ಸಾರಾಂಶ
ಹೋಬಳಿಯ ಕಾರೇಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚೆನ್ನೇನಹಳ್ಳಿ ಗ್ರಾಮದ ಸಿ.ಡಿ.ರೇವಣ್ಣ, ಉಪಾಧ್ಯಕ್ಷರಾಗಿ ಕೆ ಎಸ್ ದೇವರಾಜ್ ಅವಿರೋಧವಾಗಿ ಆಯ್ಕೆಯಾದರು. ಅವಿರೋಧವಾಗಿ ಆಯ್ಕೆಗೊಂಡ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸಂಘದ ನಿರ್ದೇಶಕರು ಹಾಗೂ ಮುಖಂಡರು ಅಭಿನಂದಿಸಿದರು.
ಕನ್ನಡಪ್ರಭ ವಾರ್ತೆ ಬಾಗೂರು
ಹೋಬಳಿಯ ಕಾರೇಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚೆನ್ನೇನಹಳ್ಳಿ ಗ್ರಾಮದ ಸಿ.ಡಿ.ರೇವಣ್ಣ, ಉಪಾಧ್ಯಕ್ಷರಾಗಿ ಕೆ ಎಸ್ ದೇವರಾಜ್ ಅವಿರೋಧವಾಗಿ ಆಯ್ಕೆಯಾದರು.ಈ ಹಿಂದೆ ಅಧ್ಯಕ್ಷರಾಗಿದ್ದ ಕೆ. ಬಿ. ನಟರಾಜು ಹಾಗೂ ಉಪಾಧ್ಯಕ್ಷರಾದ ಶಿವಸ್ವಾಮಿ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಸಿ.ಡಿ.ರೇವಣ್ಣ, ಉಪಾಧ್ಯಕ್ಷ ಸ್ಥಾನಕ್ಕೆ ದೇವರಾಜು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ವಾಸಿಂ ಶರೀಫ್ ಘೋಷಿಸಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಸಿ .ಡಿ. ರೇವಣ್ಣ ಮಾತನಾಡಿ, ಕೃಷಿ ಪತ್ತಿನ ಷೇರುದಾರ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯ ಕಲ್ಪಿಸಲು ಹೆಚ್ಚು ಶ್ರಮಿಸುವುದಾಗಿ ತಿಳಿಸಿದ ಅವರು, ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಬ್ಯಾಂಕ್‌ನ ನಿರ್ದೇಶಕರಾಗಿರುವ ಸಿ.ಎನ್. ಬಾಲಕೃಷ್ಣ ಅವರ ಹೆಚ್ಚಿನ ಸಹಕಾರ ಪಡೆದು ಮುಂಬರುವ ದಿನಗಳಲ್ಲಿ ಸಂಘಕ್ಕೆ ಹೊಸ ಕಟ್ಟಡ ನಿರ್ಮಾಣ ಮಾಡಲು ಜೊತೆಗೆ ರೈತರಿಗೆ ಹೆಚ್ಚಿನ ಸಾಲ ವಿತರಣೆ ಮಾಡಲು ಮುಂದಾಗುವುದಾಗಿ ತಿಳಿಸಿದರು.ಅವಿರೋಧವಾಗಿ ಆಯ್ಕೆಗೊಂಡ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸಂಘದ ನಿರ್ದೇಶಕರು ಹಾಗೂ ಮುಖಂಡರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ. ಎ.ಸತೀಶ್, ನಿರ್ದೇಶಕರಾದ ಸಿದ್ದೇಗೌಡ, ಪುನೀತ್ ಕೆ ಎನ್, ಕವಿತಾ ವಿಜೇಶ್, ಗಂಗಣ್ಣಮ್ಮ ರಾಜಣ್ಣ, ನಾಗೇಶ್, ಗಂಗಾಧರಯ್ಯ ಜೆ, ಚಿಕ್ಕೇಗೌಡ, ಮುಖಂಡರಾದ ಕೆ.ಟಿ.ನಟೇಶ್, ರವಿಶಂಕರ್, ನಾಗೇಂದ್ರ, ಸಿಜೆ ಕುಮಾರ್, ಅಣತಿ ವೆಂಕಟೇಶ್, ಮಂಜುನಾಥ್, ಉಮಾಹಿನ್, ಸಮೀವುಲ್ಲಾ, ಕುಳ್ಳೇಗೌಡ, ಹುಲ್ಲೇನಹಳ್ಳಿ ನಾರಾಯಣಪ್ಪ, ಎನ್ ಬಿ ನಾಗರಾಜ್, ಪುಟ್ಟಸ್ವಾಮಿ, ಹೊಸೂರು ಚಂದ್ರಪ್ಪ, ನಾಗೇನಹಳ್ಳಿ ವಿಜಯಕುಮಾರ್, ಕಾರ್ಯನಿರ್ವಹಣಾಧಿಕಾರಿ ಎಸ್ ಕೆ ರಾಜೇಶ್, ಸಹ ಕಾರ್ಯದರ್ಶಿ ಮನು ಪ್ರಸಾದ್, ಮಾರಾಟ ವಿಭಾಗದ ಮೇಲ್ವಿಚಾರಕ ಯತೀಶ್, ಸೇರಿದಂತೆ ಇತರರು ಹಾಜರಿದ್ದರು.