ನೈಟಿಂಗೇಲ್ ನರ್ಸಿಂಗ್ ಸೇವೆ ಮಾದರಿ: ಶಸ್ತ್ರಚಿಕಿತ್ಸಕ ತಜ್ಞ ವೈದ್ಯೆ ಡಾ. ರೈಸಾ

| Published : May 15 2025, 01:33 AM IST

ನೈಟಿಂಗೇಲ್ ನರ್ಸಿಂಗ್ ಸೇವೆ ಮಾದರಿ: ಶಸ್ತ್ರಚಿಕಿತ್ಸಕ ತಜ್ಞ ವೈದ್ಯೆ ಡಾ. ರೈಸಾ
Share this Article
  • FB
  • TW
  • Linkdin
  • Email

ಸಾರಾಂಶ

ನೈಟಿಂಗಲ್ ಜನುಮ ದಿನದಂದು ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸುವುದರ ಜತೆ ಜಗತ್ತಿನಲ್ಲಿ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕರ ಸೇವೆಯನ್ನೂ ಸ್ಮರಿಸಲಾಗುತ್ತದೆ.

ಶಿಗ್ಗಾಂವಿ: ಜನಸೇವೆಯೇ ದೇಶಸೇವೆ ಮತ್ತು ದೇವರ ಸೇವೆ ಎಂದು ನಂಬಿ ಜೀವನವನ್ನೇ ಮುಡುಪಾಗಿಟ್ಟ ಮಹಿಳೆ ನೈಟಿಂಗೇಲ್ ಎಂದು ತಾಲೂಕು ಆಸ್ಪತ್ರೆ ಶಸ್ತ್ರಚಿಕಿತ್ಸಕ ತಜ್ಞ ವೈದ್ಯೆ ಡಾ. ರೈಸಾ ತಿಳಿಸಿದರು.ಪಟ್ಟಣದ ಹೊರವಲಯದಲ್ಲಿರುವ ಫಿನಿಕ್ಸ್ ಇಂಟರ್‌ನ್ಯಾಷನಲ್ ಸಮೂಹ ಸಂಸ್ಥೆಯ ಬಿಎಸ್‌ಸಿ ನರ್ಸಿಂಗ್ ಕಾಲೇಜಿನಲ್ಲಿ ಫ್ಲಾರೆನ್ಸ್ ನೈಟಿಂಗಲ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೈಟಿಂಗಲ್ ಜನುಮ ದಿನದಂದು ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸುವುದರ ಜತೆ ಜಗತ್ತಿನಲ್ಲಿ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕರ ಸೇವೆಯನ್ನೂ ಸ್ಮರಿಸಲಾಗುತ್ತದೆ ಎಂದರು.ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರಭು ಕೆ. ಮಾತನಾಡಿ, ಯುದ್ಧದಲ್ಲಿ ಅವರು ಸಲ್ಲಿಸಿರುವ ಶುಶ್ರೂಷ ಸೇವೆಯನ್ನು ಮಾನವ ಕುಲ ಮರೆಯಲಾಗದು. ಸಾವಿರಾರು ಸೈನಿಕರು ಇಂದಿನ ಮಿಲಿಟರಿ ನರ್ಸಿಂಗ್ ಸೇವೆಗಳಿಗೆ ನೈಟಿಂಗೇಲ್ ಹಾಕಿಕೊಟ್ಟ ಮಾರ್ಗವೇ ಭದ್ರ ಬುನಾದಿಯಾಗಿದೆ ಎಂದರು.ಈ ಸಂದರ್ಭದಲ್ಲಿ ಫಿನಿಕ್ಸ್ ಸಂಸ್ಥೆ ಅಧ್ಯಕ್ಷ ಡಾ. ಎಂ.ಎಂ. ತಿರ್ಲಾಪೂರ, ಉಪಾಧ್ಯಕ್ಷ ನರಹರಿ ಕಟ್ಟಿ, ಕಾರ್ಯದರ್ಶಿ ಡಾ. ರಾಣಿ ತಿರ್ಲಾಪೂರ ಸೇರಿದಂತೆ ನರ್ಸಿಂಗ್ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಶಾಂಕ ಕೌಜಲಗಿ ಕಾರ್ಯಕ್ರಮ ನಿರ್ವಹಿಸಿದರು.ವಿವಿ ಅಭಿವೃದ್ಧಿಗೆ ಅನುದಾನ ನೀಡುವಂತೆ ಆಗ್ರಹ

ಹಾವೇರಿ: ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚುವ ಕುರಿತು ಆತುರದ ತೀರ್ಮಾನ ತೆಗೆದುಕೊಳ್ಳದೇ ಇರಲು ನಿರ್ಧರಿಸಿರುವ ಸರ್ಕಾರದ ಕ್ರಮವನ್ನು ಹಾವೇರಿ ವಿಶವಿದ್ಯಾಲಯ ಉಳಿಸಿ ಹೋರಾಟ ಸಮಿತಿಯು ಸ್ವಾಗತಿಸಿದ್ದು, ವಿಶ್ವವಿದ್ಯಾಲಯವು ಅಭಿವೃದ್ದಿಗೊಳ್ಳುವ ನಿಟ್ಟಿನಲ್ಲಿ ಅಗತ್ಯ ಅನುದಾನವನ್ನು ನೀಡಬೇಕು ಎಂದು ಆಗ್ರಹಿಸಿದೆ.

ಹಾವೇರಿ ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿರುವ 9 ವಿಶ್ವವಿದ್ಯಾಲಯಗಳನ್ನು ರಾಜ್ಯ ಸರ್ಕಾರ ಮುಚ್ಚಲು ತೀರ್ಮಾನಿಸಿತ್ತು. ಸರ್ಕಾರದ ಈ ತೀರ್ಮಾನವನ್ನು ವಿರೋಧಿಸಿ ಹಾವೇರಿ ಸೇರಿ ರಾಜ್ಯದ ಎಲ್ಲಡೆಯೂ ಪ್ರತಿರೋಧ ವ್ಯಕ್ತವಾಗಿತ್ತು. ಹಾವೇರಿ ಜಿಲ್ಲೆಯಲ್ಲಂತೂ ವಿಶ್ವವಿದ್ಯಾಲಯ ಮುಚ್ಚದಂತೆ ಹಾಗೂ ವಿಲೀನ ಮಾಡದಂತೆ ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು.ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ವಿಶ್ವವಿದ್ಯಾಲಯವನ್ನು ಮುಚ್ಚುವ ಹಾಗೂ ವಿಲೀನಗೊಳಿಸುವ ಕ್ರಮ ಕೈಗೊಳ್ಳಬಾರದು. ಒಂದು ವೇಳೆ ಮುಚ್ಚುವ ಹಾಗೂ ವಿಲೀನಗೊಳಿಸಲು ಮುಂದಾದರೆ ದೊಡ್ಡಮಟ್ಟದಲ್ಲಿ ಆಂದೋಲನ ನಡೆಸಲಾಗುವುದು ಎಂದು ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಒತ್ತಾಯಿಸುತ್ತದೆ ಎಂದು ಸಮಿತಿಯ ಬಸವರಾಜ ಪೂಜಾರ ತಿಳಿಸಿದ್ದಾರೆ.