ಭಿನ್ನಮತವಿಲ್ಲ; ಇರುವ ಅಸಮಾಧಾನ ಎರಡ್ಮೂರು ದಿನದಲ್ಲಿ ಶಮನ: ಬಿಎಸ್‌ವೈ

| Published : Mar 17 2024, 01:45 AM IST

ಭಿನ್ನಮತವಿಲ್ಲ; ಇರುವ ಅಸಮಾಧಾನ ಎರಡ್ಮೂರು ದಿನದಲ್ಲಿ ಶಮನ: ಬಿಎಸ್‌ವೈ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ. ಅಸಮಾಧಾನ ಎರಡ್ಮೂರು ದಿನಗಳಲ್ಲಿ ಶಮನವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸುತ್ತದೆ.

ಹುಬ್ಬಳ್ಳಿ:

ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ. ಅಸಮಾಧಾನ ಎರಡ್ಮೂರು ದಿನಗಳಲ್ಲಿ ಶಮನವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕಾರ್ಯಕ್ರಮಕ್ಕೆ ಹಾಜರಾಗಿ ವಿಮಾನ ಮೂಲಕ ಹುಬ್ಬಳ್ಳಿಗೆ ಆಗಮಿಸಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿದರು.ಬಿಜೆಪಿಯಲ್ಲಿ ಯಾವುದೇ ಅಸಮಾಧಾನವಿಲ್ಲ. ಕೆ.ಎಸ್‌. ಈಶ್ವರಪ್ಪ ಸೇರಿದಂತೆ ರಾಜ್ಯದ ಹಲವು ನಾಯಕರಲ್ಲಿ ಉಂಟಾಗಿದ್ದ ಅಸಮಾಧಾನವೆಲ್ಲ ಎರಡ್ಮೂರು ದಿನಗಳಲ್ಲಿ ಶಮನವಾಗುತ್ತದೆ. ಈ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದರು.ಈಗಾಗಲೇ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಈ ನಿಟ್ಟಿನಲ್ಲಿ ನಾವು ಕೂಡ ಚುನಾವಣೆ ಸಿದ್ಧತೆ ಮಾಡಿಕೊಂಡಿದ್ದೇವೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸೀಟ್ ಗೆಲ್ಲುವ ಭರವಸೆ ಇದೆ ಎಂದರು.ಕರ್ನಾಟಕದಲ್ಲಿ ಕನಿಷ್ಠ 25-26 ಲೋಕಸಭಾ ಕ್ಷೇತ್ರದ ಚುನಾವಣೆ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡುವುದು ಶತಸಿದ್ಧ. ಕರ್ನಾಟಕದಿಂದ ಮೋದಿ ಅವರಿಗೆ ದೊಡ್ಡ ಕೊಡುಗೆ ನೀಡುತ್ತೇವೆ ಎಂದರು.

ಈಶ್ವರಪ್ಪ ಬಂಡಾಯ ಶೀಘ್ರ ಶಮನ: ಜೋಶಿಮಗನಿಗೆ ಟಿಕೆಟ್‌ ಸಿಗದ ಕಾರಣ ಕೆ.ಎಸ್‌. ಈಶ್ವರಪ್ಪ ಕೊಂಚ ಅಸಮಾಧಾನಗೊಂಡಿದ್ದಾರೆ. ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ನಿಲ್ಲುವುದಿಲ್ಲ. ಬಂಡಾಯ ಶೀಘ್ರ ಶಮನವಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಜತೆಗೆ ರಾಷ್ಟ್ರೀಯ ನಾಯಕರು ಮಾತನಾಡುತ್ತಾರೆ. ನಾನೂ ಮಾತನಾಡಲು ಪ್ರಯತ್ನಿಸುತ್ತೇನೆ. ಈಗಾಗಲೇ ಪಕ್ಷ ನಿರ್ಧಾರ ಕೈಗೊಂಡಿದೆ. ಈಶ್ವರಪ್ಪ ಅವರನ್ನು ಬಹಳ ವರ್ಷಗಳಿಂದ ನೋಡಿದ್ದೇನೆ. ಅವರು ನಮಗಿಂತ ಸಾಕಷ್ಟು ಹಿರಿಯರು. ಅವರು ಪಕ್ಷಕ್ಕೆ ನಿಷ್ಠರಾಗಿರುವವರು. ಈಶ್ವರಪ್ಪ ರಾಜ್ಯಾಧ್ಯಕ್ಷರಾಗಿದ್ದಾಗ ನಾನು ಜಿಲ್ಲಾಧ್ಯಕ್ಷನಾಗಿದ್ದೆ. ಈಶ್ವರಪ್ಪ ಪಕ್ಷದ ಹಿತ ಬಿಟ್ಟು ಬೇರೆ ಏನು ಯೋಚನೆ ಮಾಡಿದವರಲ್ಲ. ಯಾವುದೇ ಕಾರಣಕ್ಕೂ ಅವರು ಬಂಡಾಯ ನಿಲ್ಲುವುದಿಲ್ಲ. ಪಕ್ಷದಲ್ಲೇ ಮುಂದುವರಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮಾ. 18 ಶಿವಮೊಗ್ಗದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮವಿದೆ. ಅಷ್ಟರೊಳಗೆ ಎಲ್ಲವೂ ಬದಲಾವಣೆಯಾಗುತ್ತದೆ ಎಂದರು.ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ನಮ್ಮ ಪಕ್ಷದ ಹಿರಿಯರು. ಅವರು ಬೆಳಗಾವಿಯಲ್ಲಿ ಚುನಾವಣೆಗೆ ನಿಲ್ಲುತ್ತಾರೆ. ಒಳ್ಳೆಯ ಮಾರ್ಜಿನ್‌ನಿಂದ ಗೆಲುವು ಸಾಧಿಸುತ್ತಾರೆ. ಅವರಿಗೆ ಶುಭ ಕೋರುತ್ತೇನೆ. ಸ್ಥಳೀಯ ಮಟ್ಟದ ವಿರೋಧವೆಲ್ಲ ಸರಿಯಾಗುತ್ತದೆ ಎಂದರು.ಮೋದಿ ಅವರು ಹುಬ್ಬಳ್ಳಿ ಕಾರ್ಯಕ್ರಮ ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟಿದೆ. ನಮ್ಮ ರಾಜ್ಯಕ್ಕೆ ಈಗ ಎರಡು ದಿನ ಕೊಟ್ಟಿದ್ದಾರೆ. ಸದ್ಯ ಮುಂದೂಡಲ್ಪಟ್ಟಿದೆ. ಎರಡನೆಯ ಬಾರಿಗೆ ಪ್ರವಾಸ ಕೈಗೊಳ್ಳುವಾಗ ಹುಬ್ಬಳ್ಳಿಯಲ್ಲಿ ಸಮಾವೇಶವನ್ನು ನಿಗದಿಪಡಿಸಲಾಗುವುದು ಎಂದು ನುಡಿದರು.