ಕೊಡಗು ಜಿಲ್ಲಾ ಮಲೆಯ ಸಮಾಜದ ನೂತನ ಅಧ್ಯಕ್ಷರಾಗಿ ಎಂ.ಕೆ. ಅಶೋಕ್ ಆಯ್ಕೆಯಾಗಿದ್ದಾರೆ.
ಮಡಿಕೇರಿ: ಕೊಡಗು ಜಿಲ್ಲಾ ಮಲೆಯ ಸಮಾಜದ ನೂತನ ಅಧ್ಯಕ್ಷರಾಗಿ ಎಂ.ಕೆ. ಅಶೋಕ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಎಂ.ಎಸ್. ಮುತ್ತಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಬಿದ್ದಪ್ಪ ಎಂ.ಪಿ., ಸಹ ಕಾರ್ಯದರ್ಶಿಯಾಗಿ ರೀನಾ ರೋಶನ್, ಖಜಾಂಚಿಯಾಗಿ ಎಂ.ಎ. ಮಂಜುನಾಥ್ ಆಯ್ಕೆಯಾದರು.ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ.ಬಿ. ಗಣೇಶ್, ಎಂ.ಕೆ. ಯತೀಶ್, ಎಂ.ಜಿ. ವಿಜಿತ್, ಎಂ.ಯು. ದರ್ಶನ್, ಎಂ.ಎಂ. ಹ್ಯಾರಿ, ಎಂ.ಯು. ಬೆಲ್ಲು ಅವರನ್ನು ಆಯ್ಕೆ ಮಾಡಲಾಯಿತು.