ಗಣೇಶ ಹಬ್ಬವನ್ನು ಶ್ರದ್ಧಾ-ಭಕ್ತಿ, ಸಂಭ್ರಮದಿಂದ ಆಚರಿಸಿ. ಅನಾವಶ್ಯಕವಾಗಿ ಬೇರೆ ಧರ್ಮದವರಿಗೆ ತೊಂದರೆ ಕೊಡಬೇಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ ಹೇಳಿದರು.
ಗಂಗಾವತಿ: ಗಣೇಶ ಹಬ್ಬವನ್ನು ಶ್ರದ್ಧಾ-ಭಕ್ತಿ, ಸಂಭ್ರಮದಿಂದ ಆಚರಿಸಿ. ಅನಾವಶ್ಯಕವಾಗಿ ಬೇರೆ ಧರ್ಮದವರಿಗೆ ತೊಂದರೆ ಕೊಡಬೇಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ ಹೇಳಿದರು.
ನಗರದ ಭಾರತೀಯ ವೈದ್ಯಕೀಯ ಭವನದಲ್ಲಿ ಗಣೇಶ ಹಬ್ಬದ ನಿಮಿತ್ತ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಈಗಾಗಲೇ ಗಂಗಾವತಿ ನಗರದಲ್ಲಿ 150ಕ್ಕೂ ಹೆಚ್ಚು ಸ್ಥಳಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತದೆ. ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಅನಾವಶ್ಯಕವಾಗಿ ಬೇರೆ ಧರ್ಮದವರ ಜೊತೆಗೆ ವಿವಾದ, ತೊಂದರೆಯಂತಹ ಘಟನೆಗಳಿಗೆ ಮುಂದಾಗಬೇಡಿ ಎಂದರು.
ಗಣೇಶ ಹಬ್ಬಕ್ಕಾಗಿಯೇ ಕೆಲವು ಗೈಡ್‌ಲೈನ್‌ಗಳಿದ್ದು ಎಲ್ಲರೂ ಪಾಲಿಸಬೇಕು. ಜೆಸ್ಕಾಂ, ಅರಣ್ಯ ಇಲಾಖೆ, ನಗರಸಭೆಯ ಪರವಾನಗಿ ಪಡೆಯಬೇಕು. ದಾಸನಾಳ ಮತ್ತು ಕಂಪ್ಲಿ ತುಂಗಭದ್ರಾ ಸೇತುವೆ ಬಳಿ ವಿಸರ್ಜನೆ ಸಂದರ್ಭದಲ್ಲಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದರು.ಮಾಜಿ ಸಂಸದ ಶಿವರಾಮಗೌಡ ಮಾತನಾಡಿ, ಗಣೇಶ ಹಬ್ಬವೇ ಸಂಘಟನೆಯ ಉದ್ದೇಶವಾಗಿದೆ. ವಿವಿಧ ಇಲಾಖೆಯವರು ಎಲ್ಲ ಸೌಲಭ್ಯ ಕಲ್ಪಿಸಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಗಂಗಾವತಿ ಭಾವೈಕ್ಯತೆಯ ನಗರವಾಗಿದೆ. ಈ ಹಿಂದೆ ಎಂ.ಎಸ್. ಅನ್ಸಾರಿ ಅವರು ಗಣೇಶ ವಿಸರ್ಜನೆ ಸಂದರ್ಭದಲ್ಲಿ ಪಾಲ್ಗೊಂಡು ಭಾವೈಕ್ಯತೆ ಮೆರೆದಿರುವುದನ್ನು ಮರೆಯುವಂತಿಲ್ಲ ಎಂದರು.ಕೂಡಲೇ ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯನ್ಮೋಖರಾಗಿ ಗಣೇಶ ಮಂಟಪಗಳಿಗೆ ವಿದ್ಯುತ್ ಕಲ್ಪಿಸಿ, ರಸ್ತೆ ಗುಂಡಿಗಳು ಮುಚ್ಚಿಸಿ. ಆ್ಯಂಬುಲೆನ್ಸ್, ಜೆಸಿಬಿ ಕಲ್ಪಿಸಿ, ಡಿಜೆ ಕಲ್ಪಿಸಿ ಎಂದು ಕೋರಿದರು.
ನಗರಸಭೆ ಮಾಜಿ ಅಧ್ಯಕ್ಷ ಶ್ಯಾಮೀದ ಮನಿಯಾರ ಮಾತನಾಡಿ, ಡಿಜೆ ಸೌಂಡ್ಸ್ ಬಗ್ಗೆ ಘೋಷಣೆ ಮಾಡಿ. ಮೊದಲನೇ ಗಣಪತಿಗೆ ಅವಕಾಶ ಕೊಡುವುದಿಲ್ಲ. ಕೊನೆಯ ಗಣಪತಿ ವಿಸರ್ಜನೆ ಮಾಡುವವರಿಗೆ ಅವಕಾಶ ನೀಡಿ ತಾರತಮ್ಯ ಮಾಡಬೇಡಿ. ಪರವಾನಗಿ ಕೊಡುವುದಿದ್ದರೆ ಎಲ್ಲ ಗಣೇಶ ವಿಸರ್ಜನೆಗೂ ಅವಕಾಶ ನೀಡಿ ಎಂದರು. ಜೋಗದ ನಾರಾಯಣಪ್ಪ ನಾಯಕ ಮಾತನಾಡಿ, ಶಾಂತಿ-ಸೌಹಾರ್ದದಿಂದ ಗಣೇಶ ಹಬ್ಬ ಆಚರಿಸಿ. ವಿದ್ಯುತ್ ಉಚಿತವಾಗಿ ಕಲ್ಪಿಸಿ, ರಸ್ತೆ ದುರಸ್ತಿ ಮಾಡಿ ಎಂದು ಕೋರಿದರು.ವೇದಿಕೆ ಮೇಲೆ ತಹಸೀಲ್ದಾರ್ ವಸಂತಕುಮಾರಿ, ಇಒ ರಂಗಪ್ಪರಡ್ಡಿ, ಇಲಿಯಾಸ್ ಖಾದ್ರಿ, ಪಿಐ ಪ್ರಕಾಶ ಯಾತನೂರು, ಸಿಪಿಐ ರಂಗಪ್ಪ, ಜೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತ ಮಂಜುನಾಥ್ ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡರ್ ಉಪಸ್ಥಿತರಿದ್ದರು.
ವಿನಯ ಪಾಟೀಲ್, ಶರಣಪ್ಪ, ನೀಲಕಂಠ ನಾಗಶಟ್ಟಿ, ಉಸ್ಮಾನ್, ಕಾಶೀನಾಥ್ ಚಿತ್ರಗಾರ, ವಿರೂಪಾಕ್ಷಗೌಡ ನಾಯಕ, ಪಂಪಣ್ಣ ನಾಯಕ, ಎಸ್.ಎಚ್. ಮುಧೋಳ್ ಸೇರಿದಂತೆ ಪ್ರಮುಖರು ಸಲಹೆ ನೀಡಿದರು.