ಕನಕಪುರ: ರೈತರ ಅಭ್ಯುದಯಕ್ಕಾಗಿ ಕಟ್ಟಿರುವ ಸಂಸ್ಥೆಯ ಸರ್ಕಾರಿ ಸವಲತ್ತುಗಳನ್ನು ರೈತರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯ್‌ದೇವ್ ತಿಳಿಸಿದರು

ಕನಕಪುರ: ರೈತರ ಅಭ್ಯುದಯಕ್ಕಾಗಿ ಕಟ್ಟಿರುವ ಸಂಸ್ಥೆಯ ಸರ್ಕಾರಿ ಸವಲತ್ತುಗಳನ್ನು ರೈತರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯ್‌ದೇವ್ ತಿಳಿಸಿದರು.

ತಾಲೂಕಿನ ಸಾತನೂರು ಹೋಬಳಿ ಅಚ್ಚಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನೂತನ ಅಧ್ಯಕ್ಷ ನಿಂಗೇಗೌಡರನ್ನು ಅಭಿನಂದಿಸಿ ಮಾತನಾಡಿದ ಅವರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರಿಗೆ ಸೌಲಭ್ಯ ಕಲ್ಪಿಸುವ ಮೂಲ ಉದ್ದೇಶ ಇಟ್ಟುಕೊಂಡಿವೆ. ಸರ್ಕಾರಿ ಅನುದಾನ ಹಾಗೂ ಸವಲತ್ತುಗಳನ್ನು ಬಳಸಿಕೊಂಡು ನೂತನ ಅಧ್ಯಕ್ಷರು ಸಂಘವನ್ನು ಅಭಿವೃದ್ಧಿ ಪಡಿಸಲಿ ಎಂದು ಹಾರೈಸಿದರು.

ಸಂಘದ ನೂತನ ಅಧ್ಯಕ್ಷ ನಿಂಗೇಗೌಡ ಮಾತನಾಡಿ, ನನ್ನ ಮೇಲೆ ನಂಬಿಕೆ ಹಾಗೂ ವಿಶ್ವಾಸವಿಟ್ಟು ನಮ್ಮ ನಾಯಕರು ನನಗೆ ಈ ಅವಕಾಶ ಕೊಟ್ಟಿರುವುದಕ್ಕೆ ಧನ್ಯವಾದ ಅರ್ಪಿಸಿದರು.

ಈ ವೇಳೆ ಮುಖಂಡರಾದ ಸುರೇಶ್, ಕೃಷ್ಣಪ್ಪ, ರಂಗಯ್ಯ, ಸತೀಶ್, ರಾಜೇಂದ್ರ, ಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ನಟೇಶ್ ಹಾಗೂ ಸಂಘದ ನಿರ್ದೇಶಕರಾದ ಲೋಕೇಶ್, ಶಶಿಕಲಾ ಬೆಟ್ಟೇಗೌಡ, ಜುಬೇದ್ ಷರೀಫ್, ಅಭಿನಂದನ್ ಕುಮಾರ್, ಸವಿತಾ ಜಯರಾಮು, ಜೆ.ಎಂ.ನಾಗೇಶ್, ರಮೇಶ್, ವರದರಾಜು, ಸಿದ್ಧರಾಜು, ವೆಂಕಟೇಶ್, ಲೋಕೇಶ್, ಯೋಗೇಶ್ ಹಾಗೂ ಸಂಘದ ಸಿಇಒ ವಿಜಯ್ ಕುಮಾರ್ ಯಾದವ್, ಲೆಕ್ಕಾಧಿಕಾರಿ ಸೌಂದರ್ಯ ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 02:

ಕನಕಪುರ ತಾಲೂಕಿನ ಅಚ್ಚಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ನಿಂಗೇಗೌಡರನ್ನು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯ್‌ದೇವ್‌, ಮುಖಂಡರಾದ ಸುರೇಶ್, ಕೃಷ್ಣಪ್ಪ, ರಂಗಯ್ಯ, ಸತೀಶ್, ರಾಜೇಂದ್ರ, ಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ನಟೇಶ್, ಸಂಘದ ನಿರ್ದೇಶಕರು ಅಭಿನಂದಿಸಿದರು.