ಸಾರಾಂಶ
ಇಲ್ಲಿನ ಮಹಾವೀರ ಉದ್ಯೋಗ ಸಮೂಹ ಸಂಸ್ಥೆಗಳ ಅಧ್ಯಕ್ಷ ಮಹಾವೀರ ನಿಲಜಗಿ ಹಾಗೂ ಪದ್ಮಶ್ರೀ ಮಹಾವೀರ ನಿಲಜಗಿ ದಂಪತಿಗೆ ಕೊಲ್ಲಾಪುರ ಶ್ರೀ ಲಕ್ಷ್ಮೀಸೇನ ಜೈನ ಮಠದ ಆದರ್ಶ ದಂಪತಿ ಪುರಸ್ಕಾರಕ್ಕೆ ಪಾತ್ರವಾಗಿದ್ದಾರೆ.
ಹುಕ್ಕೇರಿ : ಇಲ್ಲಿನ ಮಹಾವೀರ ಉದ್ಯೋಗ ಸಮೂಹ ಸಂಸ್ಥೆಗಳ ಅಧ್ಯಕ್ಷ ಮಹಾವೀರ ನಿಲಜಗಿ ಹಾಗೂ ಪದ್ಮಶ್ರೀ ಮಹಾವೀರ ನಿಲಜಗಿ ದಂಪತಿಗೆ ಕೊಲ್ಲಾಪುರ ಶ್ರೀ ಲಕ್ಷ್ಮೀಸೇನ ಜೈನ ಮಠದ ಆದರ್ಶ ದಂಪತಿ ಪುರಸ್ಕಾರಕ್ಕೆ ಪಾತ್ರವಾಗಿದ್ದಾರೆ. ಮಠದಲ್ಲಿ ನಡೆದ ಸಮಾರಂಭದಲ್ಲಿ ತತ್ವಾರ್ಥನಂದಿ ಮುನಿಮಹಾರಾಜ್ ಮತ್ತು ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾರಾಜರು, ನಿಲಜಗಿ ದಂಪತಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದರು.
ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸಹಕಾರಿ ಕ್ಷೇತ್ರದಲ್ಲಿ ಅನನ್ಯ ಕೊಡುಗೆ ನೀಡಿರುವುದನ್ನು ಗುರುತಿಸಿ ನಿಲಜಗಿ ದಂಪತಿಗೆ ಈ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಈ ವೇಳೆ ಅನುಪಮಾ, ಪ್ರಜ್ವಲ, ಪ್ರೀಯಾ ಮತ್ತಿತರರು ಉಪಸ್ಥಿತರಿದ್ದರು.
ಈ ಪುರಸ್ಕಾರವು ತಮ್ಮ ಜವಾಬ್ದಾರಿ ಹೆಚ್ಚಿಸಿದ್ದು ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತಷ್ಟು ಕೆಲಸ ಮಾಡಲು ಪ್ರೇರೇಪಣೆಯಾಗಲಿದೆ.
-ಮಹಾವೀರ ನಿಲಜಗಿ, ಮಹಾವೀರ ಉದ್ಯೋಗ ಸಮೂಹ ಸಂಸ್ಥೆಗಳ ಅಧ್ಯಕ್ಷರು.