ಅರಳಕುಪ್ಪೆ ಗ್ರಾಪಂ ಅಧ್ಯಕ್ಷರಾಗಿ ನಿರ್ಮಲಾ ಅವಿರೋಧ ಆಯ್ಕೆ

| Published : Jan 10 2025, 12:48 AM IST

ಅರಳಕುಪ್ಪೆ ಗ್ರಾಪಂ ಅಧ್ಯಕ್ಷರಾಗಿ ನಿರ್ಮಲಾ ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಪಂನ ಹಿಂದಿನ ಅಧ್ಯಕ್ಷ ರಾಜು ಹಾಗೂ ಉಪಾಧ್ಯಕ್ಷ ಶಿವರಾಮು ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಸದಸ್ಯರಾದ ಆರ್.ನಿರ್ಮಲಾ ಹಾಗೂ ವಿ.ಎಸ್.ವಿನುತ ಹೊರತು ಪಡಿಸಿ ಯಾವ ಸದಸ್ಯರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯೂ ಆದ ತಾಪಂ ಇಒ ಲೋಕೇಶ್‌ಮೂರ್ತಿ ಘೋಷಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಅರಳಕುಪ್ಪೆ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಆರ್.ನಿರ್ಮಲಾ ನಾಗರಾಜು, ವಿ.ಎಸ್.ವಿನುತ ಸೋಮಾಚಾರಿ ಗುರುವಾರ ಅವಿರೋಧವಾಗಿ ಆಯ್ಕೆಯಾದರು.

ಗ್ರಾಪಂನ ಹಿಂದಿನ ಅಧ್ಯಕ್ಷ ರಾಜು ಹಾಗೂ ಉಪಾಧ್ಯಕ್ಷ ಶಿವರಾಮು ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಸದಸ್ಯರಾದ ಆರ್.ನಿರ್ಮಲಾ ಹಾಗೂ ವಿ.ಎಸ್.ವಿನುತ ಹೊರತು ಪಡಿಸಿ ಯಾವ ಸದಸ್ಯರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯೂ ಆದ ತಾಪಂ ಇಒ ಲೋಕೇಶ್‌ಮೂರ್ತಿ ಘೋಷಿಸಿದರು.

ಅಧ್ಯಕ್ಷೆಯಾಗಿ ಆರ್.ನಿರ್ಮಲಾ ನಾಗರಾಜು, ಉಪಾಧ್ಯಕ್ಷೆಯಾಗಿ ವಿ.ಎಸ್.ವಿನುತ ಸೋಮಾಚಾರಿ ಆಯ್ಕೆಯಾಗುತ್ತಿದ್ದಂತೆ ಬೆಂಬಲಿಗರು ಪಟಾಕಿಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು. ಎಲ್ಲಾ ಸದಸ್ಯರು, ಕಾರ್‍ಯಕರ್ತರು ನೂತನ ಅಧ್ಯಕ್ಷೆ, ಉಪಾಧ್ಯಕ್ಷೆಗೆ ಅಭಿನಂಧಿಸಿದರು.

ಅಧ್ಯಕ್ಷೆ ಆರ್.ನಿರ್ಮಲಾ ನಾಗರಾಜು ಮಾತನಾಡಿ, ಮಾಜಿ ಸಚಿವ, ಸಿ.ಎಸ್.ಪುಟ್ಟರಾಜಣ್ಣರ ಆಶೀರ್ವಾದ ಹಾಗೂ ಗ್ರಾಪಂ ಸದಸ್ಯರ ಸಹಕಾರದಿಂದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲರ ಸಲಹೆ, ಸಹಕಾರ ಪಡೆದು ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಈ ವೇಳೆ ಗ್ರಾಪಂ ಸದಸ್ಯರಾದ ರವಿಕುಮಾರ್, ಮಹೇಶ್, ಅಶೋಕ, ಉಮೇಶ್, ರಾಜು, ಶಿವರಾಮು, ರಾಜಮ್ಮ, ಸುನಂದಮ್ಮ, ಮಾಜಿ ಅಧ್ಯಕ್ಷರಾದ ಮಹದೇವು, ಸೀತಾಪುರವಿಶ್ವನಾಥ್, ಮುಖಂಡರಾದ ಕುಳ್ಳೇಗೌಡ, ಚಿದಾನಂದ, ನಾಗರಾಜು, ಕಾಂತರಾಜು, ಇಂದ್ರೇಶ್, ಎ.ಜೆ.ಕುಮಾರ್, ಸೋಮಾಚಾರಿ, ಸೊಸೈಟಿ ಪ್ರಕಾಶ್ ಸೇರಿದಂತೆ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.

ಸೊಸೈಟಿಗೆ ಅಧ್ಯಕ್ಷರಾಗಿ ಎ.ಸಿ ಸಣ್ಣಸ್ವಾಮಿಗೌಡ ಆಯ್ಕೆ

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಗ್ರಾಜುಯೇಟ್ಸ್ ಕ್ರೆಡಿಟ್ ಕೋ ಆಪರೇಟ್ ಸೊಸೈಟಿಗೆ ಅಧ್ಯಕ್ಷರಾಗಿ ಎ.ಸಿ.ಸಣ್ಣಸ್ವಾಮಿಗೌಡ, ಉಪಾಧ್ಯಕ್ಷರಾಗಿ ಡಿ.ಆರ್.ಮರಿಸ್ವಾಮಿಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸೊಸೈಟಿ ಕಚೇರಿಯಲ್ಲಿ ನಡೆದ ವರ್ಷದ ಅಧಿಕಾರದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಬಯಸಿ ಎ.ಸಿ.ಸಣ್ಣಸ್ವಾಮಿಗೌಡ ಹಾಗೂ ಉಪಾಧ್ಯಕ್ಷ ಸ್ಥಾನ ಬಯಸಿ ಡಿ.ಆರ್. ಮರಿಸ್ವಾಮಿಗೌಡ ಹೊರತುಪಡಿಸಿ ಉಳಿದ ಯಾವ ನಿರ್ದೇಶಕರು ನಾಮಪತ್ರ ಸಲ್ಲಿಸದ ಕಾರಣ ಸಣ್ಣಸ್ವಾಮಿಗೌಡ, ಮರಿಸ್ವಾಮಿಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆಗೆ ಅಧಿಕಾರಿ, ತಾಲೂಕು ಸಹಕಾರ ಸಂಘಗಳ ಅಧಿಕಾರಿ ಭರತ್ ಕುಮಾರ್ ಘೋಷಣೆ ಮಾಡಿದರು.

ನೂತನ ಅಧ್ಯಕ್ಷ ಎ.ಸಿ.ಸಣ್ಣಸ್ವಾಮಿಗೌಡ ಮಾತನಾಡಿ, ನಿರ್ದೇಶಕರು ಸರ್ವಾನುಮತದಿಂದ ಮೂರನೇ ಬಾರಿಗೂ ನನ್ನನ್ನು ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಮಾಡಿ ಜವಾಬ್ದಾರಿ ಹೆಚ್ಚಿಸಿದ್ದಾರೆ. ಈಗಾಗಲೇ ಸೊಸೈಟಿಯಲ್ಲಿ ಕೃಷಿ ಠೇವಣಿ, ಪಿಗ್ನಿ, ಈ ಸ್ಟ್ಯಾಂಪ್ ಜೊತೆ ಸಂಘ 500 ಸದಸ್ಯರು ಹೊಂದಿದೆ. ಮತ್ತೆ ಸದಸ್ಯರನ್ನು ಹೆಚ್ಚಿಸಲು ಸದಸ್ಯತ್ವ ಅಭಿಯಾನ ಆರಂಭಿಸಿದ್ದೇವೆ ಎಂದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಲ್.ಎಸ್. ಧರ್ಮಪ್ಪ, ಪದ್ಮೇಶ್, ಪೂರ್ಣಚಂದ್ರ ತೇಜಸ್ವಿ, ಕಟ್ಟೆಮಹೇಶ್, ಹರಿಹರಪುರ ಮಹದೇವ್, ನಾಯಸಿಂಗನಹಳ್ಳಿ ನಾಗರಾಜ್, ಡಿ.ಆರ್. ಮಹೇಶ್, ವಿ.ಕೆ.ಸ್ವರೂಪ, ಮುತ್ತುರಾಜ್, ಸುಮಾ ಕೃಷ್ಣಕುಮಾರ್, ಸಂತೋಷ, ಜಗಧೀಶ್, ಕಾರ್ಯನಿರ್ವಾಹಕ ಅಧಿಕಾರಿ ಶ್ರೀಲಕ್ಷ್ಮೀ ಸೇರಿದಂತೆ ಸಂಘದ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಷೇರುದಾರರು ಅಭಿನಂದಿಸಿದರು.