12ರಂದು ನಿದ್ರಾದೇವಿ ನೆಕ್ಸ್ಟ್‌ ಡೋರ್‌ ಬೆಳ್ಳಿತೆರೆಗೆ

| Published : Sep 02 2025, 01:00 AM IST

12ರಂದು ನಿದ್ರಾದೇವಿ ನೆಕ್ಸ್ಟ್‌ ಡೋರ್‌ ಬೆಳ್ಳಿತೆರೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ನಿದ್ರಾ ದೇವಿ ನೆಕ್ಸ್ಟ್‌ ಡೋರ್ ಚಲನಚಿತ್ರವು ಸೆ.12ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಚಿತ್ರದುರ್ಗದ ಜಯರಾಂ ದೇವಸಮುದ್ರ ಹೇಳಿದ್ದಾರೆ.

- ಪ್ರವೀರ್‌ ಶೆಟ್ಟಿ, ರಿಶಿಕಾ ನಾಯಕ್ ಅಭಿನಯ: ನಿರ್ಮಾಪಕ ಜಯರಾಂ ಮಾಹಿತಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನಿದ್ರಾ ದೇವಿ ನೆಕ್ಸ್ಟ್‌ ಡೋರ್ ಚಲನಚಿತ್ರವು ಸೆ.12ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಚಿತ್ರದುರ್ಗದ ಜಯರಾಂ ದೇವಸಮುದ್ರ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೈರನ್ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಪ್ರವೀರ್ ಶೆಟ್ಟಿ ಇದೀಗ ಮತ್ತೊಂದು ವಿಭಿನ್ನ ಕಥೆ ಮೂಲಕ ಪ್ರೇಕ್ಷಕರನ್ನು ರಂಜಿಸಲು ತೆರೆಗೆ ಬರುತ್ತಿದ್ದಾರೆ ಎಂದರು.

ಪ್ರವೀರ್ ಶೆಟ್ಟಿಗೋಸ್ಕರ ಈ ಸಿನಿಮಾಕ್ಕೆ ಹಣ ಹಾಕಿದ್ದೇನೆ. ಕಥೆ ತುಂಬಾ ಚೆನ್ನಾಗಿದೆ. ಸುರಾಗ್ ಸಾಗರ್ ಬಂದು ಕಥೆ ಹೇಳಿದಾಗ ಮೊದಲ ಸಲ ಕೇಳಿದಾಗಲೇ ಇಷ್ಟವಾಯಿತು. ಪ್ರತಿಯೊಬ್ಬರ ಲೈಫ್‌ನಲ್ಲೂ ನಡೆಯುವ ಕೆಲ ಘಟನೆಗಳು ಚಿತ್ರದಲ್ಲಿ ಬಂದು ಹೋಗುತ್ತವೆ. ಕಾಮಿಡಿ ಜೊತೆಗೆ ಸಂದೇಶವೂ ಚಿತ್ರದಲ್ಲಿದೆ ಎಂದು ಹೇಳಿದರು.

ಸುರಾಗ್ ಸಾಗರ್ ಚಿತ್ರವನ್ನು ನಿರ್ದೇಶನ ಮಾಡಿದ್ದು, ನಿದ್ರಾದೇವಿ ನೆಕ್ಸ್ಟ್‌ ಡೋರ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಪ್ರವೀರ್ ಶೆಟ್ಟಿ ಜೊತೆಗೆ ಶೈನ್ ಶೆಟ್ಟಿ ಸಹ ಪ್ರಮುಖ ಪಾತ್ರದಲ್ಲಿದ್ದಾರೆ. ರಿಷಿಕಾ ನಾಯಕ್ ನಾಯಕಿಯಾಗಿದ್ದಾರೆ. ಪ್ರೇಕ್ಷಕರು ಚಿತ್ರ ಮಂದಿರದಲ್ಲಿ ಸಿನಿಮಾವನ್ನು ನೋಡಿ, ಬೆಂಬಲಿಸಿ, ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಚಿತ್ರದ ನಾಯಕ ಪ್ರವೀರ್ ಶೆಟ್ಟಿ ಮಾತನಾಡಿ, ನಿದ್ರೆ ಬಾರದ ಹುಡುಗ ಏನೇನೋ ಕಷ್ಟಪಡುತ್ತಾನೆ. ಅದರ ಸುತ್ತಲೂ ನನ್ನ ಪಾತ್ರ ಸಾಗುತ್ತದೆ. ನನ್ನದು ಇಂಟ್ರೆಸ್ಟಿಂಗ್ ಪಾತ್ರವಾಗಿದೆ. ಹಿಂದಿನ ಚಿತ್ರಗಳಿಗೆ ಹೋಲಿಸಿದರಲ್ಲಿ ಇದರಲ್ಲಿ ವಿಭಿನ್ನ ಪಾತ್ರವಿದೆ. ಕಳೆದೊಂದು ತಿಂಗಳಿನಿಂದಲೂ ರಿಹರ್ಸಲ್ ಮಾಡುತ್ತಿದ್ದೇವೆ ಎಂದರು.

ನಾಯಕಿ ರಿಷಿಕಾ ನಾಯಕ್ ಮಾತನಾಡಿ, ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಒಂದು ಒಳ್ಳೆಯ ತಂಡದ ಜೊತೆಗೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗಿದೆ. ಸೆಪ್ಟಂಬರ್ 12ರಂದು ಚಿತ್ರ ಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ ಎಂದರು.

ಕನ್ನಡಪರ ಹೋರಾಟಗಾರರಾದ ಜಮ್ನಳ್ಳಿ ನಾಗರಾಜ, ಉಮೇಶ್ ಗೌಡ, ಅನೂಪ್‌ ಹಿಜಾರಿ, ಸೈಯದ್ ನಜೀರ್, ನಾಗರಾಜ ಆದಾಪುರ, ಗೀತಾ ಇತರರು ಇದ್ದರು.

- - -

(ಬಾಕ್ಸ್‌) * ಇಬ್ಬರದ್ದೂ ನಿದ್ದೆ ಇಲ್ಲದ ಜರ್ನಿ: ಸುರಾಗ್‌ ಸಾಗರ್‌ ಚಿತ್ರದ ನಿರ್ದೇಶಕ ಸುರಾಗ್ ಸಾಗರ್ ಮಾತನಾಡಿ, ನಮ್ಮ ಸಿನಿಮಾ ಟೈಟಲ್ ವಿಭಿನ್ನ. ಇದು ಕಾಕತಾಳೀಯ. ಇಬ್ಬರದ್ದೂ ನಿದ್ದೆ ಇಲ್ಲದ ಜರ್ನಿ. ಅವರಿಗೆ ಯಾಕೆ ನಿದ್ದೆ ಬರೋಲ್ಲ, ಇದಕ್ಕೆ ಪರಿಹಾರ ಏನು, ಅದರೊಳಗೆ ಕಂಡುಕೊಳ್ಳುವ ಲವ್ ಸ್ಟೋರಿ. ಮುಂದಿನ ಕಥೆಯನ್ನು ತಿಳಿಯಲು ಸಿನಿಮಾ ನೋಡಬೇಕು ಎಂದರು. ನಿದ್ರಾದೇವಿ ನೆಕ್ಸ್ಟ್‌ ಡೋರ್ ಚಿತ್ರದ ಮೂಲಕ ತಾವು ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದು, ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದೇನೆ. ಹಿರಿಯ ನಟಿ ಸುಧಾರಾಣಿ, ಶ್ರೀವತ್ಸ, ಕಾರ್ತಿಕ್ ಪತ್ತಾರ್ ಮತ್ತು ಅನುರಾಗ್ ಪಾಟೀಲ್ ಸೇರಿದಂತೆ ಇತರರು ತಾರಾಬಗಳದಲ್ಲಿ ಇದ್ದಾರೆ. ರಾಜು ಬೋನಗಾನಿ ರೋಡಿಯಂ ಎಂಟರ್ಟೈನ್ಮೆಂಟ್ ಸಹಯೋಗದೊಂದಿಗೆ ಸೂರಂ ಮೂವೀಸ್ ಬ್ಯಾನರ್‌ನಡಿ ಜಯರಾಮ್ ದೇವಸಮುದ್ರ ನಿರ್ಮಿಸಿರುವ ಈ ಚಿತ್ರಕ್ಕೆ ಅಜಯ್ ಕುಲಕರ್ಣಿ ಛಾಯಾಗ್ರಹಣ ಮತ್ತು ನಕುಲ್ ಅಭ್ಯಂಕರ್ ಸಂಗೀತವಿದೆ ಎಂದು ತಿಳಿಸಿದರು.

- - -

-1ಕೆಡಿವಿಜಿ6.ಜೆಪಿಜಿ:

ದಾವಣಗೆರೆಯಲ್ಲಿ ಸೋಮವಾರ ನಿದ್ರಾದೇವಿ ನೆಕ್ಸ್ಟ್‌ ಡೋರ್ ಸಿನಿಮಾದ ನಿರ್ಮಾಪಕ, ನಿರ್ದೇಶಕ, ನಾಯಕ- ನಾಯಕಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.