ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ಗ್ರಾಮಗಳ ಅಭಿವೃದ್ಧಿಯ ವಿಷಯ ಬಂದಾಗ ಗ್ರಾಮದ ಎಲ್ಲ ಮುಖಂಡರು, ರಾಜಕೀಯ ಬಿಟ್ಟು, ಗ್ರಾಮದ ಅಭಿವೃದ್ಧಿ ಕಡೆ ಗಮನ ಹರಿಸಬೇಕು. ಈ ವಿಷಯದಲ್ಲಿ ಶಿರಗುಪ್ಪಿ ಗ್ರಾಮದ ಮುಖಂಡರು ಇತರರಿಗೆ ಮಾದರಿಯಾಗಿದ್ದು, ಗ್ರಾಮದ ಅಭಿವೃದ್ಧಿಗಾಗಿ ಪಕ್ಷಾತೀತವಾದ ಅವರ ಪರಿಶ್ರಮ ಮೆಚ್ಚಲೇಬೇಕೆಂದು ಶಾಸಕ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ ಹೇಳಿದರು.ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಪಂನಲ್ಲಿ ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆಯ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯ ಅಡಿಗೆ ಸಹಾಯಕರಿಗೆ ಸಂಜೀವಿನಿ ಸ್ವ-ಸಹಾಯ ಸಂಘದ ಮಹಿಳೆಯರಿಂದ ತಯಾರಿಸಿದ ಅಫ್ರನ್ ಸಮವಸ್ತ್ರ ವಿತರಣೆ ಮಾಡಿ, ಮಾತನಾಡಿ, ಶಿರಗುಪ್ಪಿ ಗ್ರಾಮವು ಅಭಿವೃದ್ಧಿಯಲ್ಲಿಯೇ ವಿಶೇಷ ಸಾಧನೆ ಮಾಡಿ, ಅಂತರರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮಟ್ಟದ ಅನೇಕ ಪ್ರಶಸ್ತಿಗಳನ್ನು ಪಡೆದು, ದೇಶದ ಗಮನ ಸೆಳೆದಿದೆ ಎಂದರು.ಕಾಗವಾಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ಅಕಿವಾಟೆ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಅಕ್ಕಾತಾಯಿ ಪೂಜಾರಿ, ಉಪಾಧ್ಯಕ್ಷ ರಾಮಗೌಡ ಪಾಟೀಲ, ಪಿಎಂ ಪೋಷಣ, ಶಕ್ತಿ ನಿರ್ಮಾಣ ಯೋಜನೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ನಾಮದಾರ, ಕೇತ್ರ ಸಮನ್ವಯ ಅಧಿಕಾರಿ ಪ್ರವೀಣ ಮದಭಾವಿ, ಎನ್‌ಆರ್‌ಎಲ್‌ಎಂ ಶಾಖೆಯ ಅಧಿಕಾರಿ ಆನಂದ ವಂಟಗೂಡೆ, ಪಿಡಿಒ ಶಿಲ್ಪಾ ನಾಯಿಕವಾಡಿ, ಮುಖಂಡರಾದ ಅಜೀತ ಪೂಜಾರಿ, ಸುಭಾಷ ಪಾಟೀಲ, ಭೀಮು ಅಕಿವಾಟೆ, ರಾಜು ಚೌಗುಲಾ, ಶೇಖರ ಪಾಟೀಲ, ಮಲಗೌಡ ಪಾಟೀಲ, ಬಾಳಗೌಡ ಪಾಟೀಲ, ಡಾ.ಅಮೋಲ ಸರಡೆ, ಪಂಡಿತ ವಡ್ಡರ, ಸಂತೋಶ ಶಿರಗಾಂವೆ, ರಾಜು ಘಾಟಗೆ, ಭಾವುಸಾಬ ಕಾಗವಾಡೆ, ಇಕ್ಬಾಲ್ ಕನವಾಡೆ, ಮಹ್ಮದ ಗೌಂಡಿ, ಕಮಲಾಬಾಯಿ ಎಂಗಟ್ಯಾಪ್ಪಗೋಳ, ಗ್ರಾಮದ ಮುಖಂಡರು, ಗ್ರಾಪಂ ಸದಸ್ಯರು, ಗ್ರಾಮಸ್ಥರು, ಮಹಿಳಾ ಒಕ್ಕೂಟದ ಸದಸ್ಯೆಯರು, ಮಹಿಳೆಯರು ಇದ್ದರು. ಪಿಡಿಒ ಶಿಲ್ಪಾ ನಾಯಿಕವಾಡಿ ಸ್ವಾಗತಿಸಿದರು. ಕೃಷ್ಣಾ ಐಹೊಳೆ ನಿರೂಪಿಸಿ, ವಂದಿಸಿದರು.