ಸಾರಾಂಶ
ಹೈಕಮಾಂಡ್ ಹಸಿರು ನಿಶಾನೆ ತೋರಿದ ಬೆನ್ನಲ್ಲೆ ಜಾತಿಗಣತಿ ಸಿದ್ಧಪಡಿಸಲಾಗಿದೆ. ಇದರಲ್ಲಿ ಯಾವ ಸಮುದಾಯಕ್ಕೆ ಅನ್ಯಾಯವಾಗುವ ರೀತಿಯ ವ್ಯತ್ಯಾಸ ಕಂಡು ಬಂದರೆ ಅವುಗಳನ್ನು ಪುನರ್ ಪರಿಶೀಲಿಸಿ ಸರಿಪಡಿಸಲಾಗುವುದು.
ಕನಕಗಿರಿ:
ಜಾತಿಗಣತಿ ವಿಚಾರದಲ್ಲಿ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ವ್ಯತ್ಯಾಸಗಳಿದ್ದರೆ ಸರಿಪಡಿಸಲಾಗುವುದು ಎಂದು ಕಂಪ್ಲಿ ಶಾಸಕ ಜೆ.ಎನ್ ಗಣೇಶ ಹೇಳಿದರು.ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಹಸಿರು ನಿಶಾನೆ ತೋರಿದ ಬೆನ್ನಲ್ಲೆ ಜಾತಿಗಣತಿ ಸಿದ್ಧಪಡಿಸಲಾಗಿದೆ. ಇದರಲ್ಲಿ ಯಾವ ಸಮುದಾಯಕ್ಕೆ ಅನ್ಯಾಯವಾಗುವ ರೀತಿಯ ವ್ಯತ್ಯಾಸ ಕಂಡು ಬಂದರೆ ಅವುಗಳನ್ನು ಪುನರ್ ಪರಿಶೀಲಿಸಿ ಸರಿಪಡಿಸಲಾಗುವುದು. ನನ್ನ ಸಮುದಾಯ ಮಾತ್ರವಲ್ಲ ಯಾವ ಸಮುದಾಯಕ್ಕೂ ಅನ್ಯಾಯವಾಗಲು ಮುಖ್ಯಮಂತ್ರಿ ಬಿಡುವುದಿಲ್ಲ. ಈಗಾಗಲೇ ಹಲವು ಸಮುದಾಯಗಳು ಮರು ಪರಿಶೀಲನೆಗೆ ಒತ್ತಾಯಿಸಿವೆ. ಈ ಬಗ್ಗೆ ಹೈಕಮಾಂಡ್ ಹಾಗೂ ರಾಜ್ಯದ ಹಿರಿಯ ನಾಯಕರು ಚರ್ಚಿಸಿ ಎಲ್ಲ ವರ್ಗಕ್ಕೂ ನ್ಯಾಯ ದೊರಕಿಸುವ ವಿಶ್ವಾಸವಿದೆ ಎಂದರು.
ಇದಕ್ಕೂ ಮೊದಲು ಇಲ್ಲಿನ ವಾಲ್ಮೀಕಿ ವೃತ್ತಕ್ಕೆ ಹೂಮಾಲೆ ಮಾಡಿದರು. ಪಕ್ಷದ ಕಾರ್ಯಕರ್ತರು, ಮುಖಂಡರು ಶಾಸಕರಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು.ಈ ವೇಳೆ ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಗಂಗಾಧರಸ್ವಾಮಿ, ವೀರೇಶ ಸಮಗಂಡಿ, ಹನುಮೇಶ ನಾಯಕ ಹುಲಿಹೈದರ, ಮುದಿಯಪ್ಪ ನಾಯಕ ಮಲ್ಲಿಗೆವಾಡ, ಗುರುನಗೌಡ ಕೆ. ಕಾಟಾಪುರ, ಬಾರೇಶ ನಡಲಮನಿ, ಶಾಂತಪ್ಪ ಬಿ, ಬಾಲರಾಜ ಹರಿಜನ ಸೇರಿದಂತೆ ಇತರರಿದ್ದರು.