ಬಿಜೆಪಿಯವರು ಪಾದಯಾತ್ರೆ ಮಾಡುತ್ತಾ ಹೊರಟಿದ್ದಾರೆ. ಪಾದಯಾತ್ರೆಯಲ್ಲಿ ಹೋಗಿ ಜನರಿಗೆ ಏನು ಹೇಳುತ್ತಾರೋ ಗೊತ್ತಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಬಿಜೆಪಿಯವರು ಪಾದಯಾತ್ರೆ ಮಾಡುತ್ತಾ ಹೊರಟಿದ್ದಾರೆ. ಪಾದಯಾತ್ರೆಯಲ್ಲಿ ಹೋಗಿ ಜನರಿಗೆ ಏನು ಹೇಳುತ್ತಾರೋ ಗೊತ್ತಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.

ಮಂಗಳವಾರ ಕಲಬುರಗಿ ಪ್ರವಾಸದಲ್ಲಿರುವ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಪಾದಯಾತ್ರೆ ಬಗ್ಗೆ ತಿರುಗೇಟು ನೀಡುತ್ತಲೇ ಆಕ್ರೋಶ ಹೊರಹಾಕಿದರು.

ಪಾದಯಾತ್ರೆ ಏಕೆ ಮಾಡುತ್ತಿದ್ದಾರೆ ಎನ್ನುವುದೇ ಸ್ಪಷ್ಟವಾಗಿ ಹೇಳುತ್ತಿಲ್ಲ, ಪಾದಯಾತ್ರೆಯಲ್ಲಿ ಹೋಗಿ ಜನರಿಗೆ ಏನು ಹೇಳುತ್ತಾರೋ ಗೊತ್ತಿಲ್ಲ , ಸಿಐಡಿ, ಎಸ್ಐಟಿ ರಿಪೋರ್ಟ್‌ನಲ್ಲಿ ನಾಗೇಂದ್ರ ಅವರ ಪಾತ್ರ ಇಲ್ಲ ಅಂತಿದೆ. ಸಿಬಿಐನ ಮೊದಲನೇ ಚಾರ್ಜ್‌ಶೀಟ್‌ನಲ್ಲೂ ಅವರ ಹೆಸರಿಲ್ಲ, ಎರಡನೇ ಚಾರ್ಜ್‌ಶೀಟ್‌ನಲ್ಲಿ ಹೆಂಗೆ ಹೆಸರು ಬಂತು ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದು ಮಾತಿನ ಚಾಟಿ ಬಿಜೆಪಿಯತ್ತ ಬೀಸಿದರು.

ಈಡಿ, ಸಿಬಿಐ, ಐಟಿ ಎಲ್ಲವುಗಳನ್ನು ಇವರು ಹೇಗೆ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ,

ನಾಗೇಂದ್ರ ವಿಚಾರ ಸದನದಲ್ಲಿ ನಾವು ಚರ್ಚೆಗೂ ರೆಡಿ ಇದ್ದೇವು. ನಾವು ಉತ್ತರ ಕೊಡಲು ರೆಡಿ ಇದ್ದೆವು, ಬಿಜೆಪಿ ಅವರು ಈ ವಿಚಾರ ಚರ್ಚೆಗೂ ಬರಲಿಲ್ಲ. ಇತ್ತ ಹೋರಾಟವನ್ನೂ ಬಿಡುತಿಲ್ಲವೆಂದು ತಿವಿದರು.

ತಿಂಗಳಾಯ್ತು ನಾಗೇಂದ್ರ ವಿರುದ್ಧ ಒಂದೇ ಒಂದು ದಾಖಲೆಯಾದ್ರು ಬಿಡುಗಡೆ ಮಾಡಿದ್ರಾ?, ಇವರದು ಬರಿ ಮಾತೆ ಮಾತು.

ಯಾವ ಬ್ಯಾಂಕ್ ನಿಂದ ಹಣ ಹೋಗಿತ್ತೂ ಅದೇ ಬ್ಯಾಂಕ್ ಅಕೌಂಟ್‌ಗಳಿಗೆ ಹಣ ಜಮಾ ಆಗಿದೆ. ಹಣ ನಾಗೇಂದ್ರ ಅವರ ಅಕೌಂಟ್‌ಗೆ ಹೋಗಿದ್ದ? ಸಿಎಮ್, ಡಿಸಿಎಂ ಇಲ್ಲವೇ ನನ್ನ ಅಕೌಂಟಿಗೆ ಏನಾದರೂ ಹಣ ಹೋಗುತ್ತ? ಹೇಳಲಿ

ಚರ್ಚೆಗೂ ರೆಡಿ ಇಲ್ಲ, ದಾಖಲೆಗಳು ಕೊಡ್ತಾನೂ ಇಲ್ಲ, ಇತ್ತ ಪ್ರೊಟೆಸ್ಟ್ ಸಹ ಮಾಡ್ತಾ ಇದ್ದಾರೆ. ಪಾದಯಾತ್ರೆ ಮಾಡುತ್ತಿರುವ ಬಿಜೆಪಿ ಮುಖಂಡರೇ, ಜನರ ಮುಂದಾದರೂ ಸಾಕ್ಷಿ ತೋರಿಸಿ ಎಂದರು.

ಬಿಜೆಪಿಯವರದ್ದು ಬರೀ ಹಿಟ್ ಆ್ಯಂಡ್‌ ರನ್ . ಮೈಕ್ ಮುಂದೆ ವದರಾಡುವುದೇ ಆಯಿತು . ಹಿಂದೆಯೂ ಇಂತಹ ಆರೋಪಗಳಿಂದ ಹೊರಗಡೆ ಬಂದಿದ್ದೇವೆ. ಈಗಲೂ ಹೊರಗಡೆ ಬರ್ತೀವಿ ಎನ್ನುವ ಆತ್ಮವಿಶ್ವಾಸದಿಂದ ನಾಗೇಂದ್ರ ಅವರು ರಾಜೀನಾಮೆ ಕೊಟ್ಟಿದ್ದಾರೆಂದರು.

ಪಾದಯಾತ್ರೆಗೆ ಅವರಲ್ಲೇ ಗೊಂದಲ ಇದೆ: ಬಿಜೆಪಿ ಹಾಗೂ ಜೆಡಿಎಸ್‌ನದ್ದು ಮೈತ್ರಿಯೇ ಅಲ್ಲ ಬಿಡಿ, ಬಿಜೆಪಿ ಪಾದಯಾತ್ರೆಗೆ ಜೆಡಿಎಸ್ ಸಪೋರ್ಟ್ ಇಲ್ಲ,

ಬಿಡದಿ ಬಗ್ಗೆ ಬಿಜೆಪಿಯವರ ಬೆಂಬಲ ಇಲ್ಲ , ಬಿಜೆಪಿ ಪಾದಯಾತ್ರೆ ಬಗ್ಗೆ ಜೆಡಿಎಸ್ ಬೆಂಬಲ ಇಲ್ಲ , ಅವರಲ್ಲೇ ಗೊಂದಲ ಇದೆ

ಬಿಜೆಪಿ - ಜೆಡಿಎಸ್ ಬಿಡಿ, ಬಿಜೆಪಿಯಲ್ಲಿಯೇ ಸ್ವತಃ ಗೊಂದಲ ಇದೆ ಎಂದು ಖರ್ಗೆ ತಿವಿದರು. ಅಮಿತ್ ಶಾರನ್ನು ಕರೆಸ್ತೀನಿ ಅಂದಿದ್ರಲ್ಲ ಏನಾಯ್ತು ? ಅಮಿತ್ ಶಾ ಬರ್ತಾ ಇದ್ದಾರಾ? ಪ್ರಹ್ಲಾದ ಜೋಶಿ ಬರ್ತಾ ಇದ್ದಾರ? ಯಾರೂ ಬರ್ತಾ ಇಲ್ಲ. ಅವರಿಗೆ ಈ ಬಗ್ಗೆ ಆತ್ಮವಿಶ್ವಾಸ ಇಲ್ಲ. ಏನೋ ಸ್ವಲ್ಪ ಮುಖಂಡರಿಗೆ ಡೈಲಿವೇಜಸ್ ಕೊಟ್ಟು ಕರೆಸ್ತಿದ್ದಾರೆ ಎನ್ನುವ ಮಾಹಿತಿ ಇದೆ ಎಂದು ಬಿಜೆಪಿ ಪಾದಯಾತ್ರೆ ಬಗ್ಗೆ ಪ್ರಿಯಾಂಕ ಖರ್ಗೆ ತಿರುಗೇಟು ನೀಡಿದರು.