ಸಾರಾಂಶ
ತಿರುಮಲ ಅಂತಾರಾಷ್ಟ್ರೀಯ ಶಾಲೆಯಲ್ಲಿ ನೂತನ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆಯ ಸಮಾರಂಭವು ನಡೆಯಿತು.ಶ್ರೀಧರ್ ಅವರು ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ ಕೌಶಲ್ಯವನ್ನು ಬೆಳೆಸಲು ಶಾಲೆಯು ಒದಗಿಸುತ್ತಿರುವ ಸೌಲಭ್ಯಗಳನ್ನು ಶ್ಲಾಘಿಸಿದರು. ಶಾಲೆಯ ಅಧ್ಯಕ್ಷರಾದ ಡಾ. ರಮೇಶ್ ಬಾಬು ಅವರು ಕಂಪ್ಯೂಟರ್ ಶಿಕ್ಷಣದ ಮಹತ್ವವನ್ನು ವಿವರಿಸಿದರು ಮತ್ತು ಕಂಪ್ಯೂಟರ್ ಭಾಗಗಳು ಮತ್ತು ಅವುಗಳ ಕಾರ್ಯಕ್ಷಮತೆ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾದ ಅರಿವು ಹೊಂದಲು ಸೂಚಿಸಿದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಿರುಮಲ ಅಂತಾರಾಷ್ಟ್ರೀಯ ಶಾಲೆಯಲ್ಲಿ ನೂತನ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆಯ ಸಮಾರಂಭವು ಉಲ್ಲೇಖನೀಯವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಎಸ್ ಬಿ ಐ ಬ್ಯಾಂಕಿನ ಮ್ಯಾನೇಜರ್ ಶ್ರೀಧರ್ ಮತ್ತು ರಿಲೇಷನ್‌ಶಿಪ್ ಮ್ಯಾನೇಜರ್ ಪ್ರದೀಪ್ ಎಮ್ ಎನ್ ಅವರು ಭಾಗವಹಿಸಿದ್ದರು. ಅತಿಥಿಗಳಾಗಿ ಶಾಲೆಯ ಅಧ್ಯಕ್ಷರಾದ ಡಾ. ರಮೇಶ್ ಬಾಬು, ಕಾರ್ಯದರ್ಶಿಗಳಾದ ಕಾಂತರಾಜು ಬಿ ಎಸ್, ಪ್ರಾಂಶುಪಾಲರಾದ ರಾಹುಲ್ ಬಿ, ವ್ಯವಸ್ಥಾಪಕರಾದ ರವಿ ಬಿ, ಕಂಪ್ಯೂಟರ್ ಶಿಕ್ಷಕಿ ಧರಣಿ ಮತ್ತು ಶಾಲೆಯ ಶಿಕ್ಷಕ-ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಶ್ರೀಧರ್ ಅವರು ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ ಕೌಶಲ್ಯವನ್ನು ಬೆಳೆಸಲು ಶಾಲೆಯು ಒದಗಿಸುತ್ತಿರುವ ಸೌಲಭ್ಯಗಳನ್ನು ಶ್ಲಾಘಿಸಿದರು.ಶಾಲೆಯ ಅಧ್ಯಕ್ಷರಾದ ಡಾ. ರಮೇಶ್ ಬಾಬು ಅವರು ಕಂಪ್ಯೂಟರ್ ಶಿಕ್ಷಣದ ಮಹತ್ವವನ್ನು ವಿವರಿಸಿದರು ಮತ್ತು ಕಂಪ್ಯೂಟರ್ ಭಾಗಗಳು ಮತ್ತು ಅವುಗಳ ಕಾರ್ಯಕ್ಷಮತೆ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾದ ಅರಿವು ಹೊಂದಲು ಸೂಚಿಸಿದರು.ಪ್ರಾಂಶುಪಾಲರಾದ ರಾಹುಲ್ ಬಿ ಅವರು, ಇದು ಕೇವಲ ಒಂದು ಕೋಣೆಯಲ್ಲ, ದೇಶದ ಭವಿಷ್ಯವನ್ನು ರೂಪಿಸುವ ಒಂದು ಹೆಜ್ಜೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ನಾವು ನಮ್ಮ ಶಾಲೆಯಲ್ಲಿ ಮುಂದಿನ ಪ್ರಜೆಯನ್ನು ಸೃಷ್ಟಿಸಲು ಮತ್ತು ಡಿಜಿಟಲ್ ಇಂಡಿಯಾ ಮತ್ತು ಸ್ವಚ್ಛ ಭಾರತ ಯೋಜನೆಗಳಿಗೆ ಕೈಜೋಡಿಸುತ್ತೇವೆ ಎಂದು ಹೇಳಿದರು.ಕಾರ್ಯಕ್ರಮದ ಅಂಗವಾಗಿ ಮುಖ್ಯ ಅತಿಥಿಗಳಿಗೆ ಸನ್ಮಾನ ಮಾಡಿ, ವಿದ್ಯಾರ್ಥಿಗಳಿಗೆ ಸಿಹಿಯನ್ನು ವಿತರಿಸಲಾಯಿತು.