮೂಲಕ ಮಾಡಲಾಯಿತು. ಲಾಟರಿಯಲ್ಲಿ ತುಳಸಿ ಗ್ರಾಮದ ನೇತ್ರಾವತಿ ಚಂದ್ರೇಗೌಡ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಹೋಬಳಿಯ ಲಕ್ಷ್ಮೀಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ನೇತ್ರಾವತಿ ಚಂದ್ರೇಗೌಡ ಲಾಟರಿ ಮೂಲಕ ಆಯ್ಕೆಯಾದರು.

ಈ ಹಿಂದೆ ಅಧ್ಯಕ್ಷರಾಗಿದ್ದ ಕನಕಾ ರಾಜೇಶ್‌ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಗ್ರಾಪಂ 16 ಸದಸ್ಯರ ಪೈಕಿ ತುಳಸಿ ಗ್ರಾಮದ ನೇತ್ರಾವತಿ ಚಂದ್ರೇಗೌಡ ಹಾಗೂ ಲಕ್ಷ್ಮೀಪುರ ಗ್ರಾಮದ ಅನಿತಾ ಬಬ್ರುವಾಹನ ಸ್ಪರ್ಧಿಸಿದ್ದರು. ಇಬ್ಬರು ಸ್ಪರ್ಧಿಗಳು ತಲಾ 8 ಮತಗಳು ಪಡೆದು ಸಮಬಲ ಸಾಧಿಸಿದರು.

ಅಂತಿಮವಾಗಿ ಅಧ್ಯಕ್ಷರ ಆಯ್ಕೆಯನ್ನು ಲಾಟರಿ ಮೂಲಕ ಮಾಡಲಾಯಿತು. ಲಾಟರಿಯಲ್ಲಿ ತುಳಸಿ ಗ್ರಾಮದ ನೇತ್ರಾವತಿ ಚಂದ್ರೇಗೌಡ ಆಯ್ಕೆಯಾದರು.

ನೂತನ ಅಧ್ಯಕ್ಷೆ ನೇತ್ರಾವತಿ ಮಾತನಾಡಿ, ತಮ್ಮ ಅಧಿಕಾರದ ಅವಧಿಯಲ್ಲಿ ಕುಡಿಯುವ ನೀರು, ಬೀದಿ ದೀಪ, ಒಳಚರಂಡಿ ಹಾಗೂ ಮೂಲ ಸಮಸ್ಯೆಗಳಿಗೆ ಕೆಪಿಸಿಸಿ ಸದಸ್ಯ ಸುರೇಶ್ ಹಾಗೂ ಸದಸ್ಯರ ಮಾರ್ಗದರ್ಶನದಲ್ಲಿ ಒತ್ತು ನೀಡಲಾಗುವುದು ಎಂದರು.

ಈ ವೇಳೆ ಕೆಪಿಸಿಸಿ ಸದಸ್ಯ ಸುರೇಶ್, ಗ್ರಾಪಂ ಸದಸ್ಯರಾದ ರಮೇಶ್, ಆಶೋಕ್, ರಘು, ಶ್ರೀಧರ್, ಉಮೇಶ್, ಬಸವರಾಜು, ರಾಜಶೇಖರಮೂರ್ತಿ, ಸ್ವಾಮಿ, ಕನಕ, ಶ್ವೇತ, ಅನಿತಾ, ಚಂದ್ರಕಲಾ, ಪುಷ್ಪಲತಾ, ಮಂಜಳ ಮಮತಾ, ಮುಖಂಡರಾದ ಚಂದ್ರಮೋಹನ್, ಜಾಣೇಗೌಡ, ಲೋಕೇಶ್, ವಿಶ್ವನಾಥ್, ನವೀನ್, ಸುರೇಶ್, ರವಿ, ಮಂಜುನಾಥ್, ಪ್ರಸನ್ನ, ಹರೀಶ್‌ ಇದ್ದರು.ನ.೨ರಂದು ಉಮಾಶಂಕರ್ ಅಭಿನಂದನಾ ಸಮಾರಂಭ

ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ಜಾನಪದ ಪರಿಷತ್ತು ಹಾಗೂ ಉಮಾ ಶಂಕರ್-೫೦ ಅಭಿನಂದನಾ ಸಮಿತಿ ವತಿಯಿಂದ ನ.೨ರಂದು ಬೆಳಗ್ಗೆ ೧೦.೩೦ಕ್ಕೆ ನಗರದ ಕೆ.ವಿ.ಎಸ್. ಶತಮಾನೋತ್ಸವ ಭವನದಲ್ಲಿ ಜನಪದ ಕಲಾವಿದ ಉಮಾಶಂಕರ್ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ಪರಿಷತ್ತಿನ ತಾಲೂಕು ಅಧ್ಯಕ್ಷ ಕಾರಸವಾಡಿ ಮಹದೇವು ತಿಳಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶಗೌಡ ಸಮಾರಂಭ ಉದ್ಘಾಟಿಸುವರು. ಶ್ರೀಬಸವೇಶ್ವರ ಕಲಾ ವೇದಿಕೆ ಅಧ್ಯಕ್ಷ ಎಸ್.ಸಿ.ಬಸವರಾಜು ಸಂಪಹಳ್ಳಿ ಅಧ್ಯಕ್ಷತೆ ವಹಿಸುವರು. ಕಸಾಪ ಜಿಲ್ಲಾ ಸಂಚಾಲಕಿ ಮೀರಾ ಶಿವಲಿಂಗಯ್ಯ ಅವರು ಜನಪದ ಕಲಾವಿದ ಉಮಾಶಂಕರ್ ಗೊರವಾಲೆ ಮತ್ತು ಜಯಶೀಲ ಅವರನ್ನು ಅಭಿನಂದಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪತ್ರಕರ್ತ ದ.ಕೋ.ಹಳ್ಳಿ ಚಂದ್ರಶೇಖರ್ ಅಭಿನಂದನಾ ನುಡಿಯನ್ನಾಡುವರು. ಎಂ.ಶ್ರೀನಿವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಿ. ಶಿವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಡಿ.ಪಿ. ಸ್ವಾಮಿ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.

ಕರ್ನಾಟಕ ಜಾನಪದ ವಿವಿ ಸಿಂಡಿಕೇಟ್ ಸದಸ್ಯ ಗೊಲವಾಲೆ ಚಂದ್ರಶೇಖರ್, ತಬಲ ವಾದಕ ಜಿ. ವೆಂಕಟೇಶ್, ಜಾನಪದ ಕಲಾವಿದೆ ನಂಜಮ್ಮ ಬೇವಿನಹಳ್ಳಿ ಅವರನ್ನು ಇದೇ ವೇಳೆ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಸಮಿತಿ ಪದಾಧಿಕಾರಿಗಳಾದ ಬಸರಾಜು ಸಂಪಹಳ್ಳಿ, ದೇವರಾಜ್ ಕೊಪ್ಪ, ಶೇಖರ್, ಗೊರವಾಲೆ ಶಿವಣ್ಣ ಗೋಷ್ಠಿಯಲ್ಲಿದ್ದರು.