ಹೊಸವರ್ಷ: ಶಿವಗಂಗೆ ಬೆಟ್ಟಕ್ಕೆ ನಿಷೇಧ ಹೇರಿದ ಜಿಲ್ಲಾಡಳಿತ

| Published : Dec 31 2024, 01:03 AM IST

ಹೊಸವರ್ಷ: ಶಿವಗಂಗೆ ಬೆಟ್ಟಕ್ಕೆ ನಿಷೇಧ ಹೇರಿದ ಜಿಲ್ಲಾಡಳಿತ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಗಂಗೆ ಬೆಟ್ಟ ಪ್ರೇಮಿಗಳಿಗೆ ಹಾಟ್ ಸ್ಪಾಟ್ ಜಾಗ, ಬೆಟ್ಟದ ಮೇಲೆ ಹತ್ತಿದರೆ ಅಂದರೆ ತಂಪಾದ ಹವಾಗುಣ, ಗಿಡ, ಮರ, ಬಳ್ಳಿಗಳ ಸೊಬಗು, ಮಿಗಿಲಾಗಿ ಸಮುದ್ರಮಟ್ಟದಿಂದ 4 ಸಾವಿರ ಅಡಿಗಳ ಎತ್ತರದಲ್ಲಿ ನಿಂತು ಸೂರ್ಯೋದಯ ಹಾಗೂ ಸೂರ್ಯಸ್ತ ವಿಹಂಗಮ ನೋಟ ನೋಡುವುದಕ್ಕೆ ಫೇಮಸ್ ಆಗಿದೆ.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಸೋಂಪುರ ಹೋಬಳಿಯ ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ಶಿವಗಂಗೆ ಬೆಟ್ಟಕ್ಕೆ ಪ್ರಕೃತಿ ಮಡಿಲಲ್ಲಿ ಕುಡಿದು, ಕುಣಿದು, ಕುಪ್ಪಳಿಸಿ ಹೊಸ ವರ್ಷ 2025ನ್ನು ಆಚರಿಸೋಣ ಅಂತ ಪ್ಲಾನ್ ಮಾಡಿದ್ದವರಿಗೆ ಶಿವಗಂಗೆ ಬೆಟ್ಟಕ್ಕೆ ಹೊಸ ವರ್ಷಾಚರಣೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಸಂಪೂರ್ಣ ನಿಷೇಧ ಹೇರಿದೆ.

ಹೊಸ ವರ್ಷದ ವೇಳೆ ಪ್ರವಾಸಿಗರು ಹರಿದು ಬಂದು ಕಳವಳಕಾರಿ ಘಟನೆಗಳು ನಡೆಯುವ ಸಾಧ್ಯತೆಗಳಿರುವ ಹಿನ್ನೆಲೆ ಪ್ರತೀ ವರ್ಷದಂತೆ ಈ ವರ್ಷವೂ ಮುಂಜಾಗೃತಾ ಕ್ರಮವಾಗಿ ಪ್ರವೇಶವನ್ನೇ ನಿಷೇಧಿಸಲಾಗಿದೆ. ಮಂಗಳವಾರ ಸಂಜೆ 6 ಗಂಟೆಯಿಂದ ಜನವರಿ 1 ರ ಮಧ್ಯರಾತ್ರಿ 12 ಗಂಟೆಯವರೆಗೆ ಶಿವಗಂಗೆ ಬೆಟ್ಟ ಸೇರಿಂತೆ ಸಿದ್ದರಬೆಟ್ಟ, ಆವತಿಬೆಟ್ಟ ಮಾಕಳಿ ದುರ್ಗ, ನಂದಿಬೆಟ್ಟದ ತಪ್ಪಲು ಪ್ರದೇಶಗಳಿಗೂ ಯಾರಿಗೂ ಪ್ರವೇಶ ಇಲ್ಲ ಎಂದು ಬೆಂ.ಗ್ರಾ. ಡೀಸಿ ಡಾ.ಎನ್.ಶಿವಶಂಕರ್ ಆದೇಶ ಹೊರಡಿಸಿದ್ದಾರೆ.ಶಿವಗಂಗೆ ಬೆಟ್ಟ ಪ್ರೇಮಿಗಳಿಗೆ ಹಾಟ್ ಸ್ಪಾಟ್ ಜಾಗ, ಬೆಟ್ಟದ ಮೇಲೆ ಹತ್ತಿದರೆ ಅಂದರೆ ತಂಪಾದ ಹವಾಗುಣ, ಗಿಡ, ಮರ, ಬಳ್ಳಿಗಳ ಸೊಬಗು, ಮಿಗಿಲಾಗಿ ಸಮುದ್ರಮಟ್ಟದಿಂದ 4 ಸಾವಿರ ಅಡಿಗಳ ಎತ್ತರದಲ್ಲಿ ನಿಂತು ಸೂರ್ಯೋದಯ ಹಾಗೂ ಸೂರ್ಯಸ್ತ ವಿಹಂಗಮ ನೋಟ ನೋಡುವುದಕ್ಕೆ ಫೇಮಸ್ ಆಗಿದೆ.ಶಿವಗಂಗೆ ಬೆಟ್ಟದ ಮೇಲೆ ಕಾಣಸಿಗುವ ಬೆಳ್ಳಿ ಮೋಡ, ಇಬ್ಬನಿ, ಸುತ್ತಲೂ ಎತ್ತ ನೋಡಿದರೂ ಬೆಟ್ಟದ ಸಾಲುಗಳು, ಇಂಥ ಪ್ರಕೃತಿ ಸೊಬಗಿನಲ್ಲಿ ಕುಳಿತು ಹೊಸ ವರ್ಷ 2025ನ್ನು ಸ್ವಾಗತಿಸೋಣ ಅಂತ ಕೆಲವು ಪಾರ್ಟಿ ಪ್ರಿಯರು ಅಂದುಕೊಂಡಿದ್ದರು. ಹೊಸ ವರ್ಷಾಚರಣೆಗೆ ನಿಬರ್ಂಧ ವಿಧಿಸಿದ್ದಾರೆ. ಹೊಸ ವರ್ಷ ಆಚರಣೆಗೆ ಬೆಂಗಳೂರಿನ ಪಬ್ ರೆಸಾರ್ಟ್‍ಗಳ ಬದಲು ಪ್ರಕೃತಿಯ ಮಡಿಲಲ್ಲಿ ಹೊಸ ವರ್ಷಾಚರಣೆಯ ಕನಸ್ಸು ಕಂಡಿದ್ದ ಯುವ ಸಮುದಾಯ ಶಿವಗಂಗೆ ಬೆಟ್ಟದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಿದ್ದಕ್ಕೆ ನಿರಾಶೆ ವ್ಯಕ್ತಪಡಿಸಿದ್ದಾರೆ.