ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಅಧಿಕಾರ ಸಿಕ್ಕಾಗ ಜನರಿಗೆ ನೆರವಾಗುವಂತ ಕೆಲಸಗಳನ್ನು ಮಾಡಿ ಸಮಾಜದಲ್ಲಿ ಹೆಸರು ಶಾಶ್ವತವಾಗಿ ಇರುವಂತೆ ಮಾಡಬೇಕು. ಅದು ಬಿಟ್ಟು ದ್ವೇಷದ ರಾಜಕಾರಣ ಮಾಡುವುದತಿಂದ ಯಾರಿಗೂ ಉಪಯೋಗವಿಲ್ಲ ಎಂದು ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.ಪಟ್ಟಣದ ಕುವೆಂಪು ವೃತ್ತದಲ್ಲಿ ಕನ್ನಡ ಸಂಘದಿಂದ ನಡೆದ ರಾಜೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ ನನ್ನ ತಾಯಿ ತೀರಿಕೊಂಡಾಗ ಕಷ್ಟಕಾಲದಲ್ಲಿ ನನಗೆ ಪಕ್ಷಾತೀತವಾಗಿ ಸಾಥ್ ನೀಡಿದ ವಿವಿದ ಪಕ್ಷಗಳ ಮುಖಂಡರ ಮಾನವೀಯತೆಯನ್ನು ನೆನೆದು ಇನ್ನು ಮುಂದೆ ಯಾರ ಬಗ್ಗೆಯೂ ಟೀಕೆ ಟಿಪ್ಪಣಿಗಳನ್ನುಮಾಡದಿರಲು ನಿರ್ಧರಿಸಿರುವೆ,ನನ್ನ ಬಗ್ಗೆ ಟೀಕೆ ಮಾಡಿದರೂ ನಾನು ಅವರ ವಿರುದ್ದ ಪ್ರತಿ ಟೀಕೆ ಮಾಡುವುದಿಲ್ಲ ಎಂದರು. ಈ ವೇದಿಕೆ ಬರೀ ಕನ್ನಡ ಭಾಷೆ ಬೆಳವಣಿಗೆಗೆ ಪೂರಕವಾದ ವೇದಿಕೆಯಾಗದೆ ಅನೇಕ ಪ್ರತಿಭಾವಂತ ಕಲಾವಿದರಿಗೆ,ಸಾಧಕರನ್ನು ನಾಡಿಗೆ ಪರಿಚಯಿಸುವ ವೇದಿಕೆಯಾಗಿದೆ ಎಂದರು.
ಕನ್ನಡ ಭವನ ನಿರ್ಮಾಣವಾಗಲಿಕನ್ನಡ ಸಂಘದ ಅಧ್ಯಕ್ಷರಾದ ಡಾ.ಪಲ್ಲವಿಮಣಿ ಮಾತನಾಡಿ ಮೂರು ಭಾಷೆಯ ಸಂಗಮವಿರುವ ತಾಲೂಕಿನಲ್ಲಿ ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತ ವನ್ನು ಉಳಿಸಿ ಬೆಳೆಸಲು ಅನೇಕ ಮಹಾನಿಯರು ಹಾಕಿಕೊಟ್ಟ ದಾರಿಯಲ್ಲಿ ಕನ್ನಡ ಸಂಘ ಸಾಗುತ್ತಿದೆ, ಪಟ್ಟಣದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಶಾಸಕರು ಮುಂದಾಳತ್ವ ವಹಿಸಿದ್ದು ಆದಷ್ಟು ಬೇಗ ಭವನ ನಿರ್ಮಾಣವಾಗಿ ಕನ್ನಡಿಗರ ಕನಸು ಈಡೇರಲಿ ಎಂದು ಹೇಳಿದರು.ಇದೇ ವೇಳೆ ಜಾನಪದ ಅಕಾಡೆಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್ ಹಾಗೂ ಪತ್ರಕರ್ತ ರಾಜೇಂದ್ರರನ್ನು ಸನ್ಮಾನಿಸಿದರು. ಈ ವೇಳೆ ಪುರಸಭೆ ಅಧ್ಯಕ್ಷ ಗೋವಿಂದ,ಮಾಜಿ ಅಧ್ಯಕ್ಷ ಶಂಷುದ್ದೀನ್ ಬಾಬು,ರಂಗರಾಮಯ್ಯ,ವೈ.ವಿ.ರಮೇಶ್,ಮುರಳಿ,ಪ್ರಸಾದ್,ಹೇಮಂತ್ ಕುಮಾರ್,ಆರಕ್ಷಕ ನಿರೀಕ್ಷಕ ನಂಜಪ್ಪ ಇದ್ದರು.