ಸಾರಾಂಶ
- ಶ್ರೀಗುರು ಚನ್ನೇಶ್ವರ ಬೆಳ್ಳಿ ರಥೋತ್ಸವ, ಸಂಸ್ಕೃತಿ ಸಂಸ್ಕಾರ ಧರ್ಮಸಭೆಯಲ್ಲಿ ಹಿರೇಕಲ್ಮಠ ಶ್ರೀ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕೃಷಿ ಚಟುವಟಿಯಲ್ಲಿ ಭಾಗಿಯಾಗುವ ಎತ್ತುಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಆದ್ದರಿಂದ ಮಣ್ಣೆತ್ತಿನ ಅಮಾವಾಸ್ಯೆಯ ದಿನ ಮಣ್ಣಿನಿಂದ ಮಾಡಿದ ಎತ್ತಿನ ವಿವಿಧ ಆಕೃತಿಗಳನ್ನು ಮನೆಯ ಜಗಲಿಯ ಮೇಲಿಟ್ಟು ವಿಶೇಷ ಪೂಜಾ ಕೈಂಕರ್ಯ ನೆರವೇರಿಸುವ ಮಾಡುವ ಪದ್ಧತಿ ಅನಾದಿ ಕಾಲದಿಂದಲೂ ರೂಢಿಯಲ್ಲಿದೆ ಎಂದು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.ಪಟ್ಟಣದ ಹಿರೇಕಲ್ಮಠದಲ್ಲಿ ಶುಕ್ರವಾರ ರಾತ್ರಿ ಜರುಗಿದ ಮಣ್ಣಿತ್ತಿನ ಅಮಾವಾಸ್ಯೆ ಪೂಜಾ ಕಾರ್ಯದಲ್ಲಿ ಶ್ರೀಗುರು ಚನ್ನೇಶ್ವರ ಬೆಳ್ಳಿ ರಥೋತ್ಸವ ಹಾಗೂ ಸಂಸ್ಕೃತಿ ಸಂಸ್ಕಾರ ಧರ್ಮಸಭೆ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮಣ್ಣೆತ್ತಿನ ಅಮಾವಾಸ್ಯೆ ಜೇಷ್ಠ, ಆಷಾಢಗಳ ದುರ್ಗಮಾಸವೆಂದೇ ಖ್ಯಾತಿ ಪಡೆದಿದೆ. ಆಷಾಢದ ಗಾಳಿ, ಮಳೆಗೆ ಭೂಮಿಯಲ್ಲಿ ಮಣ್ಣು ಚಂದ್ರಕಲೆಗಳು ಬೆರೆತು ಮಣ್ಣನ್ನು ಫಲವತ್ತಾಗಿಸುತ್ತವೆ. ಅದರ ಸೌಲಭ್ಯವನ್ನು ಪಡೆಯುವ ರೈತರು ಉತ್ತಿ, ಬಿತ್ತಿ ಬೆಳೆ ತೆಗೆಯುತ್ತಾರೆ. ಅವರ ಇಂತಹ ಕಾಯಕದಿಂದಲೇ ಎಲ್ಲರಿಗೂ ಅನ್ನ ಸಿಗುತ್ತದೆ ಎಂದರು.ಪ್ರಕೃತಿ ಮತ್ತು ಭೂಮಿಗೂ ಅವಿನಾಭಾವ ಸಂಬಂಧ ಇದೆ. ಈ ವಿಚಾರವನ್ನು ಸಹಸ್ರಾರು ವರ್ಷಗಳ ಹಿಂದೇಯೇ ನಮ್ಮ ಪೂರ್ವಿಕರು ಅನೇಕ ಹಬ್ಬಗಳ ಆಚರಣೆಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಅದರಂತೆಯೇ ಈ ಮಣ್ಣೆತ್ತಿನ ಅವವಾಸ್ಯೆ ಆಚರಣೆ ಕೂಡ ನಡೆಯುತ್ತದೆ ಎಂದು ತಿಳಿಸಿದರು. ಶ್ರೀಮಠದ ವತಿಯಿಂದ ಮುಂದಿನ ದಿನಮಾನಗಳಲ್ಲಿ ವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಐಸಿಐಸಿಐ ಮತ್ತು ಸಿಬಿಎಸ್‍ಇ ಕಾಲೇಜುಗಳನ್ನು ತೆರೆಯಲಾಗುತ್ತದೆ. ಈ ಭಾಗದ ವಿದ್ಯಾರ್ಥಿಗಳಿಗೆ ಮತ್ತು ಜನರಿಗೆ ಈ ಅನುಕೂಲಗಳು ಬೇಗ ದೊರೆಯಲಿ ಎಂಬ ಉದ್ದೇಶದಿಂದ ಹುಬ್ಬಳಿಯ ಪ್ರತಿಷ್ಠಿತ ಡೆವಲಪರ್ ಕಂಪನಿಗೆ ಎರಡು ವರ್ಷಗಳಲ್ಲಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಲಾಗಿದೆ ಎಂದರು.ವಿಶ್ರಾಂತ ಉಪನ್ಯಾಸಕ ಎಚ್.ಆರ್. ಗಂಗಾಧರ ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿ, ನನ್ನ ವೃತ್ತಿ ಜೀವನದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿದ್ದೇನೆ. ನಮ್ಮಲ್ಲಿ ಶಿಕ್ಷಣ ಪಡೆದ ನೂರಾರು ವಿದ್ಯಾರ್ಥಿಗಳು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಪಡೆದು ಸೇವೆ ಸಲ್ಲಿಸುತ್ತಿದ್ದಾರೆ. ಕೆಲವರು ವ್ಯಾಪಾರ, ಸಮಾಜ ಸೇವೆ ಮಾಡುತ್ತಿದ್ದಾರೆ ಎಂದು ತಮ್ಮ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡರು.ನ್ಯಾಮತಿ ತಾಲೂಕಿನ ಒಡೆಯರ ಹತ್ತೂರು ಗ್ರಾಮದ ವ್ಯಾಪಾರಿ ಗುರುಮೂರ್ತಿಯವರ ಮಗನಾದ 1ನೇ ತರಗತಿ ವಿದ್ಯಾರ್ಥಿ ರುತ್ವಿಕ್, ಮಹಾಭಾರತದ ಪಾತ್ರಧಾರಿಗಳ ಹೆಸರನ್ನು ಧರ್ಮ ಸಭೆಯಲ್ಲಿ ಪಠಣ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಧರ್ಮಸಭೆಯಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಕಾಯಿ ಬಸವರಾಜ, ತೆಗ್ಗೆಹಳ್ಳಿ ಸಿದ್ದಪ್ಪ, ಎಸ್.ಎಚ್. ಸಿದ್ದಪ್ಪ, ಭರತ್ ಮಾಲೀಕರು ಮತ್ತು ಬೆಟಲ್‍ನೆಟ್ ಕಂ.ಶಿವಮೊಗ್ಗ ಇವರಿಗೆ ಮಠದ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.ಶ್ರೀ ಮಠದ ವ್ಯವಸ್ಥಾಪಕ ಎಂಪಿ.ಎಂ ಚನ್ನಬಸಯ್ಯ, ಅನ್ನದಾನ ಶಾಸ್ತ್ರಿ, ನಿಜಗುಣ ಶಿವಯೋಗಿ ಶಾಸ್ತ್ರಿ, ಡಾ. ಪ್ರತೀಮ ನಿಜಗುಣ ಶಿವಯೋಗಿ ಸ್ವಾಮಿ, ಕಡದಕಟ್ಟೆ ದಾನಪ್ಪ, ನರಸಗೊಂಡನಹಳ್ಳಿ ಗುರುಪ್ರಸಾದ ಹಾಗೂ ಚನ್ನೇಶ್ವರ ಗಾನ ಕಲಾ ಬಳಗ, ಅಭಿನೇತ್ರಿ ಡ್ಯಾನ್ಸ್ ಮ್ಯೂಜಿಕ್ ಅಕಾಡೆಮಿ, ಕವನ ಸಂಗೀತಾ ಬಳಗದ ಸದಸ್ಯರು ಇದ್ದರು.-----6ಎಚ್.ಎಲ್.ಐ4.:
ಹಿರೇಕಲ್ಮಠದಲ್ಲಿ ಶುಕ್ರವಾರ ರಾತ್ರಿ ಜರುಗಿದ ಮಣ್ಣಿತ್ತಿನ ಅಮಾವಾಸ್ಯೆ ಪೂಜಾ ಕಾರ್ಯದಲ್ಲಿ ಶ್ರೀಗುರು ಚನ್ನೇಶ್ವರ ಬೆಳ್ಳಿ ರಥೋತ್ಸವ ಹಾಗೂ ಸಂಸ್ಕೃತಿ ಸಂಸ್ಕಾರ ಧರ್ಮ ಸಭೆಯ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.