ಹೋರಾಟಗಾರರಿಗೆ ಸ್ಪೂರ್ತಿ ತುಂಬಿದ್ದ ಪತ್ರಿಕೆಗಳು

| Published : Jul 09 2024, 12:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಐಗಳಿ: ಸ್ವತಂತ್ರ ಚಳುವಳಿಯಲ್ಲಿ ಹೋರಾಟಗಾರರಿಗೆ ಸ್ಪೂರ್ತಿ ತುಂಬಿದ್ದ ಪತ್ರಿಕೆಗಳು ಇಂದು ಸಮಾಜದ ಅಂಕುಡೊಂಕು ತಿದ್ದುವಲ್ಲಿ ಯಶಸ್ವಿಯಾಗಿವೆ ಎಂದು ಮಾಜಿ ಶಾಸಕ ಶಹಜಾನ ಡೊಂಗರಗಾಂವ ಅನಿಸಿಕೆ ವ್ಯಕ್ತಪಡಿಸಿದರು.ತೆಲಸಂಗ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಥಣಿ ತಾಲೂಕು ಕಾರ್ಯನಿರತ ಗ್ರಾಮೀಣ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಜರುಗಿದ ಪತ್ರಿಕಾ ದಿನಾಚರಣೆ ಕಾರ್ಯಕ್ರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು

ಕನ್ನಡಪ್ರಭ ವಾರ್ತೆ ಐಗಳಿ:

ಸ್ವತಂತ್ರ ಚಳುವಳಿಯಲ್ಲಿ ಹೋರಾಟಗಾರರಿಗೆ ಸ್ಪೂರ್ತಿ ತುಂಬಿದ್ದ ಪತ್ರಿಕೆಗಳು ಇಂದು ಸಮಾಜದ ಅಂಕುಡೊಂಕು ತಿದ್ದುವಲ್ಲಿ ಯಶಸ್ವಿಯಾಗಿವೆ ಎಂದು ಮಾಜಿ ಶಾಸಕ ಶಹಜಾನ ಡೊಂಗರಗಾಂವ ಅನಿಸಿಕೆ ವ್ಯಕ್ತಪಡಿಸಿದರು.ತೆಲಸಂಗ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಥಣಿ ತಾಲೂಕು ಕಾರ್ಯನಿರತ ಗ್ರಾಮೀಣ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಜರುಗಿದ ಪತ್ರಿಕಾ ದಿನಾಚರಣೆ ಕಾರ್ಯಕ್ರದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಕಲೆ ಸಂಸ್ಕೃತಿ, ಕೃಷಿ, ಕ್ರೀಡೆ, ವಾಣಿಜ್ಯ, ರಾಜಕಿಯ ಸೇರಿದಂತೆ ಪ್ರಚಲಿತ ವಿದ್ಯಮಾನಗಳಿಗೆ 3ನೇ ಕಣ್ಣಿನಂತೆ ವಸ್ತುನಿಷ್ಟ ಸುದ್ದಿ ಸಿಗುವುದು ಪತ್ರಿಕೆಗಳಲ್ಲಿ ಮಾತ್ರ ಎಂದರು.

ಯುವ ಕಾಂಗ್ರೆಸ್ ಮುಖಂಡ ಚಿದಾನಂದ ಸವದಿ ಮಾತನಾಡಿ, ದೇಶದ ಅಭಿವೃದ್ಧಿ ವಿಷಯದಲ್ಲಿ ಪತ್ರಿಕೆಗಳ ಹಾಗೂ ಗ್ರಾಮೀಣ ಪತ್ರಕರ್ತರ ಪಾತ್ರ ಹಿರಿದಾಗಿದೆ. ತಂತ್ರಜ್ಞಾನ ಅದೆಷ್ಟೇ ಮುಂದುವರೆದಿದ್ದರೂ ನಿತ್ಯ ಬೆಳಗ್ಗೆ ಪತ್ರಿಕೆಗಳನ್ನು ಓದಲೇಬೇಕು. ಅಂದಾಗ ಮಾತ್ರ ನಿತ್ಯದ ದಿನಚರಿ ಸುಮಗವಾಗಿ ಸಾಗಲು ಮನಸ್ಸು ಸಹಕರಿಸುವುದು. ಇಂದು ಓದುವ ಹವ್ಯಾಸ ಕಡಿಮೆ ಆಗುತ್ತಿರುವುದು ವಿಪರ್ಯಾಸ ಎಂದರು.

ಹಿರಿಯ ಪತ್ರಕರ್ತ ವಾಸುದೇವ ಹೆರಕಲ್ ಉಪನ್ಯಾಸ ನೀಡಿ, ಬರೆಯುವ ಕೌಶಲ್ಯದ ಜೊತೆಗೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಜಪಾನ್‌, ಪ್ರೆಂಚ್‌ ಭಾಷೆಗಳನ್ನು ಕಲಿತರೆ ದೇಶ ವಿದೇಶಗಳ ಪತ್ರಿಕೆಗಳಲ್ಲಿಯೂ ಕೂಡ ಅವಕಾಶಗಳನ್ನು ಪಡೆಯಬಹುದು ಎಂದು ಸಲಹೆ ನೀಡಿದರು.

ಹಿರೇಮಠದ ವೀರೇಶ್ವರ ದೇವರು ಮಾತನಾಡಿ, ಅದೆಷ್ಟೇ ತಂತ್ರಜ್ಞಾನ ಮುಂದುರೆದರೂ ತನ್ನ ಅಭಿರುಚಿ ಕಳೆದುಕೊಂಡಿಲ್ಲ. ಅಂದು ಇಂದು ಮುಂದೆ ಎಂದೆಂದು ಪತ್ರಿಕೆಗಳಲ್ಲ್ಲಿ ಮಾತ್ರ ವಸ್ತುನಿಷ್ಠ ವರದಿ ಸಾಧ್ಯವಿದ್ದು, ಪತ್ರಿಕೆಗಳು ಉಳುವಿಗೆ ಜಾಹೀರಾತು ನೀಡಿ ಸಹಕರಿಸಿ ಎಂದರು.

ಪ್ರಾಚಾರ್ಯ ಶಿವಾನಂದ ಹಾಲೊಳ್ಳಿ, ಗ್ರಾಪಂ ಅಧ್ಯಕ್ಷೆ ಭಾರತಿ ಲೋಕಂಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.