ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಇಬ್ಬೀಡು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಮಂಜುನಾಥ್ ಅವರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸದಸ್ಯರು ಒತ್ತಾಯಿಸಿದ್ದಾರೆ.ಮಂಜುಳಾ ಮಂಜುನಾಥ್ ನೆಟ್ಟೆಕೆರೆಯವರು ಗ್ರಾಪಂ ಅಧ್ಯಕ್ಷರಾಗಿ ಸುಮಾರು ೧೬ ತಿಂಗಳು ನಡೆಯುತ್ತಿದ್ದು, ಈ ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿಯ ೪ ಮಹಿಳಾ ಸದಸ್ಯರಿದ್ದು ಕೇವಲ ಒಬ್ಬರೇ ೧೬ ತಿಂಗಳು ಆಡಳಿತ ನಡೆಸುತ್ತಿದ್ದು, ಪಂಚಾಯಿತಿಯಲ್ಲಿ ಯಾವ ಗ್ರಾಮದಲ್ಲಿಯೂ ಅಭಿವೃದ್ಧಿಗೆ ಒತ್ತು ನೀಡದೆ ಪಂಚಾಯಿತಿಯಲ್ಲಿ ಏಕಪಕ್ಷೀಯವಾಗಿ ಸದಸ್ಯರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕರೊಂದಿಗೆ, ಪಂಚಾಯಿತಿಯ ನೌಕರ ವರ್ಗದವರೊಂದಿಗೆ ಸೌಹಾರ್ದ ನಡವಳಿಕೆ ಇಲ್ಲದೆ ದುರಾಡಳಿತ, ದುರ್ನಡತೆಯಿಂದ, ದರ್ಪದಿಂದ ವರ್ತಿಸಿ ಪಂಚಾಯಿತಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಕ್ಕೆ ಒತ್ತು ನೀಡದೆ ಸದಸ್ಯರ ನಡುವೆ ವೈಮನಸ್ಸು ಸೃಷ್ಟಿ ಮಾಡಿ ಅಧಿಕಾರದ ಆಸೆಗಾಗಿ ಪಂಚಾಯತಿಯ ಸದಸ್ಯರ ದಿಕ್ಕು ತಪ್ಪಿಸುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರ ಕುಂದುಕೊರತೆ ಆಲಿಸುತ್ತಿಲ್ಲ.
ಈ ಹಿಂದೆ ನವೆಂಬರ್ 16ರಂದು ಅವಿಶ್ವಾಸ ನಿರ್ಣಯಕ್ಕೆ ಪಂಚಾಯಿತಿ ಸದಸ್ಯರು ಮಂಡನೆ ಮಾಡಿದ್ದು, ೧೫ ದಿನ ಆಗಿದ್ದರೂ ಎಸಿ ಮತ್ತು ಸದಸ್ಯರ ವಿರುದ್ಧ ತಡೆಯಾಜ್ಞೆ ತಂದಿದ್ದು ಮತ್ತೆ ಇದರಿಂದ ಆಕ್ರೋಶಗೊಂಡ ೧೧ ಜನ ಸದಸ್ಯರು ಪಂಚಾಯಿತಿಯ ೧೪ ಜನ ಸದಸ್ಯರ ಪೈಕಿ ೧೧ ಜನ ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸಕಲೇಶಪುರ ಎಸಿ ಅವರಿಗೆ ಡಿ.19ರಂದು ಮನವಿ ಸಲ್ಲಿಸಿದ್ದು, ಜನವರಿ 6ಕ್ಕೆ ಪುನಃ ಅವಿಶ್ವಾಸ ಮಂಡನೆಗೆ ಅವಕಾಶ ಕಲ್ಪಿಸಿದ್ದಾರೆ ಎಂದು ಮಾಧ್ಯಮಕ್ಕೆ ತಿಳಿಸಿದರು.ಪಂಚಾಯತಿಯ ಸರ್ವ ಸದಸ್ಯರು ಒಮ್ಮತದಿಂದ ಅಧ್ಯಕ್ಷರ ವಿರುದ್ಧ ಅಧ್ಯಕ್ಷ ಸ್ಥಾನ ತೆರವುಗೊಳಿಸುವ ತನಕ ಪಂಚಾಯತಿಯ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳದೆ ನಿರಂತರವಾಗಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.