ಈಗ ರಾಜಕೀಯ ಬೇಡ, ದೇಶಕ್ಕಾಗಿ ಒಂದಾಗೋಣ

| Published : May 08 2025, 12:31 AM IST

ಸಾರಾಂಶ

ನಾವು ಪಾಕಿಸ್ತಾನದ ಮೇಲೆ ಯುದ್ದ ಮಾಡುತ್ತಿಲ್ಲ, ಪಹಲ್ಗಾಮ್‌ದ ಭಾರತೀಯ ಪ್ರವಾಸಿಗಾರ ಮೇಲೆ ವಿನಾಕಾರಣ ಗುಂಡಿನ ದಾಳಿ ಮಾಡಿ ೨೭ ಮಂದಿಯನ್ನು ಬಲಿ ಪಡೆದು ಪಾಕಿಸ್ತಾನದಲ್ಲಿ ಅಡಗಿರುವ ರಣಹೇಡಿ ಭಯೋತ್ಪಾಕರ ಮೇಲೆ ದಾಳಿ ಮಾಡಿದ್ದೇವೆ. ಪಾಕಿಸ್ತಾನದಲ್ಲಿ ಇಂದು ಊಟಕ್ಕೂ ಗತಿಇಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ,

ಕನ್ನಡಪ್ರಭ ವಾರ್ತೆ ಕೋಲಾರಜನಾಕ್ರೋಶದ ರ್‍ಯಾಲಿಯು ಕಾಂಗ್ರೆಸ್ ವಿರುದ್ದ ಪ್ರತಿಭಟನಾ ಪ್ರದರ್ಶನ ನಡೆಸಬೇಕಾಗಿತ್ತು, ಆದರೆ ಪರಿಸ್ಥಿತಿಯ ಬದಲಾವಣೆಯಿಂದ ನಾವು ರಾಜಕೀಯ ಮಾತನಾಡುವುದಿಲ್ಲ, ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದಿಲ್ಲ, ಈಗ ನಾವೆಲ್ಲಾ ದೇಶಕ್ಕಾಗಿ ಒಂದಾಗಿ ಪ್ರಧಾನಿಗಳಿಗೆ ಹಾಗೂ ವೀರ ಯೋಧರಿಗೆ ಶಕ್ತಿ ತುಂಬಬೇಕೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.ನಗರದ ಸರ್ಕಾರಿ ಬಾಲಕರ ಕಾಲೇಜು ಬಳಿ ಜನಾಕ್ರೋಶದ ೪ ಹಂತದ ಮೊದಲನೇ ಹಂತದ ರ್‍ಯಾಲಿಯಲ್ಲಿ ಮಾತನಾಡಿ, ದೇಶದಲ್ಲಿ ಶಾಂತಿ ನೆಲೆಸಬೇಕು, ೩೭೦ರ ಕಾಯ್ದೆ ಜಾರಿಗೆ ತರಬಾರದು ಎಂದು ಕಾಂಗ್ರೆಸ್ ಒತ್ತಾಯದ ನಡುವೆ ಬಿಜೆಪಿ ಜಾರಿ ಮಾಡಿದ ಮೇಲೆ ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಮ್ಮದಿ ನೆಲೆಸಿತ್ತು ಎಂದರು.

ಉಗ್ರರಿಗೆ ತಲೆಬಾಗುವುದಿಲ್ಲ

ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ನಂತರ ಶಾಂತಿ ಮಾತುಕತೆಗೆ ಹೋಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಬಿರಿಯಾನಿ ತಿನ್ನಲು ಹೋಗಿದ್ದಾರೆ ಎಂದ ಟೀಕಿಸಿದ್ದರು. ಶತ್ರುಗಳಿಗೆ ಭಯೋತ್ಪಾದಕರಿಗೆ ನಾವೆಂದು ತಲೆ ಭಾಗುವವರಲ್ಲ, ತಲೆ ತೆಗೆಯುವವರು ಎಂಬುವುದನ್ನು ಈಗ ನಿರೂಪಿಸಿದ್ದೇವೆ ಎಂದರು.ನಾವು ಪಾಕಿಸ್ತಾನದ ಮೇಲೆ ಯುದ್ದ ಮಾಡುತ್ತಿಲ್ಲ, ಪಹಲ್ಗಾಮ್‌ದ ಭಾರತೀಯ ಪ್ರವಾಸಿಗಾರ ಮೇಲೆ ವಿನಾಕಾರಣ ಗುಂಡಿನ ದಾಳಿ ಮಾಡಿ ೨೭ ಮಂದಿಯನ್ನು ಬಲಿ ಪಡೆದು ಪಾಕಿಸ್ತಾನದಲ್ಲಿ ಅಡಗಿರುವ ರಣಹೇಡಿ ಭಯೋತ್ಪಾಕರ ಮೇಲೆ ದಾಳಿ ಮಾಡಿದ್ದೇವೆ. ಪಾಕಿಸ್ತಾನದಲ್ಲಿ ಇಂದು ಊಟಕ್ಕೂ ಗತಿಇಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ, ಭಾರತದಲ್ಲಿ ಮುಸ್ಲಿಂ ಸಮುದಾಯದವರು ತಮ್ಮ ಮನಸ್ಥಿತಿ ಬದಲಾಯಿಸಿಕೊಂಡವರಿಗೆ ಮಾತ್ರ ಮೋದಿ ರಕ್ಷಣೆ ಸಿಗುತ್ತದೆ ಎಂದರು.

ದೇಶದ್ರೋಹಿಗಳಿಗೆ ಕ್ಷಮೆ ಿಲ್ಲ

ಮೋದಿ ಬಗ್ಗೆ ಟೀಕಿಸುವವರು ತಮ್ಮ ನವ ರಂಧ್ರಗಳನ್ನು ಮುಚ್ಚಿಕೊಂಡರೇ ಒಳ್ಳೆಯದು, ದೇಶ ದ್ರೋಹದ ಕೆಲಸ ಮಾಡುವವರಿಗೆ ಎಂದಿಗೂ ಕ್ಷಮೆ ಇಲ್ಲ, ಯಾವ ಪಕ್ಷದವರೇ ಆಗಿರಲಿ, ಯಾವುದೇ ಸಮುದಾಯ, ಯಾವುದೇ ಧರ್ಮದವರು ಆಗಿದ್ದರೂ ಬಿಡುವ ಪ್ರಶ್ನೆಯೇ ಇರುವುದಿಲ್ಲ. ಶಾಂತಿ ಮಂತ್ರ, ಸರ್ವಜನಾಂಗದ ಶಾಂತಿಯ ತೋಟದ ಬಗ್ಗೆ ಮೋದಿಯವರಿಗೆ ಅರಿವು ಇದೆ, ನಮ್ಮ ಗುರಿ ಏನಿದ್ದರೂ ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ನಾಶವಾಗಿದೆ ಎಂದರು.ಬಿಜೆಪಿ ಶಾಸಕ ರವಿಕುಮಾರ್, ಮಾಜಿ ಸಚಿವ ಶ್ರೀರಾಮುಲು, ಮಾಜಿ ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾ ಧ್ಯಕ್ಷ ಓಂಶಕ್ತಿ ಚಲಪತಿ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕರಾದ ವೈ.ಸಂಪಂಗಿ, ಬಿ.ಪಿ.ಮುನಿವೆಂಕಟಪ್ಪ. ವರ್ತೂರು ಪ್ರಕಾಶ್, ಬೆಗ್ಲಿ ಸೂರ್ಯಪ್ರಕಾಶ್, ಮುನಿರಾಜು, ಸೀಕಲ್ ರಾಮಚಂದ್ರ, ಹರೀಶ್ ಪೂಂಜಾ, ಸಿದ್ದು ತಮ್ಮೇಶ್ ಇದ್ದರು.