ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಜಿಲ್ಲಾಧಿಕಾರಿ ಕಚೇರಿಗೆ ಸಮಸ್ಯೆ ಕುರಿತು ಚರ್ಚಿಸಲು ಕಚೇರಿಗೆ ತೆರಳಿದ ಸಂದರ್ಭದಲ್ಲಿ ಅಲ್ಲಿರುವ ಅಧಿಕಾರಿಗಳನ್ನು ಹೊರಗೆ ಕಳುಹಿಸುತ್ತಾರೆ. ಸಂಬಂಧಪಟ್ಟ ಅಧಿಕಾರಿ ಇಲ್ಲದೇ ಏನು ಚರ್ಚೆ ಮಾಡೋದು. ಇಂತಹ ದುರಹಂಕಾರಿ ಡಿಸಿನ ನೋಡೇ ಇಲ್ಲ, ಕಾಂಗ್ರೆಸೇ ಶಾಶ್ವತವಾಗಿ ಇರುತ್ತೆ ಎಂದು ಇವರು ತಿಳಿದಿದ್ದಾರೆ. ಇವರು ಮುಂದೊಂದು ದಿನ ತಗಲಾಕಿಕೊಳ್ಳುತ್ತಾರೆ ಕಾಲವೇನು ಜಾಸ್ತಿದಿನ ದೂರವಿಲ್ಲಾ ಎಂದು ಶಾಸಕ ಎಚ್. ಡಿ. ರೇವಣ್ಣ ಆಕ್ರೋಶದಿಂದ ನುಡಿದರು.ಪಟ್ಟಣದ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದರು. ಪಟ್ಟಣದಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಶೆಡ್ ನಿರ್ಮಿಸಿರುವ ಸ್ಥಳವನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ, ಒಂದು ತಿಂಗಳಾದರೂ ಏನು ಕ್ರಮ ಕೈಗೊಂಡಿಲ್ಲ. ಹಾಸನ ಸುತ್ತಮುತ್ತ ಲೂಟಿ ನಡೆಯುತ್ತಿದ್ದರೂ ಡಿಸಿ ಅವರು ಕಣ್ಣುಮುಚ್ಚಿ ಕುಳಿತಿದ್ದಾರೆ. ಕಾನೂನು ಮೀರಿ ಯಾವುದೇ ಕೆಲಸ ಮಾಡಿದರೂ, ಅದಕ್ಕೆ ಅನುಭವಿಸುವ ಸನ್ನಿವೇಶ ನಿರ್ಮಾಣವಾದರೇ ಯಾವುದೇ ರಾಜಕಾರಣಿಯೂ ನಿಮ್ಮ ಸಹಾಯಕ್ಕೆ ಬರೋಲ್ಲ, ನಾನು ಕಂಡಿದ್ದೇನೆ. ಆದ್ದರಿಂದ ಕಾನೂನಿನ ಅಡಿಯಲ್ಲಿ ಕೆಲಸ ಮಾಡಿ, ನಾ ಹೇಳಿದರೂ ಮಾಡಬೇಡಿ ಎಂದು ಸಲಹೆ ನೀಡಿದರು. ಏರ್‌ಪೋರ್ಟ್ ಜಾಗ ಹಾಗೂ ಐಐಟಿ ಜಾಗವನ್ನು ಹೊಡಿಬೇಕು ಎಂದು ಹುನ್ನಾರ ನಡೆಯುತ್ತಿದೆ. ಏರ್‌ಪೋರ್ಟ್ ನಿರ್ಮಾಣಕ್ಕೆ ಇಷ್ಟೆ ಸ್ಥಳಬೇಕು ಎಂಬ ನಿಯಮವಿದೆ, ಆದರೂ ಹಲವಾರು ಲೆಟರ್ ಬರೆಯುತ್ತಾರೆ ಜತೆಗೆ ಏರ್‌ಪೋರ್ಟ್ ಮಾಡಲು ರಾಜಕೀಯ ದ್ವೇಷವಿದೆ ಎಂದರು. ಕಂದಾಯ ಸಚಿವರು ಬಹಳ ಉತ್ಸಾಹ ಹಾಗೂ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ, ಮೊನ್ನೆ ಮೂಡಲಹಿಪ್ಪೆಯ ಸರ್ಕಾರಿ ಪಶು ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ, ಆ ಆಸ್ಪತ್ರೆಯಲ್ಲಿ ಒಬ್ಬರೂ ನೌಕರರು ಇಲ್ಲಾ, ಒಬ್ಬ ನೌಕರ ಡೆಪ್ಟೇಶನ್ ಮೇಲೆ ವಾರಕ್ಕೆ ೩ ದಿನ ಹೋಗುತ್ತಾರೆ. ಸಚಿವರು ಬಂದಾಗ ಇರಲಿಲ್ಲವಂತೆ, ಸಚಿವರು ದಿಢೀರ್ ಭೇಟಿ ನೀಡಿದಾಗ ಮಾಹಿತಿ ನೀಡಬೇಕು ಅಥವಾ ಅಗತ್ಯ ಮಾಹಿತಿ ಪಡೆದು ವಸ್ತುನಿಷ್ಠ ವಿಷಯವನ್ನು ಸಚಿವರಿಗೆ ತಿಳಿಸಬೇಕು ಅಲ್ವ, ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಎಸ್ ಅವರು, ಮೌನವಾದರೇ ಸಮಸ್ಯೆ ಕುರಿತು ಸಚಿವರಿಗೆ ತಿಳಿಯುವುದೂ ಹೇಗೆ, ನಮ್ಮ ವ್ಯವಸ್ಥೆ ಹೀಗಿದೆ ಎಂದರು.ಪಟ್ಟಣಕ್ಕೆ ಮೂರು ದಿನ ಲೋಕಾಯುಕ್ತರು ಬಂದು ಪರಿಶೀಲನೆ ನಡೆಸಿದ್ದಾರೆ, ನಂದೇನು ಅಭ್ಯಂತರ ಇಲ್ಲ, ಸರ್ಕಾರದಿಂದ ಕಾಮಗಾರಿಗಳನ್ನು ತಂದು ಅಭಿವೃದ್ಧಿಗೆ ಉತ್ತೇಜನ ನೀಡೋದು ಅಷ್ಟೆ ನನ್ನ ಕೆಲಸ, ಕೆಲಸ ಕ್ವಾಲಿಟಿ ಇಲ್ಲವೆಂದರೆ ಬಲಿ ಹಾಕಲಿ ಎಂದು ಸಲಹೆ ನೀಡಿದರು. ಪ್ರತಿ ತಿಂಗಳು ಒಂದು ಇಲಾಖೆಯ ಅಧಿಕಾರಗಳ ಸಭೆ ನಡೆಸಿ, ಕಳುಹಿಸಿ, ಆದರೇ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ದಿನ ಬೆಳಗ್ಗೆ ಸಂಜೆ ನಿಮ್ಮ ಕಚೇರಿಗೆ ಮೀಟಿಂಗ್ ಎಂದು ಕರೆಸಿಕೊಂಡರೇ ಜನರ ಕೆಲಸ ಯಾರು ಮಾಡುತ್ತಾರೆ. ಒಂದು ಆರ್‌ಟಿಸಿ ತೆಗೆದುಕೊಳ್ಳಲು ಆಗ್ತಿಲ್ಲ, ಸತ್ತ ವ್ಯಕ್ತಿಯ ಹೆಸರಿನಲ್ಲಿ ಪಹಣಿ ಮಾಡಿದ್ದಾರೆ, ಸತ್ತ ವ್ಯಕ್ತಿಯ ಹೆಸರಲ್ಲಿ ಇನ್ನೊಬ್ಬ ಹುಟ್ಟಿಕೊಂಡಿದ್ದಾರೆ, ಅವನಿಗೆ ಪಹಣಿ ನೀಡಿದ್ದಾರೆ ಎಂದು ಬೇಸರದಿಂದ ನುಡಿದರು. ಪೊಲೀಸ್ ಇಲಾಖೆಯಲ್ಲಿ ಒಳ್ಳೆ ರೀತಿಯ ಅಧಿಕಾರಿಗಳು ಇದ್ದಾರೆ, ಅವರಿಗೆ ಕೆಲಸ ಮಾಡಲು ಬಿಡುತ್ತಿಲ್ಲ, ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರದಿಂದ ನುಡಿದರು.ತಾಲೂಕಿನ ಪಶು ಇಲಾಖೆಯ ೨೯ ಆಸ್ಪತ್ರೆಗಳಿಗೆ ೩೩ ನೌಕರರು ಇದ್ದಾರೆ. ೧೧೭ ಹುದ್ದೆಗಳಲ್ಲಿ ೮೪ ಹುದ್ದೆಗಳು ಕಾಲಿ ಇದೆ, ಪಶು ವೈದ್ಯರು, ವೆಟನರಿ ಇನ್‌ಸ್ಪೆಕ್ಟರ್‌ಗಳು ಇಲ್ಲಾ. ಹಾಸನ ಜಿಲ್ಲೆಯ ಪಶು ಆಸ್ಪತ್ರೆಗಳ್ಲಿ ಇನ್ನೆಷ್ಟು ಹುದ್ದೆಗಳು ಖಾಲಿ ಇದೆಯೋ ಗೊತ್ತಿಲ್ಲಾ. ಇದೇ ರೀತಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಲ್ಲೂ ಅಧಿಕಾರಿಗಳು, ನೌಕರರು ಇಲ್ಲಾ ಎಂದರು. ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲೆಯಲ್ಲಿ ೩೫ ಹುದ್ದೆಗಳು ಹಾಗೂ ಪ್ರೌಢಶಾಲೆಯಲ್ಲಿ ವಿಷಯವಾರು ೨೨ ಹುದ್ದೆಗಳು ಖಾಲಿ ಇದೆ. ಗುತ್ತಿಗೆ ಶಿಕ್ಷಕರಿಗೆ ೧೨ ಸಾವಿರ ರು. ಸಂಬಳ ನೀಡುತ್ತಾರೆ. ಈ ಹೋಟೆಲ್‌ಗಳಲ್ಲಿ ಕೆಲಸ ಮಾಡುವ ನೌಕರರಿಗೆ ಊಟ ತಿಂಡಿ ನೀಡಿ, ೨೪ ಸಾವಿರ ರು. ಸಂಬಳ ನೀಡುತ್ತಾರೆ. ಆದರೆ ಡಬಲ್ ಡಿಗ್ರಿ ಮಾಡಿದ ಶಿಕ್ಷಕನಿಗೆ ೧೨ ಸಾವಿರ ರು. ಸಂಬಳ ನೀಡುತ್ತಾರೆ, ಈ ರೀತಿಯ ವ್ಯವಸ್ಥೆಯಿಂದ ಉತ್ತಮ ಶಿಕ್ಷಣ ಹೇಗೆ ನಿರೀಕ್ಷೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿ, ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ, ಕೃಷಿ ಹಾಗೂ ಪಶು ಇಲಾಖೆಯಲ್ಲಿ ಅಗತ್ಯ ನೌಕರರ ಅವಶ್ಯಕತೆ ಅನಿವಾರ್ಯವಾಗಿದೆ. ಇಲ್ಲಿ ಖಾಸಗಿ ಪಶು ಆಸ್ಪತ್ರೆಗಳು ಇಲ್ಲಾ, ವೈದ್ಯರು ಇಲ್ಲದೇ ಇರೋವಾಗ ದನಕರುಗಳ ಪರಿಸ್ಥಿತಿ ಏನಾಗಬೇಕು ಅಂತ ಪ್ರಶ್ನಿಸಿದರು.ಯಾವುದೇ ಅಹಿತಕರ ಘಟನೆ ನಡೆದರೇ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಹೊಣೆ:
ಕಳೆದ ೨೫ ವರ್ಷಗಳಿಂದ ಜಾತ್ರೆಯಲ್ಲಿ ಉಪಹಾರ, ಬಟ್ಟೆ, ರಥ ಹಾಗೂ ಹೂವಿನ ವ್ಯವಸ್ಥೆ ಮಾಡುತ್ತಿದ್ದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಪಕ್ಷದವರು ಆಕ್ಷೇಪ ವ್ಯಕ್ತಪಡಿಸಿ, ತಾಲೂಕು ಆಡಳಿತದಿಂದ ಪ್ರಸಾದ ಕೊಡಬೇಕು ಎಂದರು. ಅದೇ ರೀತಿ ತಹಸೀಲ್ದಾರ್ ಅವರು ಭಕ್ತರು ನೀಡುವ ಹಣದಿಂದ ಅಗತ್ಯ ವ್ಯವಸ್ಥೆ ಕಲ್ಪಿಸಲಿ, ನಾವು ಅಕ್ಕಿ ಕೊಡುತ್ತೇವೆ, ಆದೂ ಬೇಡವೆಂದರೆ ನಾ ಏನು ಮಾಡಲು ಸಾಧ್ಯ. ಸಭೆಯಲ್ಲಿ ರಥಕ್ಕೆ ಬಟ್ಟೆ ತೊಡಿಸುವ ವ್ಯವಸ್ಥೆ ಕುರಿತು ಚರ್ಚಿಸಿ, ಭಕ್ತರಿಂದ ಹಣ ಸಂಗ್ರಹಿಸಿ, ಬಟ್ಟೆ ತೊಡಿಸಲು ತಿಳಿಸಿದ್ದೆ ಮತ್ತು ನನಗೆ ಬಟ್ಟೆ ಹೊಲಿಸಿ ಕೊಡುತ್ತೇನೆ, ನನಗೆ ಭಕ್ತರು ನೀಡಲಿ ಎಂಬದು ಇದೆ. ಆದರೆ ಮೊನ್ನೆ ದೇವಸ್ಥಾನದ ಆವರಣದಲ್ಲಿ ನಿರ್ಣಯವನ್ನು ಪಾಲಿಸದೇ ಹೊಸ ಬಟ್ಟೆ ಹೊಲಿಸುತ್ತಿದ್ದರಂತೆ. ಗಲಾಟೆ ನಡೆದು ವಾಪಸ್ ತುಂಬಿಕೊಂಡು ಬಂದಿದ್ದಾರೆ. ಈ ಕುರಿತು ಡಿಸಿಯಿಂದ ಒತ್ತಡ ತರುತ್ತಿದ್ದಾರಂತೆ, ನಂಗೊತ್ತಿಲ್ಲ. ರಥೋತ್ಸವದ ಪ್ರಸಾದ ವಿತರಣೆಯಲ್ಲಿ ಯಾವುದೇ ರಾಜಕೀಯ ವ್ಯಕ್ತಿಗಳು ಇರಬಾರದು ಅಷ್ಟೆ. ಹಿಂದಿನಂತೆ ಪೂಜಾ ಮಹೋತ್ಸವ ನಡೆಯಬೇಕಷ್ಟೆ, ಆದರೆ ಯಾವುದೇ ಅಹಿತಕರ ಘಟನೆ ನಡೆದರೇ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಹೊಣೆ ಎಂದರು.ಪುರಸಭೆಯ ೧೦ ಪೌರ ಕಾರ್ಮಿಕರು ರಥ ನಿರ್ಮಾಣ ಕಾರ್ಯ ಮಾಡುತ್ತಿದ್ದಾರೆ, ಆದರೂ ೧.೨೦ ಲಕ್ಷ ರು. ರಥ ನಿರ್ಮಾಣಕ್ಕೆ ಎಂದು ಖರ್ಚು ಏಕೆ ಬರೆಯುತ್ತೀರಿ ಎಂದು ಪ್ರಶ್ನಿಸಿ, ಪುರಸಭೆ ಕಾರ್ಮಿಕರಿಗೆ ಹಣ ನೀಡುತ್ತಾರಾ ಎಂದು ಮುಖ್ಯಾಧಿಕಾರಿ ಶಿವಶಂಕರ್ ಅವರನ್ನು ಪ್ರಶ್ನಿಸಿ, ಇದರ ಮಾಹಿತಿ ನೀಡುವಂತೆ ಮುಜರಾಯಿ ಇಲಾಖೆ ಅಧಿಕಾರಿ ಪ್ರಭಾವತಿ ಅವರಿಗೆ ತಿಳಿಸಿದರು. ಪುರಸಭೆ, ಕಂದಾಯ, ಪಶು, ಶಿಕ್ಷಣ, ರೇಷ್ಮೆ, ನೀರಾವರಿ, ಪೊಲೀಸ್, ಜಿಪಂ, ಹಾಗೂ ಸೆಸ್ಕಾಂ ಇಲಾಖೆ ಅಧಿಕಾರಿಗಳು ಇದ್ದರು ಹಾಗೂ ತಹಸೀಲ್ದಾರ್ ಗೈರಾಗಿದ್ದರು.
====
ಫೋಟೊ ೧,
ಹೊಳೆನರಸೀಪುರದ ತಾಲೂಕು ಕಚೇರಿಯಲ್ಲಿ ಸಾಸಕ ಎಚ್.ಡಿ.ರೇವಣ್ಣ ಉಪಸ್ಥಿತಿಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಸೋಮಲಿಂಗೇಗೌಡ, ಶಿವಶಂಕರ್, ತಿಪ್ಪೆಸ್ವಾಮಿ ಇದ್ದರು.