ಜನಗಣತಿಯಲ್ಲಿ ಸಂಗ್ರಹಿಸುವ ಮಾಹಿತಿಯನ್ನು ಗೌಪ್ಯವಾಗಿರಲಿದ್ದು, ಗಣತಿದಾರರು ನೇರವಾಗಿ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಫೋನ್ ಅಥವಾ ಇತರೆ ಯಾವುದೇ ಮಾರ್ಗದಲ್ಲಿ ಸಂಪರ್ಕಿಸಿ ಒಟಿಪಿ ಸೇರಿದಂತೆ ಮಾಹಿತಿ, ದಾಖಲೆ ಕೇಳುವುದಿಲ್ಲ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಜನಗಣತಿಯಲ್ಲಿ ಸಂಗ್ರಹಿಸುವ ಮಾಹಿತಿಯನ್ನು ಗೌಪ್ಯವಾಗಿರಲಿದ್ದು, ಗಣತಿದಾರರು ನೇರವಾಗಿ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಫೋನ್ ಅಥವಾ ಇತರೆ ಯಾವುದೇ ಮಾರ್ಗದಲ್ಲಿ ಸಂಪರ್ಕಿಸಿ ಒಟಿಪಿ ಸೇರಿದಂತೆ ಮಾಹಿತಿ, ದಾಖಲೆ ಕೇಳುವುದಿಲ್ಲ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜನಗಣತಿ 2027ರ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಎರಡು ಹಂತದಲ್ಲಿ ಜನಗಣತಿ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. ಮೊದಲ ಹಂತ ಏ.1 ರಿಂದ ಜನಗಣತಿ ಪ್ರಕ್ರಿಯೆ ಆರಂಭವಾಗಲಿದೆ. ಎರಡನೇ ಹಂತವು 2027ರ ಫೆಬ್ರವರಿಯಲ್ಲಿ ನಡೆಯಲಿದೆ. ಏಪ್ರಿಲ್ 1 ರಿಂದ 15ರ ವರೆಗೆ ಸ್ವಯಂ ಗಣತಿ ಪ್ರಕ್ರಿಯೆ ನಡೆಯಲಿದೆ. ಏ.16ರಿಂದ ಮೇ 15ರವರೆಗೆ ಮನೆ ಪಟ್ಟಿ ಸಿದ್ಧಪಡಿಸಲಾಗುವುದು. ಮೊದಲ ಹಂತದ ಪ್ರಕ್ರಿಯೆ ಏಪ್ರಿಲ್‌ನಿಂದ ಸೆಪ್ಟಂಬರ್ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಜನಗಣತಿಯು ದೇಶದ ಜನಸಂಖ್ಯೆಯ ಗಣತಿಯ ಜತೆಗೆ ದೇಶದ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳು ಮತ್ತು ಸಾಂಸ್ಕೃತಿಕ ವೈವಿಧತೆಯನ್ನು ದಾಖಲಿಸುವ ವೈಜ್ಞಾನಿಕ ಪ್ರಕ್ರಿಯೆಯಾಗಿದ್ದು, ಭಾರತದ ಮೊದಲ ಡಿಜಿಟಲ್ ಜನಗಣತಿ ನಡೆಸಲಾಗುತ್ತಿದೆ ಎಂದು ವಿವರಿಸಿದರು.2500 ಮಂದಿ ಅಧಿಕಾರಿ ಸಿಬ್ಬಂದಿ ನಿಯೋಜನೆ
ಜಿಲ್ಲೆಯಲ್ಲಿ ಮೊದಲ ಹಂತದ ಗಣತಿ ಕಾರ್ಯಕ್ಕೆ 2528 ಗಣತಿ ಬ್ಲಾಕ್ ನಿರ್ಮಿಸಲಾದ್ದ್ದು, 2220 ಗಣತಿದಾರರು ಹಾಗೂ 380 ಮೇಲ್ವಿಚಾರಕರನ್ನು ನಿಯೋಜನೆ ಮಾಡಲಾಗಿದೆ. ಆರೋಗ್ಯ, ಶಿಕ್ಷಣ, ಕಂದಾಯ, ಕೃಷಿ, ತೋಟಗಾರಿಕೆ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿ ಸಿಬ್ಬಂದಿಯನ್ನು ಗಣತಿ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.ಸ್ವಯಂ ಗಣತಿ ಹೇಗೆ?
ಸ್ವಯಂ ಗಣತಿ ಪ್ರಕ್ರಿಯೆಯಲ್ಲಿ ಮನೆ ಮಾಲೀಕರು ಅಥವಾ ಒಬ್ಬ ಸದಸ್ಯರು www.se.census,gov.in ವೆಬ್ ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡು 34 ಪ್ರಶ್ನಾವಳಿಗೆ ಉತ್ತರಿಸಬಹುದಾಗಿದೆ. ಏ.16 ರಿಂದ ಗಣತಿದಾರರು ಮನೆಗೆ ಬಂದಾಗ ಮಾಹಿತಿ ದಾಖಲಿಸಿದ ಸದಸ್ಯರ ದಾಖಲಾತಿ ತೋರಿಸಿದರೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.ಉಳಿದಂತೆ ಯಾವುದೇ ಗಣತಿದಾರರು ಫೋನ್, ಸಾಮಾಜಿಕ ಜಾಲತಾಣ ಸೇರಿದಂತೆ ಇತರೆ ಮಾರ್ಗದಲ್ಲಿ ಸಾರ್ವಜನಿಕರನ್ನು ಸಂಪರ್ಕಿಸುವುದಕ್ಕೆ ಅವಕಾಶ ಇರುವುದಿಲ್ಲ. ಜತೆಗೆ, ಒಟಿಪಿ ಸೇರಿದಂತೆ ಯಾವುದೇ ದಾಖಲೆ ಕೇಳುವುದಿಲ್ಲ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವುದರೊಂದಿಗೆ, ಮನೆ ಬಾಗಿಲಿಗೆ ಬರುವ ಸರ್ಕಾರ ನಿಯೋಜಿಸಿದ ಗಣತಿದಾರರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮೊಬೈಲ್ ಆ್ಯಪ್ ಮೂಲಕ ಗಣತಿಈ ಹಿಂದೆ ಜನಗಣತಿ ಸಮಯದಲ್ಲಿ ಪೇಪರ್‌ದಲ್ಲಿ ಮಾಹಿತಿ ಸಂಗ್ರಹಿಸಿ ನಂತರ ಡೇಟಾ ಎಂಟ್ರಿ ಮಾಡುವ ಕಾರ್ಯ ಆಗುತ್ತಿತ್ತು. ಈ ಬಾರಿ ಮೊಬೈಲ್ ಆ್ಯಪ್ ಸಿದ್ದಪಡಿಸಲಾಗಿದ್ದು, ದಾಖಲಿಸುವ ಮಾಹಿತಿ ನೇರವಾಗಿ ದಾಖಲಾಗಲಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಗೌರವಶೆಟ್ಟಿ ಇದ್ದರು.34 ಪ್ರಶ್ನಾವಳಿ ಹೇಗಿದೆ?
ಸ್ಥಳದ ವಿವರಗಳನ್ನು (ರಾಜ್ಯ, ಜಿಲ್ಲೆ, ತಾಲ್ಲೂಕು, ಪಟ್ಟಣ/ಗ್ರಾಮ/ ನಗರ ಇತ್ಯಾದಿ) ಕಡ್ಡಾಯವಾಗಿ ನಮೂದಿಸಬೇಕು. ಸ್ಥಳವನ್ನು ನಿಖರವಾಗಿ ಗುರುತಿಸಲು ಪಿನ್‌ಕೋಡ್ ಮತ್ತು ಡಿಜಿಟಲ್ ಮ್ಯಾಪ್ ಮೂಲಕ ಮನೆಯ ಸ್ಥಳವನ್ನು ಗುರುತಿಸುವ ವ್ಯವಸ್ಥೆ ಇರುತ್ತದೆ. ಕಚ್ಚಾ ಮನೆ ಅಥವಾ ಪಕ್ಕಾ ಮನೆ?, ಗೋಡೆಗೆ ಬಳಸಿದ ವಸ್ತು, ಮೇಲ್ಚಾವಣಿಗೆ ಬಳಸಿದ ವಸ್ತು?, ಅಡುಗೆಗೆ ಎಲ್‌ಪಿಜಿ ಅಥವಾ ಪಿಎನ್‌ಜಿ? ಅಡಿಗೆ ಬಳಸುವ ಇಂಧನ?, ಶೌಚಾಲಯ?, ಇಂಟರ್‌ನೆಟ್ ಸೌಲಭ್ಯ, ದೂರವಾಣಿ, ಮೊಬೈಲ್, ಟಿವಿ, ಇದೆಯಾ ಸೇರಿದಂತೆ ಮೊದಲಾದ ಪ್ರಶ್ನೆ ಕೇಳಲಾಗುತ್ತದೆ.ಅಲ್ಲದೇ, ಕನ್ನಡ, ಇಂಗ್ಲಿಷ್ ಸೇರಿದಂತೆ ಪ್ರಮುಖ ಭಾಷೆಯಲ್ಲಿ ಪ್ರಶ್ನಾವಳಿ ಇರಲಿದೆ. ಸಾರ್ವಜನಿಕರು ತಮಗೆ ಅನುಕೂಲವಾಗುವ ಭಾಷೆ ಆಯ್ಕೆ ಮಾಡಿಕೊಂಡು ಉತ್ತರಿಸಬಹುದಾಗಿದೆ.
ಗಣತಿದಾರರು ಆಗಮಿಸಿದ ವೇಳೆ ನೈಜವಾದ ಮಾಹಿತಿ ನೀಡಿ, ಮಾಹಿತಿ ನೀಡುವುದರಿಂದ ರೇಷನ್ ಕಾರ್ಡ್ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯ ನಿಂತು ಹೋಗಲಿದೆ ಎಂಬ ಆತಂಕ ಬೇಡ. ಸಂಗ್ರಹಿಸುವ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ಸೇರಿದಂತೆ ಯಾವುದೇ ಸಂಸ್ಥೆಗೆ ಹಂಚಿಕೊಳ್ಳುವುದಿಲ್ಲ. ಗೌಪ್ಯವಾಗಿ ಇಡಲಾಗುವುದು.
ಎನ್.ಎಂ.ನಾಗರಾಜ್ ಜಿಲ್ಲಾಧಿಕಾರಿ, ಚಿಕ್ಕಮಗಳೂರುತಾಲೂಕುವಾರು ಗಣತಿದಾರರು ಮತ್ತು ಮೇಲ್ವಿಚಾರಕರ ನಿಯೋಜನೆ ವಿವರ
ತಾಲೂಕುಬ್ಲಾಕ್‌ಗಣತಿದಾರರು ಮೇಲ್ವಿಚಾರಕರುಶೃಂಗೇರಿ 88 82 17
ಕೊಪ್ಪ 169 165 28ಎನ್‌ಆರ್‌ಪುರ 131 126 24
ತರೀಕೆರೆ 337 284 48ಅಜ್ಜಂಪುರ 200 147 25
ಕಡೂರು 663 512 86ಚಿಕ್ಕಮಗಳೂರು 666 623 104
ಮೂಡಿಗೆರೆ 213 212 36ಕಳಸ 61 70 12