ಕನ್ನಡಪ್ರಭ ವಾರ್ತೆ ಬೆಳಗಾವಿ ನಗರದ ನೆಹರು ನಗರದ ಕೊಲ್ಲಾಪುರ ವೃತ್ತದ ಬಳಿ ನೂತನವಾಗಿ ಆರಂಭಗೊಂಡಿರುವ ನೀಲಕಮಲ್ ಹೋಮ್ಸ್ ಶೋರೂಂನ್ನು ಕಾರಂಜಿ ಮಠದ ಗುರುಸಿದ್ದ ಸ್ವಾಮೀಜಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ನೆಹರು ನಗರದ ಕೊಲ್ಲಾಪುರ ವೃತ್ತದ ಬಳಿ ನೂತನವಾಗಿ ಆರಂಭಗೊಂಡಿರುವ ನೀಲಕಮಲ್ ಹೋಮ್ಸ್ ಶೋರೂಂನ್ನು ಕಾರಂಜಿ ಮಠದ ಗುರುಸಿದ್ದ ಸ್ವಾಮೀಜಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು.ಈ ವೇಳೆ ಸಚಿವ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಬೆಳಗಾವಿ ಅತಿ ವೇಗದಲ್ಲಿ ಬೆಳೆಯುತ್ತಿರುವ ನಗರವಾಗಿದ್ದು, ಇಲ್ಲಿ ಮಕ್ಕಳು, ಮಹಿಳೆಯರು ಹಾಗೂ ರೈತರಿಗೆ ಬೆಳೆಯಲು ಪೂರಕವಾದ ವಾತಾವರಣವಿದೆ. ಇಂತಹ ಶೋರೂಂಗಳು ಆರಂಭವಾಗುವುದು ನಗರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಉದ್ಯೋಗದಲ್ಲಿ ಯಶಸ್ಸು ಕಾಣಲು ಜನರ ಆಶ್ರಯ ಮತ್ತು ಸಹಕಾರ ಅತ್ಯಗತ್ಯ ಎಂದು ಹೇಳಿದರು.ಶೋರೂಂನ ಸಂಚಾಲಕರಾದ ಸಂತೋಷ ಪಾವಟೆ ಮತ್ತು ಸುಭಾಷಿತ ಪಾವಟೆ ಮಾತನಾಡಿ, ನೀಲಕಮಲ್ ಹೋಮ್‌ನಲ್ಲಿ ಒಂದೇ ಸೂರಿನಡಿ ಲೀವಿಂಗ್ ರೂಮ್, ಬೆಡ್ ರೂಮ್, ಡೈನಿಂಗ್, ಕಿಚನ್, ಫರ್ನಿಶಿಂಗ್, ಗಿಪ್ಟಿಂಗ್, ಮಾಟ್ರೇಸ್, ಸೋಫಾ, ಸೋಫಾ ಕಮ್ ಬೆಡ್, ಟೇಬಲ್ಸ್, ಟಿ.ವಿ. ಯುನಿಟ್ಸ್ ಮತ್ತು ಶೂ ರಾಕ್ಸ್‌ನಂತಹ ಅನೇಕ ವಸ್ತುಗಳು ಲಭ್ಯವಿವೆ. ಅಲ್ಲದೆ, ಗ್ರಾಹಕರ ಬೇಡಿಕೆ ಮತ್ತು ಬಜೆಟ್‌ಗೆ ಅನುಗುಣವಾಗಿ ಕೈಗೆಟಕುವ ದರದಲ್ಲಿ ಅತ್ಯಾಧುನಿಕ ಫರ್ನಿಚರ್ ಒದಗಿಸಲಾಗುತ್ತಿದೆ. ಉದ್ಘಾಟನೆಯ ನಿಮಿತ್ತ ಒಂದು ವಾರದ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುಭಾಷ ಪಾವಟಿ, ನಂಜೇಗೌಡ, ನಾಗರಾಜ್ ಪಾಟೀಲ, ಬಸವರಾಜ ಜವಳಿ, ಕಿರಣ ಅಂಗಡಿ, ಡಾ.ವಿನಯ್ ದಾಸ್ತಿಕೊಪ್ಪ, ಶಿಲ್ಪಾ ದಾಸ್ತಿಕೊಪ್ಪ ಎಂ.ಜೆ.ಶಿವಕುಮಾರ ಮೊದಲಾದವರು ಉಪಸ್ಥಿತರಿದ್ದರು.