ಸಾರಾಂಶ
ಬೀದರ್‌ನ ನೂತನ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ವಿವಿಧ ಸಂಘಟನೆಗಳಿಂದ ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಬೀದರ್
ಗೋವಿಂದ ರಡ್ಡಿ ಅವರ ಜಾಗಕ್ಕೆ ಶುಕ್ರವಾರ ಶಿಲ್ಪಾ ಶರ್ಮಾ ಅವರು ಬೀದರ್ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.ವಿಶ್ವ ಕನ್ನಡಿಗರ ಸಂಸ್ಥೆ ರಾಜ್ಯಾಧ್ಯಕ್ಷ ಡಾ. ಸುಬ್ಬಣ್ಣ ಕರಕನಳ್ಳಿ, ಕರ್ನಾಟಕ ರಕ್ಷಣಾ ವೇದಿಕೆ ಕಾವಲುಪಡೆ ಜಿಲ್ಲಾಧ್ಯಕ್ಷ ಅವಿನಾಶ ಬುದೇರಾಕರ, ವಿಶ್ವ ಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ಜಿಲ್ಲಾಧ್ಯಕ್ಷ ರಾಹುಲ ಬೌದ್ಧೆ, ಸಂಜು ಜಾದವ್ ಮುಂತಾದವರು ನೂತನ ಬೀದರ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರಿಗೆ ಕ್ರಾಂತಿ ಬೆಳಕು ಕೃತಿ ನೀಡಿ ಸನ್ಮಾನ ಮಾಡಿದರು.
ಗಡಿ ಜಿಲ್ಲೆ ಬೀದರ್ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ, ಮಾಹಿತಿ ತಂತ್ರಜ್ಞಾನದಲ್ಲಿ ಉತ್ತಮ ಸೇವೆ, ಸಾಧನೆ ಮಾಡಲು, ವಿದ್ಯಾವಂತ ನಿರುದ್ಯೋಗಿಗಳು ಉದ್ಯೋಗ, ಸ್ವಯಂ ಉದ್ಯೋಗ, ಕೈಗೊಳ್ಳಲು ಆರ್ಥಿಕ ಯೋಜನೆಗಳು ಅವಶ್ಯಕವಾಗಿವೆ.ಈ ನಿಟ್ಟಿನಲ್ಲಿ ಗ್ರಾಪಂ, ತಾಪಂ ಹಾಗೂ ಜಿಪಂ ಅಲ್ಲದೇ ವಿವಿಧ ಸರ್ಕಾರಿ ಇಲಾಖೆ, ನಗರ ಸಭೆ, ಪುರ ಸಭೆ, ಪಪಂ, ಜಿಪಂ, ಕೈಗಾರಿಕ ಉದ್ಯಮಶೀಲತೆ ಇಲಾಖೆಗಳ ಮೂಲಕ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವಿವಿಧ ಯೋಜನೆಗಳ ಮೂಲಕ ನಿರುದ್ಯೋಗ ಕಡಿಮೆ ಮಾಡಬಹುದಾಗಿದೆ.
ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಶ್ರಮಿಸಬೇಕೆಂದು, ಮನೆ ಇಲ್ಲದವರಿಗೆ ಮನೆ ಮಂಜೂರು, ಸರ್ಕಾರಿ ಸೌಲಭ್ಯಗಳು ಮಂಜೂರಾತಿಯಲ್ಲಿ ಆಗುತ್ತಿರುವ ಭ್ರಷ್ಟಚಾರ ಕಡಿವಾಣ ಹಾಕಲು ನಿಜವಾದ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸುವ ಕೆಲಸವನ್ನು ಮಾಡಬೇಕ್ಕಾಗಿದೆ ಎಂದು ನೂತನ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಲಾಯಿತು ಎಂದು ಸುಬ್ಬಣ್ಣ ತಿಳಿಸಿದ್ದಾರೆ.