ಯಾವುದೇ ಸರ್ಕಾರ ಇರಲಿ, ಅನುದಾನ ತರುವ ಶಕ್ತಿ ಇದೆ

| Published : Oct 29 2024, 01:03 AM IST

ಯಾವುದೇ ಸರ್ಕಾರ ಇರಲಿ, ಅನುದಾನ ತರುವ ಶಕ್ತಿ ಇದೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳಲ್ಕೆರೆ: ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರ ನಡೆಸಲಿ, ಅನುದಾನ ತಂದು ಹೊಳಲ್ಕೆರೆ ಕ್ಷೇತ್ರ ಅಭಿವೃದ್ಧಿ ಪಡಿಸುವ ಶಕ್ತಿ ನನ್ನಲ್ಲಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ಹೊಳಲ್ಕೆರೆ: ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರ ನಡೆಸಲಿ, ಅನುದಾನ ತಂದು ಹೊಳಲ್ಕೆರೆ ಕ್ಷೇತ್ರ ಅಭಿವೃದ್ಧಿ ಪಡಿಸುವ ಶಕ್ತಿ ನನ್ನಲ್ಲಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು. ತಾಲೂಕಿನ ಇಂಗಳದಹಳ್ಳಿ ಗ್ರಾಮದಲ್ಲಿ ಕೆಎಂಇಆರ್ ಸಿ ಯೋಜನೆಯಡಿಯಲ್ಲಿ 8.50 ಕೋಟಿ ರು.ವೆಚ್ಚದಲ್ಲಿ ಈಚಘಟ್ಟ, ಕಡೂರು, ಅಂದನೂರು, ಗುಂಡೇರಿ ಸೇತುವೆಗಳ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಚುನಾವಣೆ ವೇಳೆ ಮಾತ್ರ ಪಕ್ಷದ ಬಗ್ಗೆ ಆಲೋಚಿಸುವೆ. ನಂತರ ಏನಿದ್ದರೂ ಅಭಿೃವೃದ್ಧಿ ಬಗ್ಗೆ, ಯಾವ ಊರಿಗೆ ಏನು ಕೆಲಸ ಮಾಡಿದರೆ ಜನರಿಗೆ ಒಳ್ಳೆಯದಾಗುತ್ತದೆಂದು ಆಲೋಚನೆ ಮಾಡುವ ರಾಜಕಾರಣಿ ನಾನು ಎಂದರು.ಅಧಿಕಾರ ಶಾಶ್ವತವಲ್ಲ. ಇರುವಷ್ಟು ದಿನ ಒಳ್ಳೆ ಕೆಲಸ ಮಾಡಬೇಕೆಂದು ಸಾರ್ವಜನಿಕರ ಬದುಕನ್ನು ನನ್ನ ಸ್ವಂತ ಬದುಕೆಂದು ತಿಳಿದು ಕ್ಷೇತ್ರದ ಅಭಿವೃದ್ದಿಗೆ ಹಗಲು-ರಾತ್ರಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ನೂರಾರು ಕೆರೆ, ಗೋಕಟ್ಟೆ, ಚೆಕ್‍ಡ್ಯಾಂಗಳನ್ನು ಕಟ್ಟಿಸಿರುವುದರಿಂದ ನೀರು ನಿಂತಿದೆ. ರೈತರಿಗೆ ನೀರು ವಿದ್ಯುತ್ ಮುಖ್ಯವಾಗಿರುವುದರಿಂದ ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ ರೇಷ್ಮೆ ಇಲಾಖೆಗೆ ಸೇರಿದ ಹತ್ತು ಎಕರೆ ಜಾಗದಲ್ಲಿ 220 ಮೆವ್ಯಾ ವಿದ್ಯುತ್ ಉತ್ಪಾದಿಸಲು 250 ಕೋಟಿ ರು.ಬಿಡುಗಡೆಗೊಳಿಸಿದ್ದೇನೆ ಎಂದು ಹೇಳಿದರು. ಸರ್ಕಾರಿ ಶಾಲೆಗೆ ಬರುವ ಬಡ ಮಕ್ಕಳಿಗೆ ತೊಂದರೆಯಾಗಬಾರದೆಂದು ಉಚಿತ ಬಸ್‍ಗಳ ಸೇವೆ ಒದಗಿಸಿದ್ದೇನೆ. ರಾಜ್ಯದಲ್ಲಿ ಯಾವ ಶಾಸಕನು ಸ್ವಂತ ಖರ್ಚಿನಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಬಸ್ ವ್ಯವಸ್ಥೆ ಕಲ್ಪಿಸಿಲ್ಲ ಎಂದರು.

ಇದೇ ವೇಳೆ ಶಾಸಕರು ಹಾಲಿ ರಸ್ತೆ ನಿರ್ಮಾಣದ ಕಾಮಗಾರಿಯಲ್ಲಿ ಏಳುವರೆ ಮೀ. ಸೇತುವೆ ಬೇಡ. ಒಂಬತ್ತು ಮೀ.ನಷ್ಟು ಅಗಲವಾದ ಸೇತುವೆ ನಿರ್ಮಿಸುವಂತೆ ಸಂಬಂಧಪಟ್ಟ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಿದ್ದೇಶ್, ಚಿಕ್ಕಜಾಜೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಸಿ.ಮೋಹನ್, ಸದಸ್ಯರಾದ ಗಂಗಣ್ಣ, ರಮೇಶಣ್ಣ, ರುದ್ರಪ್ಪ, ಪರಮೇಶ್ವರಪ್ಪ, ಪ್ರಕಾಶ್, ಗುತ್ತಿಗೆದಾರ ನಾರಾಯಣ ಹಾಗೂ ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.