ಲಾಭಕ್ಕೆ ಪಕ್ಷ ಸೇರಿದವರ ಹಿತವಚನ ಕೇಳಬೇಕಿಲ್ಲ: ಮಾಜಿ ಸಚಿವ ಬಿ. ಶಿವರಾಮು

| Published : Jan 02 2024, 02:15 AM IST

ಲಾಭಕ್ಕೆ ಪಕ್ಷ ಸೇರಿದವರ ಹಿತವಚನ ಕೇಳಬೇಕಿಲ್ಲ: ಮಾಜಿ ಸಚಿವ ಬಿ. ಶಿವರಾಮು
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ರಾಜಕೀಯ ನೆಲೆ ಭದ್ರಪಡಿಸಿಕೊಳ್ಳುವ ಜತೆಗೆ ಲಾಭ ಪಡೆಯಲು ಪಕ್ಷಕ್ಕೆ ಸೇರ್ಪಡೆಗೊಂಡವರಿಂದ ಹಿತವಚನ ಕೇಳಿಸಿಕೊಳ್ಳುವ ಸ್ಥಿತಿ ಹಿರಿಯ ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂದು ಮಾಜಿ ಸಚಿವ ಬಿ. ಶಿವರಾಮು ಅರಸೀಕೆರೆಯಲ್ಲಿ ಹೇಳಿದರು.

ಪಕ್ಷ ಸೇರಿದ ಕೆಲವರಿಂದ ಕಾರ್ಯಕರ್ತರ ಮೇಲೆ ಹಿಡಿತ ಸಾಧಿಸುವ ಯತ್ನ ಬಗ್ಗೆ ವರಿಷ್ಠರಿಗೆ ಮಾಹಿತಿ

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಮ್ಮ ರಾಜಕೀಯ ನೆಲೆ ಭದ್ರಪಡಿಸಿಕೊಳ್ಳುವ ಜತೆಗೆ ಲಾಭ ಪಡೆಯಲು ಪಕ್ಷಕ್ಕೆ ಸೇರ್ಪಡೆಗೊಂಡವರಿಂದ ಹಿತವಚನ ಕೇಳಿಸಿಕೊಳ್ಳುವ ಸ್ಥಿತಿ ಹಿರಿಯ ಕಾಂಗ್ರೆಸ್ ನಾಯಕರಿಗೆ ಬಂದೊದಗಿದ್ದು ಎಲ್ಲವನ್ನೂ ಹೈಕಮಾಂಡ್ ಗಮನಕ್ಕೆ ತರಲಾಗಿದೆ ಎಂದು ಮಾಜಿ ಸಚಿವ ಬಿ. ಶಿವರಾಮು ಹೇಳಿದರು.

ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ತಾಲೂಕುಗಳಲ್ಲಿ ಪ್ರವಾಸ ಹಮ್ಮಿಕೊಂಡಿದ್ದು ಕಾರ್ಯಕರ್ತರು ಹಾಗೂ ಮುಖಂಡರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗುತ್ತಿದೆ. ಚುನಾವಣಾ ಕಣದಲ್ಲಿ ನಾನೂ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ವರಿಷ್ಠರು ಹಾಗೂ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಆದರೆ ಇತ್ತೀಚೆಗೆ ಕಾಂಗ್ರೆಸ್ ಸೇರಿರುವ ಕೆಲವರು ಪಕ್ಷದ ಮುಖಂಡರು ಕಾರ್ಯಕರ್ತರ ಮೇಲೆ ಹಿಡಿತ ಸಾಧಿಸಲು ಹೊರಟಿದ್ದಾರೆ ಎನ್ನುವ ದೂರುಗಳು ಕೇಳಿಬಂದಿವೆ. ಪಕ್ಷದಲ್ಲಿ ದಶಕಗಳ ಕಾಲ ದುಡಿದ ನನ್ನಂತಹ ಹಲವರು ಹಿರಿ, ಕಿರಿಯಯರಿಗೂ ಬಿಸಿ ತಟ್ಟಿದೆ. ಎಲ್ಲವನ್ನೂ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಗಮನಕ್ಕೆ ತಂದಿದ್ದು ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದರು.

ಬೆಳೆ ನಷ್ಟ ಪರಿಹಾರ ನೀಡುವುದರಲ್ಲಿ ಕೊಂಚ ಹಿನ್ನಡೆಯಾಗಿದ್ದು ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಿದೆ. ಇದೀಗ ತೆಂಗು ಬೆಳೆಗಾರರ ಹಿತ ಮನಗಂಡಿರುವ ಸಿಎಂ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣಭೈರೇಗೌಡ ಸೇರಿದಂತೆ ಪಕ್ಷದ ಕೆಲ ಮುಖಂಡರು ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಿ ನಫೆಡ್ ಕೇಂದ್ರ ಆರಂಭಿಸುವಂತೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಜನವರಿ ಎರಡನೇ ವಾರದಲ್ಲಿ ಕೊಬ್ಬರಿ ಖರೀದಿ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ. ಇಂತಹ ಎಲ್ಲ ಬೆಳವಣಿಗೆಗಳು ಲೋಕಸಭಾ ಚುನಾವಣೆಯಲ್ಲಿ ಗೆಲುವುಗೆ ನೆರವಾಗಲಿದೆ. ನಿಗಮ ಮಂಡಳಿ ಹಾಗೂ ಸ್ಥಳೀಯ ನಾಮನಿರ್ದೇಶನದ ವೇಳೆ ವೀರಶೈವ ಲಿಂಗಾಯಿತರು ಹಾಗೂ ಹಿಂದುಳಿದವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ.ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಮತ್ತೋರ್ವ ಮುಖಂಡ ಹಾಗೂ ತಾಪಂ ಮಾಜಿ ಸದಸ್ಯ ಮಂಗಳಾಪುರ ನಾಗರಾಜ್ ಮಾತನಾಡಿ, ನಿಷ್ಠಾವಂತ ಕೈ ಕಾರ್ಯಕರ್ತರು ಹಾಗೂ ಮುಖಂಡರನ್ನು ಮೂಲೆಗುಂಪು ಮಾಡುವ ಷಡ್ಯಂತ್ರ ನಡೆದಿ ಎನ್ನುವ ಕೂಗು ಬಲವಾಗಿ ಕೇಳಿಬರುತ್ತಿದೆ.ಅಧಿಕಾರದ ಆಸೆಗೆ ಬೆನ್ನು ಬಿದ್ದಿರುವ ಕೆಲ ನಟೋರಿಯಸ್ ಮನಸ್ಥಿತಿಯ ವ್ಯಕ್ತಿಗಳಿಂದ ಕಾಂಗ್ರೆನಲ್ಲಿ ಇಂತಹ ಬೆಳವಣಿಗೆ ನಡೆಯುತ್ತಿದೆ. ಬೆಳವಣಿಗೆಯ ಸಮಗ್ರ ಮಾಹಿತಿಯನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ಕಡೆಗಣಿಸಲು ಮುಂದಾದರೆ ತಕ್ಕ ಬೆಲೆ ತೆರವೇಕಾಗುತ್ತದೆ ಎಂದು ಎಚ್ಚರಿಸಿದರು. ಸ್ಥಳೀಯ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್,ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶಶಿವಾಳ ಗಂಗಾಧರ್, ಗಂಡಸಿ

ಯುವ ಕಾಂಗ್ರೆಸ್ ಅಧ್ಯಕ್ಷ ಹುಲ್ಲೇನಹಳ್ಳಿ ರಘು, ಆದಿಹಳ್ಳಿ ಸಂತೋಷ್, ಉಮಾಶಂಕರ್, ನಗರಾಧ್ಯಕ್ಷ ಸಮೀರ್, ಒಬಿಸಿ ಅಧ್ಯಕ್ಷ ಜವನಪ್ಪ, ದುಮ್ಮೇನಹಳ್ಳಿ ಗ್ರಾಪಂ ಅಧ್ಯಕ್ಷ ಅಜಯ್, ಮುಖಂಡರಾದ ಹಾರನಹಳ್ಳಿ ಸ್ವಾಮಿ, ಅಯ್ಯಪ್ಪ, ಚಗಚಗೆರೆ ರಾಮಚಂದ್ರು, ಶಿವರಾಜ್, ಮಾಡಾಳು ರಂಗನಾಥ, ಗ್ರಾಪಂ ಸದಸ್ಯ ಕೆಂಪೇಗೌಡ ಹಾಜರಿದ್ದರು.