ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಚನ್ನರಾಯಪಟ್ಟಣ ವಕೀಲರ ಸಂಘಕ್ಕೆ ೨೦೨೬-೨೭ನೇ ಸಾಲಿಗೆ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ. ಆರ್. ನಿಂಗರಾಜು, ಉಪಾಧ್ಯಕ್ಷರಾಗಿ ಬಿ. ಪಿ. ಪ್ರದೀಪ್ ಕುಮಾರ್, ಕಾರ್ಯದರ್ಶಿಯಾಗಿ ಅನಿಲ್ ಕುಮಾರ್, ಖಜಾಂಚಿಯಾಗಿ ಕೆ. ಎಲ್. ಚೇತನ್ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಚೇತನ ವಾಸು ಆಯ್ಕೆಗೊಂಡರು.೨೦೨೬-೨೭ನೇ ಸಾಲಿಗೆ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಎಂ. ಆರ್. ನಿಂಗರಾಜು ೬೯ ಮತ, ಎನ್. ಕೆ. ನಟರಾಜ್ ೪೬ ಮತ, ಹಾಗೂ ಎ. ಗಿರೀಶ್ ೩೬ ಮತ ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಬಿ. ಪಿ. ಪ್ರದೀಪ್ ಕುಮಾರ್ ೭೪ ಮತ, ಸಿ. ಎನ್. ರಾಘವೇಂದ್ರ ೬೪ ಮತ ಹಾಗೂ ಟಿ.ಕೆ.ಹಲಗಪ್ಪ ೧೩ ಮತ ಪಡೆದರು. ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಅನಿಲ್ ಕುಮಾರ್ ೬೯ ಮತ, ಎಸ್. ಎಂ. ನವೀನ್ ಕುಮಾರ್ ೫೧ ಮತ ಹಾಗೂ ಪಿ. ದಿನೇಶ್ ೩೦ ಮತ ಪಡೆದರು. ಇನ್ನೂ ಖಜಾಂಚಿ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಕೆ. ಎಲ್. ಚೇತನ್ ೬೦ ಮತ, ಎನ್.ಆರ್. ಅನಂತ್ ಕುಮಾರ್ ೪೨ ಮತ, ವಿ.ಕೆ.ರಮೇಶ್ ೪೯ ಮತ ಪಡೆದರು. ಸತತ ಎರಡನೇ ಬಾರಿಗೆ ಚೇತನ್ ಕುಮಾರ್ ಖಜಾಂಚಿಯಾಗಿ ಜಯಗಳಿಸಿದರು. ಜಂಟಿ ಕಾರ್ಯದರ್ಶಿಯಾಗಿ ಚೇತನವಾಸು ಅವಿರೋಧವಾಗಿ ಆಯ್ಕೆಗೊಂಡರು. ಅಂತಿಮವಾಗಿ ಎಂ. ಆರ್. ನಿಂಗರಾಜ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಬಿ. ಪಿ. ಪ್ರದೀಪ್ ಕುಮಾರ್, ಕಾರ್ಯದರ್ಶಿಯಾಗಿ ಅನಿಲ್ ಕುಮಾರ್, ಖಜಾಂಚಿಯಾಗಿ ಕೆ. ಎಲ್. ಚೇತನ್, ಜಂಟಿ ಕಾರ್ಯದರ್ಶಿಯಾಗಿ ಚೇತನವಾಸು ಆಯ್ಕೆಗೊಂಡರು.ನೂತನ ಅಧ್ಯಕ್ಷ ನಿಂಗರಾಜು ಮಾತನಾಡಿ, ಸಂಘದ ಎಲ್ಲಾ ಸದಸ್ಯರ ಸಹಕಾರದಿಂದ ಮುಂಬರುವ ದಿನಗಳಲ್ಲಿ ಸಂಘದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ಕಾರ್ಯದರ್ಶಿ ಅನಿಲ್ ಕುಮಾರ್ ಮಾತನಾಡಿ ವಕೀಲರ ಸಮಸ್ಯೆಗಳಿಗೆ ಮುಂಬರುವ ದಿನಗಳಲ್ಲಿ ಸಂಘದ ಎಲ್ಲಾ ಸದಸ್ಯರ ಸಹಕಾರದಿಂದ ಸ್ಪಂದಿಸುವುದಾಗಿ ಹೇಳಿದರು.ಖಜಾಂಚಿ ಕೆ. ಎಲ್. ಚೇತನ್ ಮಾತನಾಡಿ, ಇಡೀ ಜಿಲ್ಲೆಯಲ್ಲೇ ಚನ್ನರಾಯಪಟ್ಟಣ ತಾಲೂಕು ವಕೀಲರ ಸಂಘ ಮಾದರಿ ಸಂಘವನ್ನಾಗಿ ಮಾಡಲು ಶ್ರಮಿಸುವುದಾಗಿ ತಿಳಿಸಿದರು. ಉಪಾಧ್ಯಕ್ಷ ಬಿ.ಪಿ.ಪ್ರದೀಪ್ ಕುಮಾರ್ ಹಾಗೂ ಜಂಟಿ ಚೇತನ ವಾಸು ಕಾರ್ಯದರ್ಶಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರು ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿದರು.ಚುನಾವಣಾಧಿಕಾರಿಯಾಗಿ ಡಿ. ಕೆ. ಹರೀಶ್, ಸಿ.ಬಿ. ಹೇಮಂತ್ ಕುಮಾರ್, ಚಿನ್ಮಯ್, ಜಯಂತ್, ಶ್ರೀನಿವಾಸ್, ಸುಶ್ಮಿತಾ, ಕರ್ತವ್ಯ ನಿರ್ವಹಿಸಿದರು.ಈ ಸಂದರ್ಭದಲ್ಲಿ ವಕೀಲರಾದ ರಂಗಶೆಟ್ಟರು, ಬಿ. ಸಿ. ಮುರಳಿಧರ್, ಬೋರೇಗೌಡ, ಎಲ್. ಪಿ. ಪ್ರಕಾಶ್ ಗೌಡ, ದೇವರಾಜ್, ಕರಿಕ್ಯಾತನಹಳ್ಳಿ ಕಾಂತರಾಜ್, ವಾಸು, ಅಶ್ವಥ್, ವಿಶ್ವನಾಥ್, ಕುಮಾರ್, ಜಲೇಂದ್ರ, ಬಸವರಾಜ್, ಅನುಕುಮಾರ್, ಜಯಂತ್, ಚಿನ್ಮಯ್ ಸೇರಿದಂತೆ ಇತರರು ಹಾಜರಿದ್ದರು.ವಕೀಲರ ಸಂಘದ ಅಧ್ಯಕ್ಷರಾಗಿ ನಿಂಗರಾಜು ಆಯ್ಕೆ
ಚನ್ನರಾಯಪಟ್ಟಣ ವಕೀಲರ ಸಂಘಕ್ಕೆ ೨೦೨೬-೨೭ನೇ ಸಾಲಿಗೆ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ. ಆರ್. ನಿಂಗರಾಜು, ಉಪಾಧ್ಯಕ್ಷರಾಗಿ ಬಿ. ಪಿ. ಪ್ರದೀಪ್ ಕುಮಾರ್, ಕಾರ್ಯದರ್ಶಿಯಾಗಿ ಅನಿಲ್ ಕುಮಾರ್, ಖಜಾಂಚಿಯಾಗಿ ಕೆ. ಎಲ್. ಚೇತನ್ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಚೇತನ ವಾಸು ಆಯ್ಕೆಗೊಂಡರು. ಮುಂಬರುವ ದಿನಗಳಲ್ಲಿ ಸಂಘದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ಕಾರ್ಯದರ್ಶಿ ಅನಿಲ್ ಕುಮಾರ್ ಮಾತನಾಡಿ ವಕೀಲರ ಸಮಸ್ಯೆಗಳಿಗೆ ಮುಂಬರುವ ದಿನಗಳಲ್ಲಿ ಸಂಘದ ಎಲ್ಲಾ ಸದಸ್ಯರ ಸಹಕಾರದಿಂದ ಸ್ಪಂದಿಸುವುದಾಗಿ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.